ಶುಕ್ರವಾರ, ಜುಲೈ 30, 2021
20 °C

ಪಾಕ್‌ ಕ್ರಿಕೆಟಿಗ ಶಾಹಿದ್‌ ಆಫ್ರಿದಿಗೆ ಕೋವಿಡ್‌–19 ದೃಢ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಕರಾಚಿ: ಪಾಕಿಸ್ತಾನದ ಹಿರಿಯ ಕ್ರಿಕೆಟಿಗ ಶಾಹಿದ್‌ ಆಫ್ರಿದಿ ಅವರಿಗೆ ಕೋವಿಡ್‌–19 ದೃಢಪಟ್ಟಿದೆ. ಈ ವಿಷಯವನ್ನು ಶನಿವಾರ ಅವರೇ ಹೇಳಿಕೊಂಡಿದ್ದಾರೆ. ಈ ಮೂಲಕ ಕೊರೊನಾ ಸೋಂಕಿಗೆ ಒಳಗಾದ ಮೊದಲ ಪ್ರಮುಖ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ.

‘ಗುರುವಾರ ಅನಾರೋಗ್ಯ ಕಾಣಿಸಿಕೊಂಡಿತ್ತು. ದೇಹದಲ್ಲಿ ವಿಪರೀತ ನೋವಿತ್ತು. ತಪಾಸಣೆಗೆ ಒಳಗಾದಾಗ ಕೋವಿಡ್‌ ಇರುವುದು ದೃಢಪಟ್ಟಿದೆ. ಶೀಘ್ರ ಗುಣಮುಖನಾಗಲು ಪ್ರಾರ್ಥಿಸುತ್ತೇನೆ. ಇನ್ಷಾ ಅಲ್ಲಾ’ ಎಂದು ಆಫ್ರಿದಿ ಟ್ವೀಟ್‌ ಮಾಡಿದ್ದಾರೆ.

ಪಾಕಿಸ್ತಾನ ತಂಡದ ಪರ 27 ಟೆಸ್ಟ್‌, 398 ಏಕದಿನ ಹಾಗೂ 99 ಟ್ವೆಂಟಿ–20 ಪಂದ್ಯಗಳಲ್ಲಿ ಆಫ್ರಿದಿ ಆಡಿದ್ದಾರೆ.

1996ರಲ್ಲಿ ಶಾಹಿದ್‌ ಅಫ್ರಿದಿ ಪಾಕಿಸ್ತಾನ ಕ್ರಿಕೆಟ್‌ ತಂಡಕ್ಕೆ ಅರ್ಹತೆ ಪಡೆದರು. ಆರಂಭಿಕ ಬ್ಯಾಟ್ಸ್‌ಮನ್‌ ಆಗಿ ವೃತ್ತಿ ಕ್ರಿಕೆಟ್‌ ಆರಂಭಿಸಿದ ಅವರು ಆಲ್–ರೌಂಡರ್‌ ಆಗಿ ಬೆಳವಣಿಗೆ ಕಂಡರು. ಅವರು ಟೆಸ್ಟ್‌ನಲ್ಲಿ 1,716, ಏಕದಿನ ಪಂದ್ಯಗಳಲ್ಲಿ 8,064 ಹಾಗೂ ಟಿ20 ಪಂದ್ಯಗಳಲ್ಲಿ 1,416 ರನ್‌ ಗಳಿಸಿದ್ದಾರೆ.

ಲೆಗ್‌ ಸ್ಪಿನ್‌ ಬೌಲಿಂಗ್‌ ಮೂಲಕ ಟೆಸ್ಟ್‌, ಏಕದಿನ ಹಾಗೂ ಟಿ20ಯಲ್ಲಿ ಕ್ರಮವಾಗಿ 48, 395, 98 ವಿಕೆಟ್‌ಗಳನ್ನು ಗಳಿಸಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು