ಕ್ರಿಕೆಟ್ ಜಗತ್ತನ್ನು ಆಘಾತಕ್ಕೀಡುಮಾಡಿದ್ದ ಸ್ಪಿನ್ ದಿಗ್ಗಜ ಶೇನ್ ವಾರ್ನ್ ಅವರು ಮೃತಪಟ್ಟು ನಾಲ್ಕು ವರ್ಷ ಕಳೆದಿದೆ. ಇದೀಗ ಅವರ ಪುತ್ರ ಜಾಕ್ಸನ್ ವಾರ್ನ್ ಸ್ಫೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ.

‘ನಮ್ಮ ತಂದೆಯ ಸಾವಿಗೆ ಬಹುಶಃ ಅವರು ಕೆಲಸದ ನಿಮಿತ್ತ ಪಡೆಯಲೇಬೇಕಾದ ಒತ್ತಡಕ್ಕೆ ಸಿಲುಕಿ ಮೂರು ಅಥವಾ ನಾಲ್ಕು ಡೋಸ್ ಕೋವಿಡ್ ಲಸಿಕೆ ಪಡೆದಿದ್ದೆ ಕಾರಣ’ ಎಂದು ಜಾಕ್ಸನ್ ಪ್ರತಿಪಾದಿಸಿದ್ದಾರೆ.

2022ರ ಮಾರ್ಚ್ನಲ್ಲಿ ಥೈಲ್ಯಾಂಡ್ನ ಕೊ ಸಮುಯಿ ದ್ವೀಪದಲ್ಲಿ ವಿಹರಿಸುತ್ತಿದ್ದ ವೇಳೆ ಶೇನ್ ವಾರ್ನ್ ಹೃದಯಾಘಾತದಿಂದ ನಿಧನರಾಗಿದ್ದರು.

‘2 ವರ್ಲ್ಡ್ಸ್ ಕೊಲೈಡ್’ ಪಾಡ್ಕ್ಯಾಸ್ಟ್ನಲ್ಲಿ ಮಾತನಾಡಿದ ಜಾಕ್ಸನ್, ‘ನಮ್ಮ ತಂದೆ ಸಾವಿನಲ್ಲಿ ಖಂಡಿತವಾಗಿಯೂ ಕೋವಿಡ್ ಲಸಿಕೆ ಪಾತ್ರವಿದೆ ಎಂದು ನಾನು ಭಾವಿಸುತ್ತೇನೆ. ಈಗ ಇದನ್ನು ಹೇಳುವುದು ವಿವಾದಾತ್ಮಕ ಎಂದು ನನಗನ್ನಿಸುವುದಿಲ್ಲ. ತಂದೆಯವರಿಗೆ ಮೊದಲೇ ಆರೋಗ್ಯ ಸಮಸ್ಯೆಗಳಿದ್ದರೂ ಕೋವಿಡ್ ಲಸಿಕೆಯಿಂದಾಗಿ ಒಮ್ಮೆಲೆ ಆರೋಗ್ಯ ಮತ್ತಷ್ಟು ಕ್ಷೀಣಿಸುವಂತಾಯಿತು. ಈ ವಿಷಯದ ಬಗ್ಗೆ ನಾನು ಯಾವಾಗಲೂ ಒದ್ದಾಡುತ್ತಿದ್ದೇನೆ’ ಎಂದು ಹೇಳಿದ್ದಾರೆ.

ಆದಾಗ್ಯೂ, ನಮ್ಮ ತಂದೆಗೆ ಮೊದಲೇ ಕೆಲವು ಆರೋಗ್ಯ ಸಮಸ್ಯೆಗಳಿದ್ದವು ಎಂಬುದನ್ನು ಜಾಕ್ಸನ್ ಒಪ್ಪಿಕೊಂಡಿದ್ದಾರೆ.

‘ಅಪ್ಪ ತೀರಿಹೋದ ಸುದ್ದಿ ಕೇಳಿ ಫೋನ್ ಕೆಳಗಿಟ್ಟ ಕೂಡಲೇ, ನನ್ನ ಮೊದಲ ಆಲೋಚನೆ ಸರ್ಕಾರವನ್ನು ದೂಷಿಸುವುದಾಗಿತ್ತು. ನಾನು ತಕ್ಷಣವೇ ಕೋವಿಡ್ ಮತ್ತು ಲಸಿಕೆಯನ್ನು ದೂಷಿಸಿದ್ದೆ. ತಂದೆಯವರ ಸ್ಮರಣಾರ್ಥ ಕಾರ್ಯಕ್ರಮದಲ್ಲಿ ಈ ಬಗ್ಗೆ ಮಾತನಾಡದಂತೆ ತಮ್ಮನ್ನು ತಾವು ತಡೆದುಕೊಂಡಿದ್ದಾಗಿ ಹೇಳಿದ ಅವರು, ‘ಅಂದು ಹಾಗೆ ಮಾಡದಿರುವುದು ಒಳ್ಳೆಯದಾಯಿತು, ಒಂದು ವೇಳೆ ಮಾತನಾಡಿದ್ದರೆ ಇಂದು ನಾನು ಬೇರೆಯೇ ಪರಿಸ್ಥಿತಿಯಲ್ಲಿರುತ್ತಿದ್ದೆ. ಆದರೆ, ನನ್ನ ಮನಸ್ಸಿನ ಭಾವನೆ ಮಾತ್ರ ಅದೇ ಆಗಿತ್ತು’ ಎಂದು ಸೇರಿಸಿದ್ದಾರೆ.

‘ಹೌದು, ಈ ಹಿಂದೆಯೂ ಅನೇಕರು ಹೃದಯಾಘಾತದಿಂದ ಸಾಯುತ್ತಿದ್ದರು. ಆದರೆ, ಅಪ್ಪ ಚೆನ್ನಾಗಿದ್ದರು. ಅವರು ಮೂರು ಅಥವಾ ನಾಲ್ಕು ಡೋಸ್ ಕೋವಿಡ್ ಲಸಿಕೆ ಪಡೆದಿದ್ದರು. ಅವರಿಗೆ ಲಸಿಕೆ ಪಡೆಯುವುದು ಇಷ್ಟವಿರಲಿಲ್ಲ, ಆದರೆ, ಕೆಲಸದ ಕಾರಣಕ್ಕಾಗಿ ಎಲ್ಲರಂತೆ ಅವರು ಕೂಡ ಒತ್ತಾಯಪೂರ್ವಕವಾಗಿ ಲಸಿಕೆ ಪಡೆದಿದ್ದರು’ ಎಂದಿದ್ದಾರೆ.

ಶೇನ್ ವಾರ್ನ್ ಜೀವನಶೈಲಿಯ ಬಗ್ಗೆ ಮಾತನಾಡಿದ ಜಾಕ್ಸನ್, ತಂದೆಯವರು ಧೂಮಪಾನ ಮತ್ತು ಮದ್ಯಪಾನ ಮಾಡುತ್ತಿದ್ದರೂ ಸಹ, ಆರೋಗ್ಯ ಸ್ಥಿತಿ ಉತ್ತಮವಾಗಿತ್ತು. ‘ಅಪ್ಪ ಕೋವಿಡ್ ಸಂದರ್ಭದಲ್ಲಿ ಆರೋಗ್ಯವಾಗಿದ್ದರು ಮತ್ತು ಸಂತೋಷವಾಗಿದ್ದರು. ಆದರೆ, 80 ಮತ್ತು 90ರ ವಯಸ್ಸಿನ ಅನೇಕ ಜನರು ಅಪ್ಪನಿಗಿಂತ ಹೆಚ್ಚು ಧೂಮಪಾನ ಮತ್ತು ಮದ್ಯಪಾನ ಮಾಡುತ್ತಾ ಇಂದಿಗೂ ಬದುಕಿದ್ದಾರೆ’ ಎಂದು ಅವರು ಹೇಳಿದ್ದಾರೆ.

2021ರಲ್ಲಿ ಇಂಗ್ಲೆಂಡ್ನಲ್ಲಿ ನಡೆದ ‘ದಿ ಹಂಡ್ರೆಡ್’ ಟೂರ್ನಿಯ ತರಬೇತಿಯ ವೇಳೆ ವಾರ್ನ್ ಅವರಿಗೆ ಕೋವಿಡ್ ತಗುಲಿತ್ತು. ಆದರೆ, ಅವರು ಹಠಾತ್ ನಿಧನವಾದ ಸಂದರ್ಭದಲ್ಲಿ ಅವರಿಗೆ ಯಾವುದೇ ದೊಡ್ಡ ಕಾಯಿಲೆಗಳಿರಲಿಲ್ಲ.

1991ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದ ಶೇನ್ ವಾರ್ನ್, ಲೆಗ್-ಸ್ಪಿನ್ ಕಲೆಯನ್ನು ಉತ್ತುಂಗಕ್ಕೇರಿಸಿದ ಕೀರ್ತಿಗೆ ಪಾತ್ರರಾದವರು. ಆಸ್ಟ್ರೇಲಿಯಾ ಕ್ರಿಕೆಟ್ನ ಸುವರ್ಣ ಯುಗದ ಪ್ರಮುಖ ಆಟಗಾರರಲ್ಲಿ ಒಬ್ಬರಾಗಿದ್ದ ಅವರು, ಮೈದಾನದಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಜಗತ್ತಿನಾದ್ಯಂತ ಅಭಿಮಾನಿಗಳನ್ನು ಹೊಂದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.