‘ಕೆಟ್ಟ ವರ್ತನೆಯ ಒಳ್ಳೆಯ ಆಟಗಾರ’: ಕೊಹ್ಲಿ ಬಗ್ಗೆ ನಟ ನಾಸಿರುದ್ದೀನ್ ಶಾ ಹೇಳಿಕೆ

7

‘ಕೆಟ್ಟ ವರ್ತನೆಯ ಒಳ್ಳೆಯ ಆಟಗಾರ’: ಕೊಹ್ಲಿ ಬಗ್ಗೆ ನಟ ನಾಸಿರುದ್ದೀನ್ ಶಾ ಹೇಳಿಕೆ

Published:
Updated:

ಬೆಂಗಳೂರು: ‘ವಿರಾಟ್ ಕೊಹ್ಲಿ ಒಳ್ಳೆಯ ಆಟಗಾರ. ಆದರೆ ಕೆಟ್ಟ ವರ್ತನೆಯ ವ್ಯಕ್ತಿ. ಅವರ ಸ್ವಭಾವದಿಂದಾಗಿ ಪ್ರತಿಭೆ ಮಂಕಾಗುತ್ತಿದೆ...’ ನಟ ನಾಜರುದ್ದೀನ್ ಶಾ ಅವರ ಈ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ವಿರಾಟ್ ಕೊಹ್ಲಿ ಅಭಿಮಾನಿಗಳು ಸಾಮಾಜಿಕ ತಾಣಗಳಲ್ಲಿ ನಾಸಿರುದ್ದೀನ್‌ ಶಾ ಅವರನ್ನು ಜರೆದಿದ್ದಾರೆ. ಕೆಲವೇ ಕೆಲವರು ಅವರನ್ನು ಬೆಂಬಲಿಸಿದ್ದಾರೆ.

‘ಭಾರತದ ಆಟಗಾರರನ್ನು ಬೆಂಬಲಿಸದವರು ದೇಶದಲ್ಲಿ ಇರಲು ಅರ್ಹರಲ್ಲ’ ಎಂದು ಇತ್ತೀಚೆಗೆ ವಿರಾಟ್ ಕೊಹ್ಲಿ ಹೇಳಿದ್ದರು. ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟೆಸ್ಟ್ ಕ್ರಿಕೆಟ್ ಸರಣಿಯಲ್ಲಿ ವಿರಾಟ್‌ ಕೊಹ್ಲಿ ಅವರು ಸಂಭ್ರಮಿಸುವ ರೀತಿಯೂ ‘ಅತಿ’ಯಾಗಿದೆ ಎಂಬ ಟೀಕೆಗಳೂ ಕೇಳಿ ಬಂದಿವೆ. ಈ ಹಿನ್ನೆಲೆಯಲ್ಲಿ ಫೇಸ್‌ ಬುಕ್‌ನಲ್ಲಿ ಶಾ ಪೋಸ್ಟ್ ಹಾಕಿದ್ದಾರೆ.

‘ದೇಶ ತೊರೆಯುವ ಉದ್ದೇಶದಿಂದ ನಾನು ಈ ಹೇಳಿಕೆ ನೀಡುತ್ತಿಲ್ಲ’ ಎಂದೂ ಅವರು ಛೇಡಿಸಿದ್ದಾರೆ. ತಕ್ಷಣ ಪ್ರತಿಕ್ರಿಯೆ ನೀಡಿರುವ ಕೊಹ್ಲಿ ಅಭಿಮಾನಿಗಳು ‘ಆಸ್ಟ್ರೇಲಿಯಾದಲ್ಲಿ ಪಂದ್ಯಗಳನ್ನು ಗೆಲ್ಲಬೇಕಾದರೆ ಇಂಥ ಅತಿಯಾದ ವರ್ತನೆ ಬೇಕಾಗುತ್ತದೆ’ ಎಂದು ಹೇಳಿದ್ದಾರೆ.

‘ನೀವು ದೊಡ್ಡ ನಟ. ಆದರೆ ಕೊಹ್ಲಿ ಕುರಿತ ಹೇಳಿಕೆಯನ್ನು ಒಪ್ಪಲಾಗದು’ ಎಂದು ಅತನು ಸಿನ್ಹಾ ರಾಯ್‌ ಎಂಬುವರು ಹೇಳಿದ್ದರೆ, ಅಕ್ಷಯ್‌ ಗುಪ್ತಾ ಎಂಬುವರು ‘ಈ ಹೇಳಿಕೆಯನ್ನು ತಳ್ಳಿ ಹಾಕುತ್ತೇವೆ’ ಎಂದಿದ್ದಾರೆ. ‘ಶಾ ಅವರು ಅವರದೇ ಕ್ಷೇತ್ರದವರ ಬಗ್ಗೆ ಇದನ್ನು ಹೇಳಿದ್ದರೆ ಒಪ್ಪಬಹುದಾಗಿತ್ತು’ ಎಂದು ಸುಜನಾ ನಾಯಕ್‌ ಟೀಕಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 10

  Happy
 • 2

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !