ಮಂಗಳವಾರ, ಆಗಸ್ಟ್ 20, 2019
27 °C

ಶಿವಮೊಗ್ಗ: ಕ್ರಿಕೆಟ್‌ ಕ್ರೀಡಾಂಗಣ ಜಲಾವೃತ

Published:
Updated:
Prajavani

ಶಿವಮೊಗ್ಗ: ನವುಲೆ ಸಮೀಪದ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಯ ಕ್ರೀಡಾಂಗಣ ಮಳೆಯ ನೀರಿನಿಂದ ಸಂಪೂರ್ಣ ಜಲಾವೃತಗೊಂಡಿದೆ. ಐದು ದಿನಗಳಿಂದ ಸುರಿಯುತ್ತಿರುವ ಮಳೆಗೆ ಕ್ರೀಡಾಂಗಣದಲ್ಲಿ ನೀರು ತುಂಬಿ ಕೆರೆಯಂತೆ ಭಾಸವಾಗುತ್ತಿದೆ.

ಅಲ್ಲಿಗೆ ತೆರಳುವ ರಸ್ತೆಯ ಮೇಲೂ ನೀರು ಹರಿಯುತ್ತಿದೆ. ಕ್ರೀಡಾಂಗಣದ ಸಿಬ್ಬಂದಿಯೂ ಅಲ್ಲಿಗೆ ತೆರಳಲು ಸಾಧ್ಯವಾಗುತ್ತಿಲ್ಲ. ಕಚೇರಿ, ಪೆವಿಲಿಯನ್‌ ಕಟ್ಟಡಕ್ಕೂ ನೀರು ನುಗ್ಗಿದೆ. 

ಸವಳಂಗ ರಸ್ತೆಯ 31 ಎಕರೆ ವಿಸ್ತಾರದ ನವುಲೆ ಕೆರೆಯನ್ನು ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಗೆ 30 ವರ್ಷಗಳಿಗೆ ಗುತ್ತಿಗೆ ನೀಡಲಾಗಿತ್ತು. 26 ಎಕರೆಯಲ್ಲಿ ಕೆಎಸ್‌ಸಿಎ ಸುಸಜ್ಜಿತ ಕ್ರೀಡಾಂಗಣ ನಿರ್ಮಿಸಿದೆ.

ಕೆಎಸ್‌ಸಿಎಗೆ ನೀಡುವುದಕ್ಕಾಗಿಯೇ ಜಿಲ್ಲಾ ಪಂಚಾಯಿತಿ ಅಧೀನದಲ್ಲಿದ್ದ ಈ ಕೆರೆಯನ್ನು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಹಸ್ತಾಂತರಿಸಲಾಗಿತ್ತು.

ತಗ್ಗು ಪ್ರದೇಶದಲ್ಲಿರುವ ಕಾರಣ ನೀರು ಪ್ರತಿ ಮಳೆಗಾಲದಲ್ಲೂ ಕ್ರೀಡಾಂಗಣ ಜಲಾವೃತಗೊಳ್ಳುತ್ತದೆ. ಇದರಿಂದ ವರ್ಷದ ಮೂರು ತಿಂಗಳು ಕ್ರಿಕೆಟ್ ಚಟುವಟಿಕೆ ನಡೆಸಲು ಸಾಧ್ಯವಾಗುವುದಿಲ್ಲ. 

Post Comments (+)