ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತೀ ವೇಗದ ಚಾಲನೆ; ವಾರ್ನ್‌ ಮೇಲೆ ನಿಷೇಧ

Last Updated 23 ಸೆಪ್ಟೆಂಬರ್ 2019, 11:02 IST
ಅಕ್ಷರ ಗಾತ್ರ

ಲಂಡನ್‌: ಪದೇ ಪದೇ ಸಂಚಾರ ನಿಯಮ ಉಲ್ಲಂಘಿಸಿರುವ ಕಾರಣ ಆಸ್ಟ್ರೇಲಿಯಾದ ಹಿರಿಯ ಕ್ರಿಕೆಟಿಗ ಶೇನ್‌ ವಾರ್ನ್‌ ಮೇಲೆ ಒಂದು ವರ್ಷ ನಿಷೇಧ ಹೇರಲಾಗಿದೆ. ಈ ಅವಧಿಯಲ್ಲಿ ಅವರು ಯಾವುದೇ ವಾಹನ ಚಾಲನೆ ಮಾಡುವಂತಿಲ್ಲ ಎಂದು ಮ್ಯಾಜಿಸ್ಟ್ರೇಟ್‌ ಕೋರ್ಟ್‌ ಆದೇಶಿಸಿದೆ.

50 ವರ್ಷ ವಯಸ್ಸಿನ ವಾರ್ನ್‌ ಅವರು ಎರಡು ವರ್ಷಗಳ ಅವಧಿಯಲ್ಲಿ (ಏಪ್ರಿಲ್‌ 2016ರಿಂದ ಆಗಸ್ಟ್‌ 2018) ಒಟ್ಟು ಆರು ಸಲ ಅತೀವೇಗವಾಗಿ ವಾಹನ ಚಲಾಯಿಸಿದ್ದಾರೆ. ಹೀಗಾಗಿ ಒಟ್ಟು ₹2.12 ಲಕ್ಷ ದಂಡವನ್ನೂ ವಿಧಿಸಲಾಗಿದೆ.

ಟೆಸ್ಟ್‌ ಮಾದರಿಯಲ್ಲಿ ಅತೀ ಹೆಚ್ಚು (708) ವಿಕೆಟ್‌ ಪಡೆದ ಎರಡನೇ ಬೌಲರ್‌ ಎಂಬ ಹಿರಿಮೆ ಹೊಂದಿರುವ ವಾರ್ನ್‌, ಗಂಟೆಗೆ 75 ಕಿಲೊ ಮೀಟರ್‌ ವೇಗದಲ್ಲಿ ಕಾರು ಚಲಾಯಿಸಿದ್ದರು. ಈ ಸಂಬಂಧ 2018ರ ಆಗಸ್ಟ್‌ 23ರಂದು ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಅದಕ್ಕೂ ಮುನ್ನ ಐದು ಬಾರಿ ನಿಯಮ ಉಲ್ಲಂಘಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT