ಶನಿವಾರ, ಜೂನ್ 25, 2022
25 °C

ಪ್ಲೇ ಆಫ್ಸ್ ತಲುಪದ ಪಂಜಾಬ್ ಕಿಂಗ್ಸ್: ಶಿಖರ್ ಧವನ್‌ಗೆ ತಂದೆಯಿಂದ ಬಿತ್ತು ಒದೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಸೋಶಿಯಲ್ ಮೀಡಿಯಾದಲ್ಲಿ ತಮಾಷೆ ವಿಡಿಯೊಗಳನ್ನು ಪೊಸ್ಟ್ ಮಾಡುವ ಮೂಲಕ ತಮ್ಮ ಅನುಯಾಯಿಗಳನ್ನು ಆಗಾಗ್ಗೆ ನಗೆಗಡಲಲ್ಲಿ ತೇಲಿಸುವ ಟೀಮ್ ಇಂಡಿಯಾ ಬ್ಯಾಟರ್ ಶಿಖರ್ ಧವನ್, ಈ ಬಾರಿಯೂ ಇನ್‌ಸ್ಟಾಗ್ರಾಮ್‌ನಲ್ಲಿ ಅಂತದ್ದೇ ವಿಡಿಯೊವನ್ನು ಹಂಚಿಕೊಳ್ಳುವ ಮೂಲಕ ಎಲ್ಲರಿಗೂ ನಗು ತರಿಸಿದ್ದಾರೆ.

ಈ ಬಾರಿಯ ಐಪಿಎಲ್‌ ಟೂರ್ನಿಯಲ್ಲಿ ಪಂಜಾಬ್ ಕಿಂಗ್ಸ್ ತಂಡದ ಪರ ಆಡಿದ್ದ ಶಿಖರ್ ಧವನ್ 460 ರನ್ ಸಿಡಿಸುವ ಮೂಲಕ ಗಮನ ಸೆಳೆದಿದ್ದರು. ಆದರೆ, ತಂಡ ಪ್ಲೇಆಫ್ಸ್ ತಲುಪುವಲ್ಲಿ ವಿಫಲವಾಗಿತ್ತು. .ಈ ಹಿನ್ನೆಲೆಯಲ್ಲಿ ಕೋಪಗೊಂಡ ಅವರ ತಂದೆ ಅವರನ್ನು ಒದೆಯುತ್ತಿರುವ ನಾಟಕೀಯ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಮನೆಯ ಇತರ ಸದಸ್ಯರು ಅವರನ್ನು ತಡೆಯುತ್ತಿದ್ದಾರೆ. ‘ನಾಕ್ ಔಟ್‌ಗೆ ಅರ್ಹತೆ ಪಡೆಯದಿದ್ದಕ್ಕಾಗಿ ನನ್ನ ತಂದೆಯಿಂದ ನಾಕ್ ಔಟ್’ ಎಂದು ಧವನ್ ವೀಡಿಯೊಗೆ ಶೀರ್ಷಿಕೆ ನೀಡಿದ್ದಾರೆ.

ಈ ವಿಡಿಯೊಗೆ ‘ನಿಮ್ಮಪ್ಪನಿಗಿಂತ ನೀನೆ ಒಳ್ಳೆ ನಟ’ಎಂದು ಹರ್ಭಜನ್ ಸಿಂಗ್ ಕಾಮೆಂಟ್ ಮಾಡಿದ್ದಾರೆ.

ಪಂಜಾಬ್ ತಂಡದ ಸಹ ಆಟಗಾರ ಹರ್‌ಪ್ರೀತ್ ಬ್ರಾರ್ ಸಹ ‘ಅಂಕಲ್ ರೊಚ್ಚಿಗೆದ್ದಿದ್ದಾರೆ’ ಎಂದು ಕಾಮೆಂಟ್ ಹಾಕಿದ್ದಾರೆ.
  
7 ಗೆಲುವಿನ ಮೂಲಕ 14 ಅಂಕ ಗಳಿಸಿದ್ದ ಪಂಜಾಜ್ ಕಿಂಗ್ಸ್ ಐಪಿಎಲ್ ಅಂಕಪಟ್ಟಿಯಲ್ಲಿ 6ನೇ ಸ್ಥಾನ ಗಳಿಸಿತ್ತು. ಆರಂಭದಲ್ಲಿ ಉತ್ತಮ ಪ್ರದರ್ಶನ ತೋರಿದ್ದ ತಂಡ ಬಳಿಕ ಸತತ ಸೋಲುಗಳ ಮೂಲಕ ಪ್ಲೇಆಫ್ ಆಸೆ ಕೈಬಿಟ್ಟಿತು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು