ಶೋರೆ ಶತಕದ ಸೊಬಗು

7
ಡ್ರಾ ಪಂದ್ಯದಲ್ಲಿ ಮಂಡಳಿ ಅಧ್ಯಕ್ಷರ ಇಲೆವನ್‌

ಶೋರೆ ಶತಕದ ಸೊಬಗು

Published:
Updated:
Deccan Herald

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ಧ್ರುವ ಶೋರೆ (101; 162ಎ, 16ಬೌಂ, 1ಸಿ) ಮತ್ತು ರಿಕಿ ಭುಯಿ (91; 165ಎ, 13ಬೌಂ, 1ಸಿ) ಅವರ ಬ್ಯಾಟಿಂಗ್‌ ಸೊಬಗು ಅನಾವರಣಗೊಂಡಿತು.

ಇವರ ಉತ್ತಮ ಜೊತೆಯಾಟದ ಬಲದಿಂದ ಭಾರತ ಮಂಡಳಿ ಅಧ್ಯಕ್ಷರ ಇಲೆವನ್‌ ತಂಡ ದಕ್ಷಿಣ ಆಫ್ರಿಕಾ ‘ಎ’ ಎದುರಿನ ಮೂರು ದಿನಗಳ ಅಭ್ಯಾಸ ಪಂದ್ಯವನ್ನು ಡ್ರಾ ಮಾಡಿಕೊಂಡಿತು.

2 ವಿಕೆಟ್‌ಗೆ 201ರನ್‌ಗಳಿಂದ ಬುಧವಾರ ಆಟ ಮುಂದುವರಿಸಿದ ಮಂಡಳಿ ಅಧ್ಯಕ್ಷರ ಇಲೆವನ್‌ ತಂಡ ಮೊದಲ ಇನಿಂಗ್ಸ್‌ನಲ್ಲಿ 108 ಓವರ್‌ಗಳಲ್ಲಿ 6 ವಿಕೆಟ್‌ಗೆ 397ರನ್‌ ಪೇರಿಸಿ ಡಿಕ್ಲೇರ್‌ ಮಾಡಿಕೊಂಡಿತು.

ದ್ವಿತೀಯ ಇನಿಂಗ್ಸ್‌ ಆರಂಭಿಸಿದ ದಕ್ಷಿಣ ಆಫ್ರಿಕಾ ‘ಎ’ ತಂಡ 15.5 ಓವರ್‌ಗಳಲ್ಲಿ 2 ವಿಕೆಟ್‌ಗೆ 61ರನ್‌ ಗಳಿಸಿತು. ಖಾಯಾ ಜೊಂಡೊ ಪಡೆ ಮೊದಲ ಇನಿಂಗ್ಸ್‌ನಲ್ಲಿ 115.1 ಓವರ್‌ಗಳಲ್ಲಿ 4 ವಿಕೆಟ್‌ಗೆ 473ರನ್‌ ದಾಖಲಿಸಿ ಡಿಕ್ಲೇರ್‌ ಮಾಡಿಕೊಂಡಿತ್ತು.

ಸಂಕ್ಷಿಪ್ತ ಸ್ಕೋರ್‌: ದಕ್ಷಿಣ ಆಫ್ರಿಕಾ ‘ಎ’: ಮೊದಲ ಇನಿಂಗ್ಸ್‌, 115.1 ಓವರ್‌ಗಳಲ್ಲಿ 4 ವಿಕೆಟ್‌ಗೆ 473 ಡಿಕ್ಲೇರ್ಡ್‌ ಮತ್ತು 15.5 ಓವರ್‌ಗಳಲ್ಲಿ 2 ವಿಕೆಟ್‌ಗೆ 61 (ಡ್ವೇನ್‌ ಪ್ರಿಟೋರಿಯಸ್‌ ಔಟಾಗದೆ 27, ಶಾನ್‌ ವೊನ್‌ ಬರ್ಗ್‌ 18, ಡೇನ್‌ ಪಿಯೆಡ್ತ್‌ 16; ಮಿಹಿರ್‌ ಹಿರ್ವಾನಿ 35ಕ್ಕೆ2).

ಭಾರತ ಮಂಡಳಿ ಅಧ್ಯಕ್ಷರ ಇಲೆವನ್‌: ಪ್ರಥಮ ಇನಿಂಗ್ಸ್‌, 108 ಓವರ್‌ಗಳಲ್ಲಿ 6 ವಿಕೆಟ್‌ಗೆ 397 ಡಿಕ್ಲೇರ್ಡ್‌ (ಧ್ರುವ ಶೋರೆ 101, ರಿಕಿ ಭುಯಿ 91, ಅನ್‌ಮೋಲ್‌ಪ್ರೀತ್‌ ಸಿಂಗ್‌ 32, ಇಶಾನ್‌ ಕಿಶನ್‌ ಔಟಾಗದೆ 17, ಜಲಜ್‌ ಸಕ್ಸೇನಾ ಔಟಾಗದೆ 13; ಶಾನ್‌ ವೊನ್‌ ಬರ್ಗ್‌ 62ಕ್ಕೆ3, ಶೆನುರಾನ್‌ ಮುತ್ತುಸಾಮಿ 25ಕ್ಕೆ1, ಮಲುಸಿ ಸಿಬೊಟೊ 18ಕ್ಕೆ1).

ಫಲಿತಾಂಶ: ಡ್ರಾ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !