ನವದೆಹಲಿ: ಟೀಂ ಇಂಡಿಯಾದ ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್ ತಂಡದ ನಾಯಕ ಶುಭಮನ್ ಗಿಲ್ ಅವರಿಗೆ ‘ಬಿಸಿಸಿಐ ವಾರ್ಷಿಕ ಆಟಗಾರ ಪ್ರಶಸ್ತಿ’ ನೀಡುವ ಸಾಧ್ಯತೆಯಿದೆ. ಮಾ.15ರಂದು ಕಾರ್ಯಕ್ರಮ ನಡೆಯಲಿದೆ.

ಟಿ–20 ಕ್ರಿಕೆಟ್ನಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ಬರದೇ ಇದ್ದರೂ, ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್ನಲ್ಲಿ ಗಿಲ್ ಮಿಂಚಿದ್ದಾರೆ. ಈ ವರ್ಷ ಟೆಸ್ಟ್ ಕ್ರಿಕೆಟ್ನಲ್ಲಿ 983 ರನ್ ಗಳಿಸಿದ್ದಾರೆ. ಇಂಗ್ಲೆಂಡ್ ವಿರುದ್ಧ ನಡೆದ ಸರಣಿಯೊಂದರಲ್ಲೇ 70ರ ಸರಾಸರಿಯಲ್ಲಿ 754 ರನ್ ಬಾರಿಸಿದ್ದರು.

ಏಕದಿನ ಕ್ರಿಕೆಟ್ನಲ್ಲೂ ಉತ್ತಮ ಪ್ರದರ್ಶನ ನೀಡಿರುವ ಗಿಲ್, 490 ರನ್ ಗಳಿಸಿದ್ದಾರೆ. ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲೇ 188 ರನ್ ಬಾರಿಸುವ ಮೂಲಕ ಭಾರತವು ಪ್ರಶಸ್ತಿ ಗೆಲ್ಲಲು ನೆರವಾಗಿದ್ದರು.

ಎಲ್ಲಾ ಮಾದರಿಗಳಿಂದ ಗಿಲ್, 49ರ ಸರಾಸರಿಯಲ್ಲಿ 1,764 ರನ್ ಗಳಿಸಿದ್ದಾರೆ. ಇದರಲ್ಲಿ 7 ಶತಕ ಹಾಗೂ 3 ಅರ್ಧಶತಕಗಳು ಸೇರಿವೆ.

ಐಪಿಎಲ್ನ 18ನೇ ಆವೃತ್ತಿಯಲ್ಲಿ ಗುಜರಾತ್ ಜೈಂಟ್ಸ್ ಪರ 50ರ ಸರಾಸರಿಯಲ್ಲಿ 650 ರನ್ ಬಾರಿಸಿದ್ದ ಗಿಲ್, ಅಂತರರಾಷ್ಟ್ರೀಯ ಟಿ–20 ಪಂದ್ಯಗಳಲ್ಲಿ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದರು. ಇತ್ತೀಚೆಗೆ ಜರುಗಿದ ಟಿ–20 ವಿಶ್ವಕಪ್ ಟೂರ್ನಿಗೆ 26 ವರ್ಷದ ಶುಭಮನ್ ಗಿಲ್ ಅವರು ಆಯ್ಕೆಯಾಗಿರಲಿಲ್ಲ. ಅದರಲ್ಲಿ ಭಾರತ ತಂಡವು ಪ್ರಶಸ್ತಿ ಗಳಿಸಿತ್ತು.

ಇದೇ ಕಾರ್ಯಕ್ರಮದಲ್ಲಿ ಭಾರತದ ಮಾಜಿ ಕೋಚ್ ರಾಹುಲ್ ದ್ರಾವಿಡ್ ಅವರಿಗೆ ಕರ್ನಲ್. ಸಿ.ಕೆ. ನಾಯ್ಡು ಜೀವಮಾನ ಸಾಧನೆ ಪ್ರಶಸ್ತಿ ನೀಡಲಾಗುತ್ತಿದೆ. ದ್ರಾವಿಡ್ ಮಾರ್ಗದರ್ಶನದಲ್ಲಿ ಟೀಂ ಇಂಡಿಯಾವು 2024ರಲ್ಲಿ ಟಿ20 ವಿಶ್ವಕಪ್ ಜಯಿಸಿತ್ತು.

ದೇಶೀಯ ಕ್ರಿಕೆಟ್ನ ಅತ್ಯುತ್ತಮ ಅಸೋಸಿಯೇಶನ್ ಪ್ರಶಸ್ತಿಯನ್ನು ಮುಂಬೈ ಕ್ರಿಕೆಟ್ ಅಸೋಸಿಯೇಶನ್ಗೆ (ಎಂಸಿಎ) ನೀಡಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.