ಮುಂಬೈ: ಭಾರತ ಕ್ರಿಕೆಟ್ ತಂಡದ ಸ್ಫೋಟಕ ಶೈಲಿಯ ಬ್ಯಾಟರ್ ಶಿವಂ ದುಬೆ ಅವರು ಟಿ20 ವಿಶ್ವಕಪ್ ಫೈನಲ್ ಪಂದ್ಯದ ನಂತರ ತಮ್ಮ ಪತ್ನಿಯೊಂದಿಗೆ ಅಹಮದಾಬಾದಿನಿಂದ ಮುಂಬೈಗೆ ರೈಲಿನಲ್ಲಿ ಪ್ರಯಾಣ ಮಾಡಿದ್ದಾರೆ.

ಫೈನಲ್ ಪಂದ್ಯದಲ್ಲಿ ಎಡಗೈ ಬ್ಯಾಟರ್ ಶಿವಂ ಅವರು ಇನಿಂಗ್ಸ್ನ ಕೊನೆಯ ಓವರ್ನಲ್ಲಿ 24 ರನ್ ಸೂರೆ ಮಾಡಿದ್ದರು.

‘ಅಹಮದಾಬಾದಿನಿಂದ ಮುಂಬೈಗೆ ತೆರಳುವ ಎಲ್ಲ ವಿಮಾನಗಳ ಆಸನಗಳು ಭರ್ತಿಯಾಗಿದ್ದವು. ಆದ್ದರಿಂದ ಶಿವಂ ಅವರು ರೈಲಿನಲ್ಲಿ ಪ್ರಯಾಣ ಮಾಡಲು ನಿರ್ಧರಿಸಿದ್ದರು. ಮುಂಬೈನಲ್ಲಿ ತಮ್ಮ ಇಬ್ಬರು ಮಕ್ಕಳಷ್ಟೇ ಇರುವುದರಿಂದ ಮನೆಗೆ ಬೇಗ ತಲುಪುವ ಉದ್ದೇಶ ದುಬೆ ದಂಪತಿಯದ್ದಾಗಿತ್ತು. ಆದರೆ ರೈಲು ನಿಲ್ದಾಣ ಮತ್ತು ಪ್ರಯಾಣದಲ್ಲಿ ಸಾರ್ವಜನಿಕರು ಅವರನ್ನು ಗುರುತಿಸಿದ್ದರೆ ದಟ್ಟಣೆ ಉಂಟಾಗುವ ಆತಂಕವೂ ಇತ್ತು. ಆದರೂ ಶಿವಂ, ಅವರ ಪತ್ನಿ ಅಂಜು ಮತ್ತು ಅವರ ಸ್ನೇಹಿತ ಸೇರಿ ರೈಲಿನಲ್ಲಿ ಪ್ರಯಾಣ ಮಾಡಿ ಮುಂಬೈ ತಲುಪಿದರೆಂದು ನಮಗೂ ಮಾಧ್ಯಮಗಳ ಮಾಹಿತಿಗಳಿಂದ ಗೊತ್ತಾಗಿದೆ’ ಎಂದು ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಸೋಮವಾರ ಬೆಳಿಗ್ಗೆ 5.10ಕ್ಕೆ ಅಹಮದಾಬಾದಿನಿಂದ ಹೊರಡುವ ಸಯ್ಯಾಜಿ ನಗರಿ ವೇಗದೂತ ರೈಲಿನಲ್ಲಿ ಅವರು ಪ್ರಯಾಣ ಮಾಡಿದರು. ಎಂಟು ಗಂಟೆಗಳ ಪ್ರಯಾಣದ ನಂತರ ಮುಂಬೈ ತಲುಪಿದರು.

ರೈಲಿನಲ್ಲಿ ಟಿಕೆಟ್ ನಿರೀಕ್ಷಕರೊಬ್ಬರು ಪ್ರಯಾಣಿಕರ ಕಾಯ್ದಿಟ್ಟ ಆಸನಗಳ ಪಟ್ಟಿಯಲ್ಲಿ ದುಬೆ ಅವರ ಹೆಸರು ನೋಡಿ ಅಚ್ಚರಿಗೊಂಡಿದ್ದರು. ಟಿಕೆಟ್ ಪರಿಶೀಲನೆಗೆ ಅವರಿದ್ದ ಆಸನದ ಬಳಿ ತೆರಳಿ ಅಂಜುಮ್ ಅವರನ್ನು ಪ್ರಶ್ನಿಸಿದ್ದರು. ಆದರೆ, ಈ ಶಿವಂ ಕ್ರಿಕೆಟಿಗ ಅಲ್ಲ ಎಂಬ ಉತ್ತರ ಅಂಜುಮ್ ಅವರಿಂದ ಬಂದಿತ್ತು. ಈ ಹೊತ್ತಿನಲ್ಲಿ ಶಿವಂ ಅವರು ಸಹಪ್ರಯಾಣಿಕರಿಗೆ ಗುರುತು ಸಿಗದಂತೆ ಟೋಪಿ, ಮುಖಗವಸು ಮತ್ತು ಪೂರ್ಣ ತೋಳಿನ ಟೀ ಶರ್ಟ್ ಧರಿಸಿದ್ದರು. ವಾತಾನುಕೂಲಿತ (3 ಟಿಯರ್) ಬೋಗಿಯ ಮೇಲ್ಭಾಗದ ಬರ್ತ್ನಲ್ಲಿ ಮಲಗಿದ್ದರು. ಸುಮಾರು ಒಂದು ತಿಂಗಳು ನಡೆದ ಟೂರ್ನಿಯಲ್ಲಿ ಆಡಿ, ಫೈನಲ್ನಲ್ಲಿ ಗೆದ್ದ ನಂತರ ಸಂಭ್ರಮದಲ್ಲಿ ಸಹ ಆಟಗಾರರೊಂದಿಗೆ ಕುಣಿದು, ಕುಪ್ಪಳಿಸಿ ಸುಸ್ತಾಗಿದ್ದ ಅವರು ಗಾಢ ನಿದ್ದೆ ಮಾಡಿದ್ದರು.

ಆದರೆ ಮಧ್ಯಾಹ್ನ 1 ಗಂಟೆಗೆ ರೈಲು ಬೋರಿವಿಲಿ ನಿಲ್ದಾಣ ತಲುಪಿದಾಗ ಜನದಟ್ಟಣೆ ಉಂಟಾಗುವ ಬಗ್ಗೆ ಶಿವಂ ಅವರು ಮೊದಲೇ ಅಂದಾಜಿಸಿದ್ದರು. ರೈಲು ನಿಲ್ದಾಣದ ಪೊಲೀಸರನ್ನು ಮೊದಲೇ ಸಂಪರ್ಕಿಸಿದ್ದ ಅವರು ತಮ್ಮನ್ನು ಜನರ ಗಮನಕ್ಕೆ ಬರದಿಂದ ಹೊರಗೆ ಕರೆದೊಯ್ಯಲು ವ್ಯವಸ್ಥೆ ಮಾಡಬೇಕೆಂದು ಮನವಿ ಮಾಡಿದ್ದರು. ಅವರ ಮನವಿಯನ್ನು ಪೊಲೀಸರು ಪುರಸ್ಕರಿಸಿದರು. ಸಮವಸ್ತ್ರ ಬಿಟ್ಟು ಸಾಮಾನ್ಯ ಉಡುಪು ಧರಿಸಿದ್ದ ಪೊಲೀಸ್ ಸಿಬ್ಬಂದಿಯು, ದುಬೆ ದಂಪತಿಯನ್ನು ನಿಲ್ದಾಣದ ಹೊರಗೆ ಕರೆದುಕೊಂಡು ಹೋಗಿ ಕಾರು ಹತ್ತಿಸಿದರು ಎಂದೂ ರೈಲ್ವೆ ಅಧಿಕಾರಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.