ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತ್ಯೇಕವಾಸದಲ್ಲಿ ವೆಸ್ಟ್‌ ಇಂಡೀಸ್‌ ಕೋಚ್‌ ಸಿಮನ್ಸ್‌ ಫಿಲ್‌ ಸಿಮನ್ಸ್‌

Last Updated 28 ಜೂನ್ 2020, 5:58 IST
ಅಕ್ಷರ ಗಾತ್ರ

ಮ್ಯಾಂಚೆಸ್ಟರ್‌, ಇಂಗ್ಲೆಂಡ್‌: ವೆಸ್ಟ್‌ ಇಂಡೀಸ್‌ ಕ್ರಿಕೆಟ್‌ ತಂಡದ ಕೋಚ್‌ ಫಿಲ್‌ ಸಿಮನ್ಸ್‌ ಅವರು ಅಂತ್ಯಕ್ರಿಯೆಯೊಂದರಲ್ಲಿ ಭಾಗವಹಿಸಿದ ಕಾರಣ ಪ್ರತ್ಯೇಕವಾಸಕ್ಕೆ ಒಳಗಾಗಲಿದ್ದಾರೆ. ಇದರಿಂದ ಇಂಗ್ಲೆಂಡ್‌ ವಿರುದ್ಧದ ಸರಣಿಗೆ ತಮ್ಮ ತಂಡ ನಡೆಸುತ್ತಿರುವ ಸಿದ್ಧತೆಗೆ ಯಾವುದೇ ಅಡ್ಡಿಯಾಗದು ಎಂದು ವಿಂಡೀಸ್‌ ವೇಗಿ ಅಲ್ಜರಿ ಜೋಸೆಫ್‌ ಹೇಳಿದ್ದಾರೆ.

ಶುಕ್ರವಾರ ವ್ಯಕ್ತಿಯೊಬ್ಬರ ಅಂತ್ಯಕ್ರಿಯೆಯಲ್ಲಿ ಸಿಮನ್ಸ್‌ ಭಾಗವಹಿಸಿದ್ದರು. ಸದ್ಯ ಅವರು ತಾವು ತಂಗಿರುವ ಓಲ್ಡ್‌ ಟ್ರಾಫರ್ಡ್‌ನ ಹೊಟೇಲ್‌ ರೂಮ್‌ನಲ್ಲಿ ಪ್ರತ್ಯೇಕವಾಸದಲ್ಲಿದ್ದಾರೆ. ಎರಡು ಸುತ್ತಿನ ಕೋವಿಡ್‌–19 ತಪಾಸಣೆಯ ಬಳಿಕ ಗುರುವಾರ ತಂಡ ಸೇರಿಕೊಳ್ಳುವ ಸಾಧ್ಯತೆಯಿದೆ.

‘ನಮ್ಮ ಸಿದ್ಧತೆಯಲ್ಲಿ ನಾವು ನಿರತರಾಗಿದ್ದೇವೆ. ನಮ್ಮ ಬಳಿ ತರಬೇತಿ ಸಿಬ್ಬಂದಿಗೆ ಕೊರತೆಯಿಲ್ಲ. ಸಹಾಯಕ ಕೋಚ್‌ಗಳು ಆಟಗಾರರಿಗೆ ಅಗತ್ಯ ನೆರವು ನೀಡುತ್ತಾರೆ. ಸಿಮನ್ಸ್‌ ಅವರ ಅನುಪಸ್ಥಿತಿಯು ಸರಣಿಗೆ ಸಜ್ಜುಗೊಳ್ಳಲು ಅಡ್ಡಿಯಾಗದು’ ಎಂದು ಶನಿವಾರ ಬ್ರಿಟಿಷ್‌ ಸುದ್ದಿಸಂಸ್ಥೆಗಳಿಗೆ ಜೋಸೆಫ್‌ ತಿಳಿಸಿದ್ದಾರೆ.

ಸಹಾಯಕ ಕೋಚ್‌ಗಳಾದ ರ‍್ಯಾಡಿ ಎಸ್ಟವಿಕ್‌ ಮತ್ತು ರೆಯಾನ್‌ ಗ್ರಿಫಿತ್‌ ಅವರು ಸೋಮವಾರ ನಡೆಯುವ ತಂಡದ ಎರಡನೇ ಅಭ್ಯಾಸ ಪಂದ್ಯದ ಮೇಲುಸ್ತುವಾರಿ ವಹಿಸಿಕೊಳ್ಳಲಿದ್ದಾರೆ. ಜುಲೈ 8ರಂದು ಸೌತಾಂಪ್ಟನ್‌ನಲ್ಲಿ ಇಂಗ್ಲೆಂಡ್‌ ಹಾಗೂ ವೆಸ್ಟ್‌ ಇಂಡೀಸ್‌ ನಡುವೆ ಮೊದಲ ಟೆಸ್ಟ್‌ ಆರಂಭವಾಗಲಿದೆ.

23 ವರ್ಷದ ಜೋಸೆಫ್‌ ಅವರು ವೇಗದ ಬೌಲಿಂಗ್‌ನಲ್ಲಿ ನಾಯಕ ಜೇಸನ್‌ ಹೋಲ್ಡರ್‌, ಕೇಮರ್‌ ರೋಚ್‌ ಹಾಗೂ ಶಾನನ್‌ ಗೇಬ್ರಿಯಲ್‌ ಅವರಿಗೆ ಸಾಥ್‌‌ ನೀಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT