ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2022ರ ಟಿ20 ವಿಶ್ವಕಪ್‌ಗೆ ದಿನಾಂಕ ನಿಗದಿ: ನ.13ರಂದು ಮೆಲ್ಬರ್ನ್‌ನಲ್ಲಿ ಫೈನಲ್

Last Updated 16 ನವೆಂಬರ್ 2021, 6:27 IST
ಅಕ್ಷರ ಗಾತ್ರ

ಮೆಲ್ಬರ್ನ್: ಆಸ್ಟ್ರೇಲಿಯಾದಲ್ಲಿ ನಿಗದಿಯಾಗಿರುವ ಮುಂದಿನ ಟಿ20 ವಿಶ್ವಕಪ್ ಟೂರ್ನಿಯು 2022ರ ಅಕ್ಟೋಬರ್ 16ರಂದು ಆರಂಭವಾಗಲಿದೆ. ಏಳು ಕ್ರೀಡಾಂಗಣಗಳಲ್ಲಿ ಪಂದ್ಯಗಳು ನಡೆಯಲಿದ್ದು, ಫೈನಲ್‌ ಪಂದ್ಯಕ್ಕೆ ನವೆಂಬರ್ 13ರಂದು ಮೆಲ್ಬರ್ನ್ ಕ್ರಿಕೆಟ್ ಗ್ರೌಂಡ್‌ (ಎಂಸಿಜಿ) ವೇದಿಕೆಯಾಗಲಿದೆ.

ಅಡಿಲೇಡ್, ಬ್ರಿಸ್ಬೇನ್, ಗಿಲಾಂಗ್, ಹೋಬರ್ಟ್‌, ಮೆಲ್ಬರ್ನ್, ಪರ್ತ್ ಹಾಗೂ ಸಿಡ್ನಿಯಲ್ಲಿ ಅ. 16ರಿಂದ ನ. 13ರ ವರೆಗೆ ಒಟ್ಟು 45 ಹಣಾಹಣಿ ನಡೆಯಲಿವೆ.ಸಿಡ್ನಿ ಮತ್ತು ಅಡಿಲೇಡ್ ಕ್ರೀಡಾಂಗಣಗಳಲ್ಲಿ ನವೆಂಬರ್9 ಮತ್ತು 10ರಂದು ಸೆಮಿಫೈನಲ್ಸ್‌ ನಿಗದಿಯಾಗಿವೆ.

2021ರ ಟಿ20 ವಿಶ್ವಕಪ್ ಚಾಂಪಿಯನ್ ಆಸ್ಟ್ರೇಲಿಯಾ, ರನ್ನರ್–ಅಪ್ ನ್ಯೂಜಿಲೆಂಡ್ ಜೊತೆಗೆ ಭಾರತ, ಅಫ್ಗಾನಿಸ್ತಾನ, ಬಾಂಗ್ಲಾದೇಶ, ಇಂಗ್ಲೆಂಡ್, ಪಾಕಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಸೂಪರ್–12 ಹಂತಕ್ಕೆ ನೇರ ಪ್ರವೇಶ ಪಡೆದಿವೆ. ಉಳಿದ ನಾಲ್ಕು ತಂಡಗಳು ಗುಂಪು ಹಂತದಲ್ಲಿ ಸೆಣಸಿ ಅರ್ಹತೆ ಗಿಟ್ಟಿಸಲಿವೆ.

2012 ಮತ್ತು 2016ರಲ್ಲಿಚಾಂಪಿಯನ್ ಆಗಿರುವ ವೆಸ್ಟ್‌ಇಂಡೀಸ್, 2014ರಲ್ಲಿ ಪ್ರಶಸ್ತಿ ಗೆದ್ದಿದ್ದ ಶ್ರೀಲಂಕಾ, 2021ರ ಟೂರ್ನಿಯ ಸೂಪರ್-12 ಹಂತದಲ್ಲಿ ಆಡಿರುವ ನಮೀಬಿಯಾ ಮತ್ತು ಸ್ಕಾಟ್ಲೆಂಡ್‌ ಗುಂಪು–1ರಲ್ಲಿ ಸೆಣಸಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT