ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದ್ರಾವಿಡ್ ಪ್ರಭಾವ ಸ್ಮರಿಸಿದ ಶುಭಮನ್ ಗಿಲ್

Last Updated 22 ಆಗಸ್ಟ್ 2019, 19:45 IST
ಅಕ್ಷರ ಗಾತ್ರ

ನವದೆಹಲಿ: ಬ್ಯಾಟಿಂಗ್ ಶೈಲಿಯಲ್ಲಿ ವಿರಾಟ್ ಕೊಹ್ಲಿ ಅವರನ್ನು ಹೋಲುವ ಯುವ ಆಟಗಾರ ಶುಭಮನ್ ಗಿಲ್ ಕಲಾತ್ಮಕ ಆಟಗಾರ ರಾಹುಲ್ ದ್ರಾವಿಡ್ ಮತ್ತು ಕೆಚ್ಚೆದೆಯ ಹೊಡೆತಗಾರ ಯುವರಾಜ್ ಸಿಂಗ್ ತಮ್ಮ ಮೇಲೆ ಪ್ರಭಾವ ಬೀರಿರುವುದಾಗಿ ತಿಳಿಸಿದ್ದಾರೆ.

ಯಾವುದೇ ಪರಿಸ್ಥಿತಿಯಲ್ಲಿ ತಮ್ಮ ಸಹಜ ಶೈಲಿಯ ಆಟಕ್ಕೇ ಬದ್ಧರಾಗಿ ಕ್ರೀಸ್‌ನಲ್ಲಿ ಉಳಿಯುವುದನ್ನು ರೂಢಿಸಿಕೊಳ್ಳಬೇಕು ಎಂದು ರಾಹುಲ್ ದ್ರಾವಿಡ್ ಹೇಳಿದ ಮಾತೇ ದೊಡ್ಡ ಪಾಠವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಗಿಲ್‌, ವೆಸ್ಟ್ ಇಂಡೀಸ್‌ನಲ್ಲಿ ಈಚೆಗೆ ನಡೆದಿದ್ದ ಎ ತಂಡಗಳ ನಡುವಿನ ಏಕದಿನ ಸರಣಿಯಲ್ಲಿ ಅಮೋಘ ಬ್ಯಾಟಿಂಗ್ ಮಾಡಿದ್ದರು. ಮೂರು ಅರ್ಧಶತಕಗಳು ಒಳಗೊಂಡಂತೆ ಒಟ್ಟು 218 ರನ್‌ ಗಳಿಸಿದ್ದರು. ಆದರೆ ವಿಂಡೀಸ್ ಎದುರಿನ ಟೆಸ್ಟ್ ಸರಣಿಗೆ ಅವರನ್ನು ಪರಿಗಣಿಸಿರಲಿಲ್ಲ. ಇದನ್ನು ಭಾರತದ ಹಿರಿಯ ಆಟಗಾರ ಸೌರವ್ ಗಂಗೂಲಿ ಆಕ್ಷೇಪಿಸಿದ್ದರು.

‘19 ವರ್ಷದೊಳಗಿನವರ ತಂಡಕ್ಕೆ ಮತ್ತು ಭಾರತ ‘ಎ’ ತಂಡಕ್ಕೆ ರಾಹುಲ್ ದ್ರಾವಿಡ್ ಕೋಚ್ ಆಗಿದ್ದರು. ಆ ಸಂದರ್ಭದಲ್ಲಿ ಅವರು ನೀಡಿದ ಸಲಹೆಗಳು ಈಗ ನೆರವಿಗೆ ಬರುತ್ತಿವೆ. ವೆಸ್ಟ್ ಇಂಡೀಸ್ ‘ಎ’ ಎದುರಿನ ‘ಟೆಸ್ಟ್’ ಪಂದ್ಯದಲ್ಲಿ ಗಳಿಸಿದ ದ್ವಿಶತಕ ನನ್ನ ವೃತ್ತಿ ಜೀವನದ ಈ ವರೆಗಿನ ಅತ್ಯುತ್ತಮ ಇನಿಂಗ್ಸ್ ಆಗಿದೆ. ಒತ್ತಡ ನಿವಾರಣೆಗೆ ಯುವರಾಜ್ ಸಿಂಗ್ ನೀಡಿದ ಸಲಹೆಗಳು ನೆರವಿಗೆ ಬರುತ್ತಿವೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT