ವಿಶ್ವಕಪ್ ಗೆದ್ದ ಬಳಿಕ ಶೀಘ್ರವಾಗಿ ಮನೆಗೆ ತಲುಪಲು ಯೋಚಿಸಿದ್ದ ಶಿವಂ ದುಬೆ ವಿಮಾನದಲ್ಲಿ ತೆರಳಲು ಬಯಸಿದ್ದರು. ಆದರೆ, ವಿಮಾನ ಬುಕಿಂಗ್ ಲಭ್ಯವಿಲ್ಲದಿದ್ದರಿಂದ ಅಹಮದಾಬಾದ್ನಿಂದ ಮುಂಬೈಗೆ ರೈಲಿನಲ್ಲಿ ಪ್ರಯಾಣಿಸಿ ಮನೆಗೆ ತೆರಳಿರುವುದಾಗಿ ಹೇಳಿದ್ದಾರೆ.

ರೈಲು ಪ್ರಯಾಣದ ಕುರಿತು ‘ದಿ ಇಂಡಿಯನ್ ಎಕ್ಸ್ಪ್ರೆಸ್’ ಜೊತೆ ಮಾತನಾಡಿದ ಶಿವಂ ದುಬೆ, ‘ನಾನು, ನನ್ನ ಹೆಂಡತಿ–ಮಕ್ಕಳು ಮತ್ತು ಸ್ನೇಹಿತರು ರೈಲಿನಲ್ಲಿ ಪ್ರಯಾಣಿಸಲು ನಿರ್ಧರಿಸಿದೆವು. ಮೂರನೇ ದರ್ಜೆಯ ಎಸಿ ಟಿಕೆಟ್ಗಳು ಲಭ್ಯವಿದ್ದವು. ಹಾಗಾಗಿ ನಾವು ಅವುಗಳನ್ನೇ ಬುಕ್ ಮಾಡಿಕೊಂಡು ಹೊರಡಲು ನಿರ್ಧರಿಸಿದೆವು. ಆದರೆ, ಈ ಹಂತದಲ್ಲಿ ಜೊತೆ ಇದ್ದ ಸ್ನೇಹಿತರು ಹಾಗೂ ಕುಟುಂಬ ಸದಸ್ಯರು ನನ್ನನ್ನು ಯಾರಾದರು ಗುರುತಿಸಿದರೆ ಏನು ಮಾಡುವುದು? ಎಂದು ಚಿಂತೆಗೀಡಾಗಿದ್ದರು’ ಎಂದಿದ್ದಾರೆ.

‘ಆದರೆ, ನಾನು ತಲೆಗೆ ಕ್ಯಾಪ್, ಮಾಸ್ಕ್, ಕೈ ಪೂರ್ತಿ ಮುಚ್ಚಿಕೊಳ್ಳುವಂತೆ ಟೀ ಶರ್ಟ್ ಧರಿಸಿ ಗುರುತು ಮರೆಮಾಚಿದ್ದೆ’ ಎಂದು ಹೇಳಿದ್ದಾರೆ.

‘ನಾವು ಅಹಮದಾಬಾದ್ನಿಂದ ಬೆಳಿಗ್ಗೆ 5:10ರ ರೈಲು ಬುಕ್ ಮಾಡಿದ್ದರಿಂದ ಆ ಸಮಯದಲ್ಲಿ ಹೆಚ್ಚಿನ ಜನಸಂದಣಿ ಇರವುದಿಲ್ಲ ಎಂದುಕೊಂಡಿದ್ದೆವು. ಆದರೂ, ನಾನು ನನ್ನ ಹೆಂಡತಿಗೆ, ನೀನು ಮುಂದೆ ಹೋಗಿ ರೈಲಿನಲ್ಲಿ ಕುಳಿತಿರು. ನಾನು ರೈಲು ಹೊರಡಲು 5 ನಿಮಿಷ ಬಾಕಿ ಇರುವಾಗ ಕಾರಿನಿಂದ ಇಳಿದು ಬರುವುದಾಗಿ ಹೇಳಿದ್ದೆ, ಅದರಂತೆ ಮಾಡಿದೆ’ ಎಂದು ತಿಳಿಸಿದ್ದಾರೆ.

‘ನನಗೆ ಚಿಂತೆ ಇದ್ದಿದ್ದು, ರೈಲು ಹತ್ತುವಾಗಿನದ್ದಲ್ಲ, ಮುಂಬೈನಲ್ಲಿ ರೈಲು ಇಳಿಯುವಾಗ ಮಧ್ಯಾಹ್ನದ ಸಂದರ್ಭದಲ್ಲಿ ಹೇಗೆ ತಪ್ಪಿಸಿಕೊಳ್ಳುವುದು ಎಂಬ ಚಿಂತೆ ನನ್ನನ್ನು ಕಾಡುತ್ತಿತ್ತು. ಅಷ್ಟೊತ್ತಿಗಾಗಲೇ ಪೊಲೀಸರು ನನ್ನನ್ನು ಸಂಪರ್ಕಿಸಿ ಭದ್ರತೆ ಒದಗಿಸಿದ್ದರು’ ಎಂದು ಅವರು ಹೇಳಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.