ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿಗ್ಗಜ ಸಚಿನ್ ಹೆಸರಿನಲ್ಲಿದ್ದ 24 ವರ್ಷ ಹಳೆಯ ದಾಖಲೆ ಮುರಿದ ಶುಭಮನ್ ಗಿಲ್

Last Updated 23 ಆಗಸ್ಟ್ 2022, 9:20 IST
ಅಕ್ಷರ ಗಾತ್ರ

ಆತಿಥೇಯಜಿಂಬಾಬ್ವೆ ವಿರುದ್ಧ ಹರಾರೆಯಲ್ಲಿ ನಡೆದ ಮೂರು ಪಂದ್ಯಗಳ ಏಕದಿನ ಕ್ರಿಕೆಟ್ ಸರಣಿಯಲ್ಲಿಭಾರತ ತಂಡ ಕ್ಲೀನ್ ಸ್ವೀಪ್ ಸಾಧನೆ ಮಾಡಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಉತ್ತಮ ಪ್ರದರ್ಶನ ಟೀಂ ಇಂಡಿಯಾ, ಪ್ರಮುಖ ಆಟಗಾರರ ಅನುಪಸ್ಥಿತಿಯಲ್ಲಿಯೂ ಜಯದ ನಗೆ ಬೀರಿದೆ.

ಆಗಸ್ಟ್‌ 18ರಂದು ನಡೆದ ಮೊದಲ ಪಂದ್ಯವನ್ನು 10 ವಿಕೆಟ್‌ ಗಳಿಂದ ಗೆದ್ದಿದ್ದ ಕೆ.ಎಲ್‌.ರಾಹುಲ್ ಬಳಗ, ಆಗಸ್ಟ್‌ 20 ರಂದು ಎರಡನೇ ಪಂದ್ಯವನ್ನು 5 ವಿಕೆಟ್‌ಗಳಿಂದ ಜಯಿಸಿತ್ತು. ಇದೀಗ ಸೋಮವಾರ (ಆಗಸ್ಟ್‌ 22) ನಡೆದ ಅಂತಿಮ ಪಂದ್ಯದಲ್ಲಿ 13 ರನ್‌ ಅಂತರದ ಗೆಲುವು ಸಾಧಿಸಿದೆ.

ಟೂರ್ನಿಯಲ್ಲಿಅಮೋಘವಾಗಿ ಬ್ಯಾಟ್‌ ಬೀಸಿದ ಭಾರತದ ಯುವ ಬ್ಯಾಟರ್‌ಶುಭಮನ್ ಗಿಲ್ ಸರಣಿ ಶ್ರೇಷ್ಠ ಎನಿಸಿಕೊಂಡರು. ಮೊದಲೆರಡು ಪಂದ್ಯಗಳಲ್ಲಿ ಕ್ರಮವಾಗಿ ಅಜೇಯ 82 ರನ್‌ ಹಾಗೂ 33 ಗಳಿಸಿದ್ದ ಅವರು, ಕೊನೇ ಪಂದ್ಯದಲ್ಲಿ ಮೂರಂಕಿ ದಾಟುವುದರೊಂದಿಗೆ ಏಕದಿನ ಕ್ರಿಕೆಟ್‌ನ ಚೊಚ್ಚಲ ಶತಕದ ಸಂಭ್ರಮ ಆಚರಿಸಿಕೊಂಡರು.

ಗಿಲ್ ಸಾಧನೆ
ಟೂರ್ನಿಯ ಅಂತಿಮ ಪಂದ್ಯದಲ್ಲಿ ಕೇವಲ 97 ಎಸೆತಗಳನ್ನು ಎದುರಿಸಿದ ಗಿಲ್‌, 15 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 130 ರನ್ ಕಲೆಹಾಕಿದರು. ಇದರೊಂದಿಗೆ ಅವರು ಜಿಂಬಾಬ್ವೆಯಲ್ಲಿ ನಡೆದ ಏಕದಿನ ಕ್ರಿಕೆಟ್‌ ಪಂದ್ಯದಲ್ಲಿ ಭಾರತ ಪರ ವೈಯಕ್ತಿಕ ಗರಿಷ್ಠ ಮೊತ್ತ ಗಳಿಸಿದ ಸಾಧನೆ ಮಾಡಿದರು.

24 ವರ್ಷಗಳ ಹಿಂದೆ (1998ರಲ್ಲಿ) ಬುಲವಯೊದಲ್ಲಿ ನಡೆದ ಪಂದ್ಯದಲ್ಲಿ ದಿಗ್ಗಜ ಬ್ಯಾಟರ್‌ ಸಚಿನ್‌ ತೆಂಡೂಲ್ಕರ್‌ ಅವರು ಅಜೇಯ 127 ರನ್‌ ಗಳಿಸಿದ್ದದ್ದು ಇಲ್ಲಿಯವರೆಗೆ ದಾಖಲೆಯಾಗಿತ್ತು.

ಅಷ್ಟೇ ಅಲ್ಲ.ವಿದೇಶದಲ್ಲಿ ಶತಕ ಸಿಡಿಸಿದ ಭಾರತದ ಮೂರನೇ ಕಿರಿಯಬ್ಯಾಟರ್‌ ಎಂಬ ಶ್ರೇಯವೂ ಗಿಲ್‌ ಅವರದ್ದಾಯಿತು.ಗಿಲ್‌ ವಯಸ್ಸು ಸೋಮವಾರಕ್ಕೆ 22 ವರ್ಷ 348 ದಿನಗಳು.22ವರ್ಷ 41 ದಿನಗಳಾಗಿದ್ದಾಗ ಆಸ್ಟ್ರೇಲಿಯಾದಲ್ಲಿ ಶತಕ ಸಿಡಿಸಿದ್ದ ಯುವರಾಜ್‌ ಸಿಂಗ್‌ ಹಾಗೂ22 ವರ್ಷ 315 ದಿನಗಳಾಗಿದ್ದಾಗ ಇಂಗ್ಲೆಂಡ್‌ನಲ್ಲಿ ಶತಕ ಬಾರಿಸಿದ್ದ ವಿರಾಟ್ ಕೊಹ್ಲಿ ಗಿಲ್‌ಗಿಂತ ಮುಂದಿದ್ದಾರೆ.

ಈ ಸಾಧನೆ ಜೊತೆಗೆಜಿಂಬಾಬ್ವೆ ವಿರುದ್ಧ ಶತಕ ಸಿಡಿಸಿದ ಎರಡನೇ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಯೂ ಗಿಲ್‌ ಅವರದ್ದಾಗಿದೆ. ಮೊಹಮ್ಮದ್ ಕೈಫ್‌ ಅವರೂ ಈ ಪಟ್ಟಿಯಲ್ಲಿ ಮೊದಲಿಗರಾಗಿದ್ದಾರೆ. ಕೈಫ್‌, ತಮಗೆ 21 ವರ್ಷ287 ದಿನಗಳಾಗಿದ್ದಾಗ ನೂರು ರನ್‌ ಗಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT