ಭಾನುವಾರ, ಮಾರ್ಚ್ 26, 2023
24 °C

25 ವರ್ಷದೊಳಗಿನವರ ಕ್ರಿಕೆಟ್‌: ರಾಜ್ಯ ತಂಡಕ್ಕೆ ಶುಭಾಂಗ್ ನಾಯಕ

‍ಪ್ರಜಾವಾಣಿ ವಾರ್ತೆ‌ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೇಂಬ್ರಿಜ್ ಕ್ರಿಕೆಟ್ ಕ್ಲಬ್‌ನ ಶುಭಾಂಗ್ ಹೆಗಡೆ ಅವರು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಆಯೋಜಿಸುವ 25 ವರ್ಷದೊಳಗಿನವರ ಕ್ರಿಕೆಟ್ ಟೂರ್ನಿಯಲ್ಲಿ ಕರ್ನಾಟಕ ತಂಡವನ್ನು ಮುನ್ನಡೆಸುವರು.

ಇಬ್ಬರು ವಿಕೆಟ್ ಕೀಪರ್‌ಗಳನ್ನು ಒಳಗೊಂಡ 20 ಮಂದಿಯ ತಂಡವನ್ನು ರಾಜ್ಯ ಕ್ರಿಕೆಟ್ ಸಂಸ್ಥೆ ಸೋಮವಾರ ಘೋಷಿಸಿದೆ. ಟೂರ್ನಿ ಇದೇ 20ರಿಂದ ರಾಜ್‌ಕೋಟ್‌ನಲ್ಲಿ ನಡೆಯಲಿದೆ.

ತಂಡ: ಶುಭಾಂಗ್ ಹೆಗಡೆ (ನಾಯಕ), ಚೇತನ್ ಎಲ್.ಆರ್‌, ಶಿವಕುಮಾರ್ ಬಿ.ಯು, ಮೊಹಮ್ಮದ್ ಆಖಿಬ್ ಜವಾದ್, ರೋಹನ್ ಎ.ಪಾಟೀಲ್‌, ಮೋಹಿತ್ ಬಿ.ಎ (ವಿಕೆಟ್ ಕೀಪರ್‌), ಅನೀಶ್ ಕೆ.ವಿ, ಕೃತಿಕ್ ಕೃಷ್ಣ (ವಿಕೆಟ್ ಕೀಪರ್‌), ಮನೋಜ್ ಭಾಂಡಗೆ, ಲೋಚನ್ ಅಪ್ಪಣ್ಣ, ಕೃಷ್ಣ ಬೆದರೆ, ಪ್ರಣವ್ ಭಾಟಿಯಾ, ಕುಶಾಲ್ ವಾಧ್ವಾನಿ, ಭಾರ್ಗವ್ ಎಸ್‌, ಶ್ರೇಯಸ್‌ ಬಿ.ಎಂ, ಅಭಿಲಾಶ್ ಶೆಟ್ಟಿ, ನಿಶ್ಚಿತ್ ರಾವ್, ವೆಂಕಟೇಶ್ ಎಂ, ಆದಿತ್ಯ ಗೋಯಲ್, ಸಂಟೋಖ್ ಸಿಂಗ್. ಬ್ಯಾಟಿಂಗ್ ಕೋಚ್‌: ಸಿ.ರಘು, ಬೌಲಿಂಗ್: ಜಿ.ಚೈತ್ರಾ, ಮ್ಯಾನೇಜರ್‌: ಬಿ.ಕೆ.ಕುಮಾರ್.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು