ಮಂಗಳವಾರ, ಮಾರ್ಚ್ 2, 2021
18 °C

IND vs AUS: ಎರಡು ವಿಕೆಟ್ ಉರುಳಿಸಿದ ಠಾಕೂರ್, ಭಾರತದ ಮೇಲುಗೈ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬ್ರಿಸ್ಬೇನ್: ಇಲ್ಲಿ ನಡೆಯುತ್ತಿರುವ ನಾಲ್ಕನೆ ಮತ್ತು ಅಂತಿಮ ಟೆಸ್ಟ್ ಪಂದ್ಯದ ಎರಡನೇ ದಿನದಾಟದಲ್ಲಿ ಮೊದಲ ಅವಧಿಯಲ್ಲಿ ಆಸ್ಟ್ರೇಲಿಯಾ 3 ವಿಕೆಟ್ ಕಳೆದುಕೊಂಡು ಹಿನ್ನಡೆ ಅನುಭವಿಸಿದೆ.

ಟೆಸ್ಟ್‌ಗೆ ಪದಾರ್ಪಣೆ ಮಾಡಿದ್ದ ದಿನದಂದೇ ಉತ್ತಮ ಕೌಶಲ್ಯ ಪ್ರದರ್ಶಿಸಿದ್ದ ಶಾರ್ದೂಲ್ ಠಾಕೂರ್ ಎರಡನೆ ದಿನದ ಆರಂಭದಲ್ಲೇ ಎರಡು ವಿಕೆಟ್ ಉರುಳಿಸಿದ್ದಾರೆ. ಈ ಮೂಲಕ ಭಾರತ ಮೂರು ವಿಕೆಟ್ ಪಡೆದು ಮೊದಲ ಅವಧಿಯಲ್ಲಿ ಹಿಡಿತ ಸಾಧಿಸಿದೆ. 

ಅರ್ಧ ಶತಕ ಸಿಡಿಸಿ ತಂಡದ ಮೊತ್ತವನ್ನು ಹಿಗ್ಗಿಸಲು ಪ್ರಯತ್ನಿಸುತ್ತಿದ್ದ ನಾಯಕ ಟಿಮ್ ಪೇನ್ ಅವರಿಗೆ ಠಾಕೂರ್ ಪೆವಿಲಿಯನ್ ಹಾದಿ ತೋರಿಸಿದರು. 104 ಎಸೆತಗಳಲ್ಲಿ 50 ರನ್ ಗಳಿಸಿದ್ದ ಆಸ್ಟ್ರೇಲಿಯಾ ನಾಯಕ ರನ್ ಗಳಿಕೆ ವೇಗ ಹೆಚ್ಚಿಸಿದ್ದರು. 

ಮೊದಲ ದಿನದಿಂದ ಅಜೇಯರಾಗಿ ಉಳಿದಿದ್ದ ಕೆಮರೂನ್ ಗ್ರೀನ್ (47) ಮೊದಲ ಟೆಸ್ಟ್ ಪಂದ್ಯ ಆಡುತ್ತಿರುವ ವಾಷಿಂಗ್ಟನ್ ಸುಂದರ್‌ಗೆ ವಿಕೆಟ್ ಒಪ್ಪಿಸಿದರು.

ಟಿಮ್ ಪೇನ್, ಕೆಮರೂನ್ ಗ್ರೀನ್ ಬಳಿಕ ಬಾಲಗೋಂಚಿಗಳ ಬೇಟೆಯಲ್ಲಿ ಭಾರತದ ಬೌಲರ್‌ಗಳು ತೊಡಗಿದ್ದು, ಪ್ಯಾಟ್ ಕಮಿನ್ಸ್ ವಿಕೆಟ್ ಉರುಳಿಸಿದ್ದಾರೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು