ಶುಕ್ರವಾರ, ಅಕ್ಟೋಬರ್ 23, 2020
22 °C

ಐಪಿಎಲ್‌ನಂತಹ ದೊಡ್ಡ ವೇದಿಕೆಯಿಂದ ಪಾಕ್ ಆಟಗಾರರು ವಂಚಿತ: ಶಾಹೀದ್ ಆಫ್ರಿದಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಕರಾಚಿ :ಇಂಡಿಯನ್ ಪ್ರೀಮಿಯರ್ ಲೀಗ್ ಟಿ20 ಕ್ರಿಕೆಟ್‌ ಟೂರ್ನಿಯಂತಹ ಒಂದು ದೊಡ್ಡ ವೇದಿಕೆಯಲ್ಲಿ ಆಡುವ ಅವಕಾಶದಿಂದ ಪಾಕಿಸ್ತಾನ ತಂಡದ ಆಟಗಾರರು ವಂಚಿತರಾಗಿದ್ದಾರೆ ಎಂದು ಮಾಜಿ ಕ್ರಿಕೆಟಿಗ ಶಾಹೀದ್ ಆಫ್ರಿದಿ ಬೇಸರ ವ್ಯಕ್ತಪಡಿಸಿದ್ದಾರೆ.

‘ನಮ್ಮ ದೇಶದ ಬಾಬರ್ ಆಜಂ ಅವರಂತಹ ಆಟಗಾರರಿಗೆ ಐಪಿಎಲ್‌ನಲ್ಲಿ ಆಡುವ ಅವಕಾಶ ಲಭಿಸಿದರೆ ಉತ್ತಮವಾಗಿರುತ್ತದೆ. ಅವರಿಗೂ ಒಳ್ಳೆಯ ಅನುಭವ ಸಿಗುತ್ತದೆ. ಅಂತಹ ಪ್ರತಿಷ್ಠಿತ ಟೂರ್ನಿಯಲ್ಲಿ ಆಡಿ ಯಶಸ್ವಿಯಾಗುವ ಸಾಮರ್ಥ್ಯವಿರುವ ಆಟಗಾರರಿದ್ದಾರೆ. ಆದರೆ, ದುರದೃಷ್ಟವಶಾತ್ ಸದ್ಯದ ಪರಿಸ್ಥಿತಿ ಮತ್ತು ನಿಯಮಗಳಿಂದಾಗಿ ಹಿನ್ನಡೆಯಾಗುತ್ತಿದೆ’ ಎಂದು ಪಾಕ್‌ ಮಾಧ್ಯಮ ಸಂದರ್ಶನದಲ್ಲಿ ಹೇಳಿದ್ದಾರೆ.

‘ಪ್ರಪಂಚದ ಬೇರೆಲ್ಲ ಕ್ರಿಕೆಟ್‌ ಲೀಗ್‌ಗಳಲ್ಲಿ ಪಾಕ್‌ ಆಟಗಾರರಿಗೆ ಬೇಡಿಕೆ ಇದೆ. ನಮ್ಮದೇ ದೇಶದಲ್ಲಿ ಉತ್ತಮವಾದ ಪಾಕಿಸ್ತಾನ ಕ್ರಿಕೆಟ್ ಲೀಗ್ ಇರುವುದೂ ಸಂತಸದ ಸಂಗತಿ. ಆಟಗಾರರಿಗೆ ತಮ್ಮ ಪ್ರತಿಭೆ ಸಾಬೀತುಪಡಿಸಲು ಈ ಲೀಗ್‌ಗಳು ಉತ್ತಮ ವೇದಿಕೆಗಳು’ ಎಂದು ಪಾಕ್ ತಂಡದ ಮಾಜಿ ನಾಯಕ ಆಫ್ರಿದಿ ಹೇಳಿದ್ದಾರೆ.

‘ನಾನು ಭಾರತದಲ್ಲಿ ಬಹಳಷ್ಟು ಪಂದ್ಯಗಳಲ್ಲಿ ಆಡಿದ್ದೇನೆ. ಅಲ್ಲಿಯ ಜನರು ತೋರಿದ ಪ್ರೀತಿ ಮತ್ತು ವಿಶ್ವಾಸವನ್ನು ಸದಾ ಸ್ಮರಿಸುತ್ತೇನೆ. ನಾನು ಈಗಲೂ ಸಾಮಾಜಿಕ ಜಾಲತಾಣಗಳಲ್ಲಿ ಬರೆಯುವ ಹೇಳಿಕೆಗಳಿಗೆ ಭಾರತದ ಹಲವು ಅಭಿಮಾನಿಗಳು ಪ್ರತಿಕ್ರಿಯಿಸುತ್ತಾರೆ’ ಎಂದು ಆಫ್ರಿದಿ ಹೇಳಿದರು.

ಭಾರತ ಮತ್ತು ಪಾಕಿಸ್ತಾನ ನಡುವಣದ ವಿಷಮ ಸಂಬಂಧದ ಕಾರಣ ಐಪಿಎಲ್‌ನಲ್ಲಿ ಪಾಕಿಸ್ತಾನ ಆಟಗಾರರನ್ನು ಪರಿಗಣಿಸಲಾಗುತ್ತಿಲ್ಲ.

 

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು