ಮುಂಬೈ: ಫಿಟ್ನೆಸ್ ಸಲಕರಣೆಗಳ ತಯಾರಿಕಾ ಕಂಪೆನಿ ಪವರ್ಮ್ಯಾಕ್ಸ್, ತನ್ನ ‘ಚಾಂಪಿಯನ್ಸ್ ಟ್ರೇನ್ ಡಿಫರೆಂಟಲೀ’ (ಚಾಂಪಿಯನ್ಗಳು ವಿಭಿನ್ನವಾಗಿ ತರಬೇತಿ ಪಡೆಯುತ್ತಾರೆ) ಅಭಿಯಾನಕ್ಕೆ ಟಿ20 ವಿಶ್ವಕಪ್ ವಿಜೇತ ಭಾರತ ತಂಡದ ಆಲ್ರೌಂಡರ್ ಶಿವಂ ದುಬೆ ಅವರೊಂದಿಗೆ ಪ್ರಚಾರ ರಾಯಭಾರಿಯಾಗಿ ಒಡಂಬಡಿಕೆ ಮಾಡಿಕೊಂಡಿದೆ.

ಫಿಟ್ನೆಸ್ ಉತ್ಸಾಹಿಗಳು ತಮ್ಮ ಮನೆಯಲ್ಲಿಯೇ ವೃತ್ತಿಪರ ದರ್ಜೆಯ ವ್ಯಾಯಾಮ ಮಾಡಲು ಹಾಗೂ ತರಬೇತಿ ಪಡೆಯಲು ಈ ಅಭಿಯಾನವು ಉತ್ತೇಜಿಸುತ್ತದೆ ಎಂದು ಪವರ್ಮ್ಯಾಕ್ಸ್ ವಕ್ತಾರರು ತಿಳಿಸಿದ್ದಾರೆ. ಸಂಸ್ಥೆಯು ಫಿಟ್ನೆಸ್ ಪ್ರಿಯರಿಗಾಗಿ ಅತ್ಯಾಧುನಿಕ ಟ್ರೆಡ್ ಮಿಲ್ಸ್, ವ್ಯಾಯಾಮದ ಸೈಕಲ್ ಹಾಗೂ ಜಿಮ್ ಸಾಧನಗಳನ್ನು ರೂಪಿಸಿದೆ ಎಂದಿದ್ದಾರೆ.

ಈ ಅಭಿಯಾನವು ‘ಚಾಂಪಿಯನ್ ಕ್ರೀಡಾಪಟು’ಗಳು ತಮ್ಮ ದೈನಂದಿನ ವ್ಯಾಯಾಮಕ್ಕೆ ಬಳಸುವ ಪವರ್ಮ್ಯಾಕ್ಸ್ ಸಂಸ್ಥೆಯ ವೃತ್ತಿಪರ ದರ್ಜೆಯ ಫಿಟ್ನೆಸ್ ಸಲಕರಣೆಗಳ ಬಗ್ಗೆ ಯುವಕರಲ್ಲಿ ಅರಿವು ಮೂಡಿಸುವ ಉದ್ದೇಶ ಹೊಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.