ಶನಿವಾರ, ಜನವರಿ 16, 2021
17 °C
ಫಾಲ್ಕನ್ ಕ್ರಿಕೆಟ್ ಕ್ಲಬ್ ಸುವರ್ಣಮಹೋತ್ಸವ: ಮಹಿಳಾ ಟ್ವೆಂಟಿ–20 ಟೂರ್ನಿ

ಮಹಿಳಾ ಟ್ವೆಂಟಿ–20 ಟೂರ್ನಿ: ದೀಪ್ತಿ ಆಲ್‌ರೌಂಡ್ ಆಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ದೀಪ್ತಿ ಶರ್ಮಾ (ಔಟಾಗದೆ 48, 10ಕ್ಕೆ 1) ಅವರ ಆಲ್‌ರೌಂಡ್‌ ಆಟ ಹಾಗೂ ನಿರಂಜನಾ ನಾಗರಾಜನ್‌ (5ಕ್ಕೆ 3) ಅವರ ಬೌಲಿಂಗ್‌ ನೆರವಿನಿಂದ ಶೀನ್ ಸ್ಪೋರ್ಟ್ಸ್ ತಂಡವು ಫಾಲ್ಕನ್ ಕ್ರಿಕೆಟ್‌ ಕ್ಲಬ್ ಸುವರ್ಣಮಹೋತ್ಸವ ಅಂಗವಾಗಿ ನಡೆಯುತ್ತಿರುವ ಮಹಿಳಾ ಟ್ವೆಂಟಿ–20 ಕ್ರಿಕೆಟ್ ಟೂರ್ನಿಯಲ್ಲಿ ಶನಿವಾರ ಅಮೇಯ ಸ್ಪೋರ್ಟ್ಸ್‌ ಎದುರು 27 ರನ್‌ಗಳಿಂದ ಗೆದ್ದಿತು.

ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಶೀನ್‌, ನಿಗದಿತ ಓವರ್‌ಗಳಲ್ಲಿ 5 ವಿಕೆಟ್‌ಗೆ 114 ರನ್‌ ಗಳಿಸಿತು. ಉತ್ತರವಾಗಿ ಬ್ಯಾಟ್ ಮಾಡಿದ ಅಮೇಯ ತಂಡವು 9 ವಿಕೆಟ್‌ ಕಳೆದುಕೊಂಡು 87 ರನ್‌ ಗಳಿಸಿತು. ವಿಜೇತ ತಂಡದ ಪರ ನಿರಂಜನಾ ನಾಗರಾಜನ್ (5ಕ್ಕೆ 3) ಬೌಲಿಂಗ್‌ನಲ್ಲಿ ಮಿಂಚಿದರು.

ಇನ್ನೊಂದು ಪಂದ್ಯದಲ್ಲಿ ಹೆರಾನ್ಸ್ ಸ್ಪೋರ್ಟ್ಸ್ ತಂಡವು 4 ವಿಕೆಟ್‌ಗಳಿಂದ ಕಿಣಿ ಆರ್‌.ಆರ್‌.ಸ್ಪೋರ್ಟ್ಸ್ ಎದುರು ಗೆದ್ದಿತು.

ಸಂಕ್ಷಿಪ್ತ ಸ್ಕೋರುಗಳು

ಶೀನ್ ಸ್ಪೋರ್ಟ್ಸ್ ಕ್ಲಬ್‌: 20 ಓವರ್‌ಗಳಲ್ಲಿ 5 ವಿಕೆಟ್‌ಗೆ 114 (ದೀಪ್ತಿ ಶರ್ಮಾ ಔಟಾಗದೆ 48, ಪ್ರತ್ಯೂಷಾ ಕುಮಾರ್ 20, ವೃಂದಾ ದಿನೇಶ್ 13, ರಕ್ಷಿತಾ ಕೃಷ್ಣಪ್ಪ 12; ಪೂಜಾ ಕುಮಾರಿ 15ಕ್ಕೆ 1, ಪ್ರಣವಿ 17ಕ್ಕೆ 1, ಅನುಜಾ ಪಾಟೀಲ್ 22ಕ್ಕೆ 1). ಅಮೇಯ ಸ್ಪೋರ್ಟ್ಸ್: 20 ಓವರ್‌ಗಳಲ್ಲಿ 9 ವಿಕೆಟ್‌ಗೆ 87 (ನಿಕ್ಕಿ ಪ್ರಸಾದ್ 32, ಅನುಜಾ ಪಾಟೀಲ್ 17, ಪೂಜಾ ಕುಮಾರಿ 10; ನಿರಂಜನಾ ನಾಗರಾಜನ್‌ 5ಕ್ಕೆ 3, ರಕ್ಷಿತಾ ಕೃಷ್ಣಪ್ಪ 25ಕ್ಕೆ 3, ದೀಪ್ತಿ ಶರ್ಮಾ 10ಕ್ಕೆ 1). ಫಲಿತಾಂಶ: ಶೀನ್‌ ಸ್ಪೋರ್ಟ್ಸ್ ತಂಡಕ್ಕೆ 27 ರನ್‌ಗಳ ಗೆಲುವು. ಪಂದ್ಯಶ್ರೇಷ್ಠ ಆಟಗಾರ್ತಿ: ನಿರಂಜನಾ ನಾಗರಾಜನ್‌

ಕಿಣಿ ಆರ್‌.ಆರ್.ಸ್ಪೋರ್ಟ್ಟ್‌

20 ಓವರ್‌ಗಳಲ್ಲಿ 92 (ಪೂನಂ ರಾವತ್ 45, ನುಜ್ರತ್ ಪರ್ವೀನ್‌ 14; ಆಶಾ ಜಾಯ್‌ 12ಕ್ಕೆ 2, ಪುಷ್ಪಾ ಕಿರೇಸೂರ್‌ 11ಕ್ಕೆ 1, ಮಿನ್ನು ಮಣಿ 17ಕ್ಕೆ 1). ಹೆರಾನ್ಸ್ ಸ್ಪೋರ್ಟ್ಸ್: 18.1 ಓವರ್‌ಗಳಲ್ಲಿ 6 ವಿಕೆಟ್‌ಗೆ 96 (ದಿವ್ಯಾ ಜ್ಞಾನಾನಂದ ಔಟಾಗದೆ 52, ಶುಭಾ ಸತೀಶ್ 23; ರಾಧಾ ಯಾದವ್‌ 16ಕ್ಕೆ 2, ದೇವಸ್ಮಿತಾ ದತ್ತ 13ಕ್ಕೆ 2). ಫಲಿತಾಂಶ: ಹೆರಾನ್ಸ್ ಸ್ಪೋರ್ಟ್ಸ್ ತಂಡಕ್ಕೆ 4 ವಿಕೆಟ್‌ಗಳ ಗೆಲುವು. ಪಂದ್ಯಶ್ರೇಷ್ಠ ಆಟಗಾರ್ತಿ: ದಿವ್ಯಾ ಜ್ಞಾನಾನಂದ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.