ಕೋಲ್ಕತ್ತ: ಟಿ20 ವಿಶ್ವಕಪ್ನ ಬಲಿಷ್ಠ ತಂಡವಾಗಿದ್ದ ದಕ್ಷಿಣ ಆಫ್ರಿಕಾ ತಂಡವು ಇಲ್ಲಿನ ಈಡನ್ ಗಾರ್ಡನ್ ಕ್ರಿಕೆಟ್ ಮೈದಾನದಲ್ಲಿ ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡದ ವಿರುದ್ಧ ಸೋತು ನಿರಾಸೆ ಅನುಭವಿಸಿದೆ.

ಪಂದ್ಯದ ಬಳಿಕ ಮಾತನಾಡಿದ ದಕ್ಷಿಣ ಆಫ್ರಿಕಾ ತಂಡದ ಮುಖ್ಯ ತರಬೇತುದಾರ ಶುಕ್ರಿ ಕಾನ್ರಾಡ್ ಅವರು ತಂಡದ ಪ್ರದರ್ಶನದ ಕುರಿತು ಬೇಸರ ವ್ಯಕ್ತಪಡಿಸಿದ್ದಾರೆ.

ಪಂದ್ಯದ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ ಅವರಿಗೆ ಪತ್ರಕರ್ತರು ’ಚೋಕರ್ಸ್’ ಹಣೆಪಟ್ಟಿ ಮತ್ತೆ ಮುಂದುವರೆದಿದೆ ಎಂದು ಎನಿಸುವುದಿಲ್ಲವೇ? ಎಂದು ಕೇಳಿದರು. ಇದಕ್ಕೆ ಉತ್ತರಿಸಿದ ಶುಕ್ರಿ ಕಾನ್ರಾಡ್ ಅವರು ‘ಚೋಕರ್ಸ್ ಎಂಬ ಪ್ರಶ್ನೆ ಬರುವುದು ನಾವು ಹೋರಾಡಿ ಸೋತಾಗ ಮಾತ್ರ. ಆದರೆ, ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ನಾವು ಪ್ರತಿರೋಧ ತೋರದೆ ಸೋಲು ಅನುಭವಿಸಿದ್ದೇವೆ. ಹಾಗಾಗಿ, ಇಲ್ಲಿ ಚೋಕರ್ಸ್ ಎಂಬ ಪ್ರಶ್ನೆ ಉದ್ಭವಿಸುವುದಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

‘ನ್ಯೂಜಿಲೆಂಡ್ ತಂಡವು ನಮಗೆ ಯಾವುದೇ ಸಂದರ್ಭದಲ್ಲಿ ಗೆಲ್ಲುವ ಸಣ್ಣ ಅವಕಾಶವನ್ನೂ ನೀಡಿಲಿಲ್ಲ. ಪಂದ್ಯದ ಉದ್ದಕ್ಕೂ ಅವರು ಮೇಲುಗೈ ಸಾಧಿಸಿ, ಏಕಪಕ್ಷೀಯವಾಗಿ ಗೆಲುವು ಸಾಧಿಸಿದರು. ದಕ್ಷಿಣ ಆಫ್ರಿಕಾದಲ್ಲಿ ಇದಕ್ಕೆ ಮೋರ್ಡ್ ಎನ್ನುತ್ತೇವೆ’ ಎಂದು ಕಾನ್ರಾಡ್ ಅವರು ಹೇಳಿದರು.

ಮಾತ್ರವಲ್ಲ, ಈ ಪಂದ್ಯದಲ್ಲಿ ನಮಗೆ ಸ್ನಾಟ್ಕ್ಲಾಪ್ಡ್ ಆಗಿದೆ. ಅಂದರೆ, ಸರಿಯಾಗಿ ಒದೆ ತಿಂದಿದ್ದೇವೆ ಅಥವಾ ಒದ್ದು ಹೊರಹಾಕಿದ್ದಾರೆ ಎಂದು ಹೇಳಿದರು.
.T20 World Cup: ದಕ್ಷಿಣ ಆಫ್ರಿಕಾವನ್ನು ಮಣಿಸಿ ಫೈನಲ್ಗೇರಿದ ನ್ಯೂಜಿಲೆಂಡ್.T20 WC: ಫಿನ್ ಅಲೆನ್ ದಾಖಲೆ ವೇಗದ ಶತಕ; ದ.ಆಫ್ರಿಕಾ ವಿಶ್ವಕಪ್ ಕನಸು ಭಗ್ನ.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ ತಂಡವು ನಿಗದಿತ 20 ಓವರ್ಗಳಲ್ಲಿ 169 ರನ್ ಕಲೆಹಾಕಿತ್ತು. ಈ ಸವಾಲಿನ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್ ತಂಡವು ಟಿಮ್ ಸೈಫರ್ಟ್ ಅರ್ಧಶತಕ ಹಾಗೂ ಫಿನ್ ಅಲೆನ್ ಸ್ಫೋಟಕ ಶತಕದ ನೆರವಿನಿಂದ ಕೇವಲ 12.5 ಓವರ್ಗಳಲ್ಲಿ 173 ರನ್ ಸಿಡಿಸಿ 9 ವಿಕೆಟ್ಗಳ ಜಯ ಸಾಧಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.