360 ಡಿಗ್ರಿ ತಿರುಗಿ ಮಾಡಿದ ಬೌಲಿಂಗ್‌; ಅಚ್ಚರಿಪಟ್ಟ ಬಿಸಿಸಿಐ

7

360 ಡಿಗ್ರಿ ತಿರುಗಿ ಮಾಡಿದ ಬೌಲಿಂಗ್‌; ಅಚ್ಚರಿಪಟ್ಟ ಬಿಸಿಸಿಐ

Published:
Updated:

ಬಲಗೈ ಬ್ಯಾಟಿಂಗ್‌ ಮಾಡವ ಆಟಗಾರ ಎಡದಿಂದ ಸ್ವೀಪ್‌ ಮಾಡುವುದು, ಎಡಗೈ ಬ್ಯಾಟಿಂಗ್ ಮಾಡುವವ ಬಲಗಡೆಯಿಂದ ಚೆಂಡನ್ನು ಹೊಡೆಯುವುದನ್ನು ಕಂಡಿದ್ದೇವೆ. ಆದರೆ, ಬೌಲರ್‌ ಚೆಂಡನ್ನು ಎಸೆಯುವ ಮುನ್ನ ಪ್ರದಕ್ಷಿಣೆ ಹಾಕಿದರೆ ಹೇಗಿರಬಹುದು? ಇಂಥದ್ದೇ ಶೈಲಿಯಲ್ಲಿ ಬೌಲಿಂಗ್‌ ಮಾಡಿದ ವಿಡಿಯೊವೊಂದನ್ನು ಬಿಸಿಸಿಐ ತನ್ನ ಜಾಲತಾಣದಲ್ಲಿ ಪ್ರಕಟಿಸಿದೆ. 

ಇಂಥ ಶೈಲಿ ಕ್ರಿಕೆಟ್‌ ಇತಿಹಾಸದಲ್ಲಿಯೇ ಮೊದಲ ಎಂದು ಅಚ್ಚರಿ ವ್ಯಕ್ತಪಡಿಸಿರುವ ಬಿಸಿಸಿಐ, ಯಾವು ಪಂದ್ಯದ ಸಂದರ್ಭ ಎಂಬುದನ್ನು ವಿವರಿಸಿಲ್ಲ. ವಿಡಿಯೊದಲ್ಲಿ ಕಾಣುವಂತೆ ಬೌಲರ್‌ ಚೆಂಡನ್ನು ಕೈಯಿಂದ ಬಿಡುವ ಮುನ್ನ 360 ಡಿಗ್ರಿ ತಿರುಗುತ್ತಾನೆ. ಇದನ್ನು ಗಮನಿಸುವ ಅಂಪೈರ್‌, ಆ ಎಸೆಯವನ್ನು ಡೆಡ್‌ ಬಾಲ್‌ ಎಂದು ಘೋಷಿಸುತ್ತಾರೆ. ಆಟಗಾರರೆಲ್ಲ ಬೌಲರ್‌ ಶೈಲಿಯನ್ನು ಬೆಂಬಲಿಸಿ ವಾದ ಮಂಡಿಸುತ್ತಾರೆ; ಅಂಪೈರ್‌ ಯಾವುದಕ್ಕೂ ಒಪ್ಪುವುದಿಲ್ಲ. 

ವಿಡಿಯೊದಲ್ಲಿ ನಮೂದಾಗಿರುವಂತೆ; ಈ ದೃಶ್ಯಾವಳಿ ನವೆಂಬರ್‌ 4ರಂದು ರೆಕಾರ್ಡ್‌ ಆಗಿದೆ. ಈ ವಿಡಿಯೊ ಈಗಾಗಲೇ ವೈರಲ್‌ ಆಗಿದ್ದು, ರಾಜ್ಯಗಳ ನಡುವಿನ ಅಂಡರ್‌–23 ಪಂದ್ಯದಲ್ಲಿ ಈ ಬೌಲಿಂಗ್‌ ಮಾಡಿರುವುದಾಗಿ ಇಎಸ್‌ಪಿಎನ್‌ ವರದಿ ಮಾಡಿದೆ. 

ಉತ್ತರ ಪ್ರದೇಶ ತಂಡದ ಬೌಲರ್‌ ಶಿವ ಸಿಂಗ್‌, ಸಿಕೆ ನಾಯ್ಡು ಟ್ರೋಫಿ ಪಂದ್ಯಾವಳಿಯಲ್ಲಿ ಬೆಂಗಾಲದ ವಿರುದ್ಧದ ಪಂದ್ಯದಲ್ಲಿ ಈ ರೀತಿಯ ಬೌಲಿಂಗ್‌ ಪ್ರದರ್ಶಿಸಿದ್ದಾರೆ. ವಿಶ್ವಕಪ್‌ ಗೆದ್ದ ಭಾರತದ ಅಂಡರ್‌ 19 ತಂಡದಲ್ಲಿ ಸ್ಪಿನ್ನರ್‌ ಶಿವ ಸಿಂಗ್‌ ಸ್ಥಾನ ಪಡೆದಿದ್ದರು. 

ಈ ಶೈಲಿಯಲ್ಲಿಯೇ ವಿಜಯ್‌ ಹಜಾರೆ ಟ್ರೋಫಿಯ ಕೇರಳ ವಿರುದ್ಧದ ಪಂದ್ಯದಲ್ಲಿ ಬೌಲಿಂಗ್‌ ಮಾಡಿದ್ದೆ, ಅಲ್ಲಿ ಅಂಪೈರ್‌ಗಳಿಂದ ಯಾವುದೇ ತಡೆ ಉಂಟಾಗಿರಲಿಲ್ಲ ಎಂದು ಶಿವ ಪ್ರತಿಕ್ರಿಯಿಸಿದ್ದಾರೆ. ‌

ಬರಹ ಇಷ್ಟವಾಯಿತೆ?

 • 13

  Happy
 • 9

  Amused
 • 1

  Sad
 • 1

  Frustrated
 • 4

  Angry

Comments:

0 comments

Write the first review for this !