ಮುಂಬೈ: ಇಲ್ಲಿ ಮುಕ್ತಾಯವಾದ ಇಂಡಿಯನ್ ಪ್ರೀಮಿಯರ್ ಲೀಗ್ನ 24ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವು ಮುಂಬೈ ಇಂಡಿಯನ್ಸ್ ಅನ್ನು ಸುಲಭವಾಗಿ ಮಣಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಏರಿತು. ಈ ಪಂದ್ಯದಲ್ಲಿ ಪಂಜಾಬ್ ನಾಯಕ ಶ್ರೇಯಸ್ ಅಯ್ಯರ್ ಹಿಡಿದ ಒಂದು ಕ್ಯಾಚ್ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಬಲಿಷ್ಠ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದ ಮೊದಲ ಇನಿಂಗ್ಸ್ನ 18ನೇ ಓವರ್ನಲ್ಲಿ ಪಂಜಾಬ್ ವೇಗಿ ಮಾರ್ಕೊ ಜಾನ್ಸನ್ ಎಸೆದ ಚೆಂಡನ್ನು ಮುಂಬೈ ನಾಯಕ ಹಾರ್ದಿಕ್ ಪಾಂಡ್ಯ ಬಲವಾಗಿ ಬಾರಿಸುತ್ತಾರೆ. ಬಾಲ್ ತುಂಬಾ ಮೇಲಕ್ಕೆ ಹೋಗುತ್ತದೆ. ಮಾತ್ರವಲ್ಲ, ಬೌಂಡರಿ ಗೆರೆಯಿಂದ ಆಚೆಗೆ ಬೀಳುವುದರಲ್ಲಿತ್ತು. ಆದರೆ, ಲಾಂಗ್ ಆನ್ನಲ್ಲಿ ಕ್ಷೇತ್ರರಕ್ಷಣೆ ಮಾಡುತ್ತಿದ್ದ ಶ್ರೇಯಸ್ ಅಯ್ಯರ್ ಆಶ್ಚರ್ಯಕರ ರೀತಿಯಲ್ಲಿ ಚಿರತೆಯಂತೆ ಜಿಗಿದು ಬಾಲ್ ಅನ್ನು ಹಿಡಿದು, ಮೈದಾನ ಒಳಗೆ ನಿಂತಿದ್ದ ಕ್ಸೇವಿಯರ್ ಬ್ರಾಟ್ಲೆಟ್ ಅವರ ಕಡೆಗೆ ಎಸೆಯುತ್ತಾರೆ. ಆ ಚೆಂಡನ್ನು ಬ್ರಾಟ್ಲೆಟ್ ಹಿಡಿದು ಕ್ಯಾಚ್ ಪೂರ್ಣಗೊಳಿಸುತ್ತಾರೆ.

ಇನ್ನೂ ವಿಶೇಷ ಅಂದರೆ, ಈ ಕ್ಯಾಚ್ ಅನ್ನು ಶ್ರೇಯಸ್ ಅಯ್ಯರ್ ಅವರು ಮುಂಬೈ ಇಂಡಿಯನ್ಸ್ ಆಟಗಾರರು ಕುಳಿತಿದ್ದ ಡಗೌಟ್ ಸಮೀಪದಲ್ಲೆ ಹಿಡಿಯುತ್ತಾರೆ. ಅಯ್ಯರ್ ಹಿಡಿದ ಅದ್ಭುತ ಕ್ಯಾಚ್ ಅನ್ನು ಹತ್ತಿರದಿಂದ ನೋಡಿದ ಭಾರತ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ ಆಶ್ಚರ್ಯ ವ್ಯಕ್ತಪಡಿಸುತ್ತಾರೆ. ಮಾತ್ರವಲ್ಲ, ಭಾರತ ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್ ಕೂಡ ನಿಬ್ಬೆರಗಾಗಿ ನೋಡುತ್ತಾರೆ.

ಶ್ರೇಯಸ್ ಅಯ್ಯರ್ ಗಾಳಿಯಲ್ಲಿ ಜಿಗಿದು ಹಿಡಿದ ಕ್ಯಾಚ್ ಅನ್ನು ಗಮನಿಸಿದ ರೋಹಿತ್ ಶರ್ಮಾ ಅವರು ಪಕ್ಕದಲ್ಲಿ ಕುಳಿತಿದ್ದ ಸೂರ್ಯಕುಮಾರ್ ಕಡೆಗೆ ಕೈ ಸನ್ನೆಯ ಮೂಲಕ ಇದು ಹೇಗೆ ಸಾಧ್ಯವಾಯಿತು? ಎಂಬಂತೆ ಕೇಳುತ್ತಾರೆ. ಸೂರ್ಯಕುಮಾರ್ ಯಾದವ್ ಕೂಡ ಕಣ್ಣುಗಳನ್ನು ಅರಳಿಸಿ ಆ ಕ್ಯಾಚ್ ಹಿಡಿದ ಪರಿಗೆ ಆಶ್ಚರ್ಯಪಡುತ್ತಾರೆ. ಸದ್ಯ, ಶ್ರೇಯಸ್ ಅಯ್ಯರ್ ಅವರ ಕ್ಯಾಚ್ ಜೊತೆಗೆ ರೋಹಿತ್ ಹಾಗೂ ಸೂರ್ಯಕುಮಾರ್ ಅವರ ಪ್ರತಿಕ್ರಿಯೆ ಕೂಡ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.