ಬೆಂಗಳೂರು: ಆಸ್ಟ್ರೇಲಿಯಾದ ‘ಅಜಾನುಬಾಹು’ ಟಿಮ್ ಡೇವಿಡ್ ಭಾನುವಾರ ರಾತ್ರಿ ಸಿಡಿಸಿದ ಎಂಟು ಸಿಕ್ಸರ್ಗಳನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬೌಲರ್ಗಳು ಬಹುಕಾಲ ನೆನಪಿಡುವುದು ಖಚಿತ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಡೇವಿಡ್ 25 ಎಸೆತಗಳಲ್ಲಿ ಅಜೇಯ 70 ರನ್ ಹೊಡೆಯುವ ಮೂಲಕ ಪಂದ್ಯದ ಗೆಲುವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರಿನತ್ತ ತಿರುಗಿಸಿದರು. ಈ ಬೀಸಾಟದ ಭರಾಟೆಯಲ್ಲಿ ಅವರು 19ನೇ ಓವರ್ನಲ್ಲಿ ಜೆಮಿ ಓವರ್ಟನ್ ಎಸೆತವನ್ನು 106 ಮೀಟರ್ಸ್ ಎತ್ತರದ ಸಿಕ್ಸರ್ಗೆ ಎತ್ತಿದರು. ಅದು ಮೈದಾನದ ಮಾಳಿಗೆಯನ್ನು ದಾಟಿ ಹೋಯಿತು. ಕಬ್ಬನ್ ರಸ್ತೆ ಬಳಿ ಬಿತ್ತು ಎಂದು ಭದ್ರತಾ ಸಿಬ್ಬಂದಿಯೊಬ್ಬರು ಹೇಳಿದ್ದರು. ಆ ಚೆಂಡು ತಮಗೆ ಸಿಕ್ಕಿದೆ ಎಂದು ಕೆಲವು ಯುವಕರು ವಿಡಿಯೊ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಅದಿರಲಿ, ಈ ಸಿಕ್ಸರ್ನಿಂದಾಗಿ 100 ಮೀಟರ್ಸ್ ಗಿಂತ ಹೆಚ್ಚು ಎತ್ತರದ ಸಿಕ್ಸರ್ಗೆ ಒಟ್ಟು ಎಂಟು ಅಥವಾ ಹತ್ತು ರನ್ ನೀಡಬೇಕು ಎಂಬ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ.

ವೀಕ್ಷಕ ವಿವರಣೆಗಾರ ಇರ್ಫಾನ್ ಪಠಾಣ್ ಅವರು ಕೆಲವು ದಿನಗಳ ಹಿಂದಷ್ಟೇ ಈ ವಿಷಯ ಪ್ರಸ್ತಾಪಿಸಿದ್ದರು. ಯೂಟ್ಯೂಬ್ನಲ್ಲಿ ಅವರು, ‘ಟಿ20 ಕ್ರಿಕೆಟ್ನಲ್ಲಿ ಇಂತಹ ನಿಯಮ ಮಾಡುವುದು ಅಪೇಕ್ಷಣೀಯ. ಇದರಿಂದಾಗಿ ಬ್ಯಾಟರ್ ಕೌಶಲ ಮತ್ತು ಸಾಮರ್ಥ್ಯಕ್ಕೆ ಸೂಕ್ತ ಪ್ರತಿಫಲ ನೀಡಿದಂತಾಗುತ್ತದೆ’ ಎಂದಿದ್ದರು. ಮೂರು ವರ್ಷಗಳ ಹಿಂದೆ ರೋಹಿತ್ ಶರ್ಮಾ ಕೂಡ ಯೂಟ್ಯೂಬ್ ಸಂದರ್ಶನದಲ್ಲಿ, ‘ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಲ್ಲಿ 90 ಮೀಟರ್ಸ್ ಎತ್ತರದ ಸಿಕ್ಸರ್ಗೆ ಎಂಟು ಮತ್ತು 100 ಮೀಟರ್ ದಾಟಿದರೆ 10 ರನ್ ಕೊಡಬೇಕು. ನಿಯಮ ಬದಲಾಗಬೇಕು’ ಎಂದಿದ್ದರು.

ಈ ರೀತಿಯ ನಿಯಮದಿಂದ ಕ್ರಿಕೆಟ್ ಮತ್ತಷ್ಟು ರೋಚಕಗೊಳ್ಳುತ್ತದೆ ಎಂಬುದು ಅವರ ಅಭಿಪ್ರಾಯ. ಅಷ್ಟೇ ಅಲ್ಲ. ಪ್ರೇಕ್ಷಕರಿಗೆ ಮತ್ತಷ್ಟು ‘ಎತ್ತರ’ದ ಮನರಂಜನೆಯೂ ದೊರೆಯಬಹುದು.

ಹಾಗೆ ನೋಡಿದರೆ; 2008ರಿಂದಲೂ ಇಂತಹ ‘ದೈತ್ಯ ಸಿಕ್ಸರ್’ಗಳು ಐಪಿಎಲ್ನಲ್ಲಿ ಸಿಡಿಯುತ್ತಲೇ ಇವೆ. ಆದರೆ ನಿಯಮ ಬದಲಾವಣೆಯ ಕುರಿತು ಯಾವುದೇ ಚರ್ಚೆ ಆಗಿಲ್ಲ. ಇಷ್ಟು ವರ್ಷಗಳಲ್ಲಿ ಬೇರೆ ಬೇರೆ ನಿಯಮಗಳು ಹೊಸದಾಗಿ ಜಾರಿಯಾಗಿವೆ ಅಥವಾ ಪರಿಷ್ಕರಣೆಗೊಂಡಿವೆ. ಆದರೆ ಈ ನಿಯಮದ ಕುರಿತು ಮಾತಿಲ್ಲ.

‘ಎಲ್ಲ ಕ್ರಿಕೆಟ್ ಮೈದಾನಗಳಲ್ಲಿ ಬೌಂಡರಿಗೆರೆಯು ಅಳತೆಯು ಒಂದೇ ರೀತಿ ಇರುವುದಿಲ್ಲ. ಸರಾಸರಿ 62ರಿಂದ 70 ಮೀಟರ್ಸ್ವರೆಗೆ ಇರುತ್ತವೆ. ಆದ್ದರಿಂದ ಸಿಕ್ಸರ್ ನಿಯಮ ಪರಿಷ್ಕರಣೆ ಮಾಡಿ ಅದನ್ನು ಎಲ್ಲ ಕ್ರೀಡಾಂಗಣಗಳಿಗೂ ಏಕರೂಪವಾಗಿ ಅನ್ವಯಿಸುವುದು ಸೂಕ್ತವಾಗುವುದಿಲ್ಲ’ ಎಂದು ಬಿಸಿಸಿಐ ಮಾಜಿ ಅಂಪೈರ್ ವಿ.ಎನ್. ಕುಲಕರ್ಣಿ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

ಒಂದೊಮ್ಮೆ ನಿಯಮ ಪರಿಷ್ಕರಣೆಗೊಂಡು ಎತ್ತರದ ಆಧಾರದಲ್ಲಿ ಹೆಚ್ಚುವರಿ ರನ್ ನೀಡಲು ಆರಂಭವಾದರೆ ಬ್ಯಾಟರ್ಗಳು ತಮ್ಮ ಭುಜಬಲ ಮೆರೆಯುವ ಪೈಪೋಟಿಯೂ ಮುಗಿಲೆತ್ತರಕ್ಕೇರಬಹುದು. ಟಿಮ್ ಡೇವಿಡ್ ಅವರಂತಹ ಬಲಾಢ್ಯರು ಹೊಡೆಯುವ ಚೆಂಡುಗಳನ್ನು ಪಡೆಯಲು ಮೈದಾನದ ಹೊರಗಿದ್ದವರ ಸ್ಪರ್ಧೆಯೂ ಹೆಚ್ಚಬಹುದು!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.