ಭಾನುವಾರ, ಸೆಪ್ಟೆಂಬರ್ 15, 2019
30 °C

ಅಶಿಸ್ತು: ಕ್ರಿಕೆಟಿಗ ಶೆಹಜಾದ್‌ ಅಮಾನತು

Published:
Updated:
Prajavani

ಕಾಬೂಲ್‌: ಅಶಿಸ್ತು ತೋರಿದ ಕಾರಣ ವಿಕೆಟ್‌ ಕೀಪರ್‌ ಮೊಹಮ್ಮದ್‌ ಶೆಹಜಾದ್‌ ಅವರನ್ನು ಅಫ್ಗಾನಿಸ್ತಾನ ಕ್ರಿಕೆಟ್‌ ಮಂಡಳಿಯು (ಎಸಿಬಿ) ಎಲ್ಲ ಮಾದರಿಯ ಕ್ರಿಕೆಟ್‌ನಿಂದ ಒಂದು ವರ್ಷ ಅಮಾನತು ಮಾಡಿದೆ. 

ನೀತಿ ಸಂಹಿತೆ ಉಲ್ಲಂಘಿಸಿದ ಕಾರಣ ಈ ಹಿಂದೆ ಶೆಹಜಾದ್‌ರನ್ನು ಅನಿರ್ದಿಷ್ಟ ಅವಧಿಗೆ ಅಮಾನತುಗೊಳಿಸಲಾಗಿತ್ತು.

‘ಶೆಹಜಾದ್‌ ಎಸಿಬಿಯ ನಿಯಮ ಗಳನ್ನು ಉಲ್ಲಂಘಿ ಸಿದ್ದಾರೆ. ನೀತಿ ಸಂಹಿತೆಗೂ ಬದ್ಧರಾ ಗಿಲ್ಲ. ಅನುಮತಿ ಪಡೆ ಯದೇ ಹಲವು ಬಾರಿ ವಿದೇಶಕ್ಕೆ ತೆರಳಿ ದ್ದಾರೆ’ ಎಂದು ಎಸಿಬಿ ಹೇಳಿಕೆಯಲ್ಲಿ ತಿಳಿಸಿದೆ.

Post Comments (+)