ಶುಕ್ರವಾರ, 22 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಕದಿನ ತಂಡದಲ್ಲಿ ವರ್ಮಾಗೆ ಸ್ಥಾನ ನೀಡಿ

ಎಡಗೈ ಬ್ಯಾಟರ್‌ ಪರ ಶಾಸ್ತ್ರಿ, ಗಂಗೂಲಿ, ಪಾಟೀಲ್ ಬ್ಯಾಟಿಂಗ್
Published 18 ಆಗಸ್ಟ್ 2023, 16:29 IST
Last Updated 18 ಆಗಸ್ಟ್ 2023, 16:29 IST
ಅಕ್ಷರ ಗಾತ್ರ

ನವದೆಹಲಿ: ಮುಂಬರುವ ಏಕದಿನ ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ ಆಡುವ ಭಾರತ ತಂಡದಲ್ಲಿ 20 ವರ್ಷದ ತಿಲಕ್‌ ವರ್ಮಾ ಅವರನ್ನು ಸೇರ್ಪಡೆಗೆ ಹಿರಿಯ ಆಟಗಾರರು ಬೆಂಬಲ ನೀಡಿದ್ದಾರೆ.

ಅಕ್ಟೋಬರ್‌ 5ರಂದು ಈ ಟೂರ್ನಿ ಆರಂಭವಾಗಲಿದೆ. ಎಡಗೈ ಆಟಗಾರನಾಗಿರುವ ಕಾರಣ ತಂಡದಲ್ಲಿ ಸೇರ್ಪಡೆಗೆ ಅನುಕೂಲಕರ ಸ್ಥಿತಿಯಲ್ಲಿದ್ದಾರೆ ಎಂದು ಶಾಸ್ತ್ರಿ ಹೇಳಿದ್ದಾರೆ. ‘ತಿಲಕ್ ವರ್ಮಾ ಆಡುವ ರೀತಿ ನನಗೆ ಮೆಚ್ಚುಗೆಯಾಗಿದೆ. ಮಧ್ಯಮ ಕ್ರಮಾಂಕದಲ್ಲಿ ಎಡಗೈ ಆಟಗಾರನ ಅಗತ್ಯವಿರುತ್ತದೆ. ಹಿಂದೆ ಎಡಗೈ ಆಟಗಾರರಾದ ಯುವರಾಜ ಸಿಂಗ್‌, ಸುರೇಶ್ ರೈನಾ ಮಧ್ಯಮ ಕ್ರಮಾಂಕದಲ್ಲಿ ಆಡುತ್ತಿದ್ದರು’ ಎಂದು ಶಾಸ್ತ್ರಿ ವಿಶ್ಲೇಷಿಸಿದ್ದಾರೆ. ಹೊಡೆತಗಳ ಆಯ್ಕೆ, ವೈವಿಧ್ಯಮಯ ಹೊಡೆತಗಳು ಮತ್ತು ಅಸಾಂಪ್ರದಾಯಿಕ ಹೊಡೆತಗಳು– ಹೀಗೆ ಅವರಲ್ಲಿ ಎಲ್ಲವೂ ಇದೆ ಎಂದು ಹೊಗಳಿದ್ದಾರೆ

ತಿಲಕ್ ವರ್ಮಾ ಇತ್ತೀಚೆಗೆ ವೆಸ್ಟ್‌ ಇಂಡೀಸ್ ವಿರುದ್ಧ ತಮ್ಮ ಚೊಚ್ಚಲ ಟಿ–20 ಸರಣಿಯಲ್ಲಿ ಗಮನ ಸೆಳೆದಿದ್ದರು. ಮೂರು ಪಂದ್ಯಗಳಲ್ಲಿ ಕ್ರಮವಾಗಿ 39, 51 ಮತ್ತು ಅಜೇಯ 49 ರನ್ ಗಳಿಸಿದ್ದರು.

1983ರ ವಿಶ್ವಕಪ್‌ನಲ್ಲಿ ಶಾಸ್ತ್ರಿ ಜೊತೆ ಆಡಿದ್ದ ಸಂದೀಪ್‌ ಪಾಟೀಲ ಅವರೂ ತಿಲಕ್ ಪರ ಬ್ಯಾಟ್‌ ಮಾಡಿದ್ದಾರೆ. ‘ನೂರಕ್ಕೆ ನೂರರಷ್ಟು ನಾನು ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ ಸೇರ್ಪಡೆ ಪರ ಇದ್ದೇನೆ’ ಎಂದಿದ್ದಾರೆ.

ವಿಶ್ವಕಪ್‌ಗೆ ಶ್ರೇಯಸ್‌ ಅಯ್ಯರ್‌ ಅಲಭ್ಯರಾದಲ್ಲಿ, ತಿಲಕ್ ವರ್ಮಾ ನಾಲ್ಕನೇ ಕ್ರಮಾಂಕದಲ್ಲಿ ಆಡಲು ಸೂಕ್ತ ಆಟಗಾರ ಎಂದು ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಅವರೂ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT