ಭಾನುವಾರ, ಜನವರಿ 17, 2021
22 °C
ಜೀವಸುರಕ್ಷಾ ನಿಯಮ ಉಲ್ಲಂಘನೆ: ನ್ಯೂಜಿಲೆಂಡ್‌ ಕ್ರಿಕೆಟ್‌ ಮಂಡಳಿ ಆರೋಪ

ಪಾಕಿಸ್ತಾನದ ಆರು ಕ್ರಿಕೆಟಿಗರಿಗೆ ಕೋವಿಡ್‌–19

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಕ್ರೈಸ್ಟ್‌ಚರ್ಚ್‌: ನ್ಯೂಜಿಲೆಂಡ್‌ ಪ್ರವಾಸದಲ್ಲಿರುವ ಪಾಕಿಸ್ತಾನ ಕ್ರಿಕೆಟ್‌ ತಂಡದ ಆರು ಮಂದಿ ಆಟಗಾರರಲ್ಲಿ ಕೋವಿಡ್‌–19 ದೃಢಪಟ್ಟಿದೆ. ನ್ಯೂಜಿಲೆಂಡ್‌ ಕ್ರಿಕೆಟ್‌ ಮಂಡಳಿ (ಎನ್‌ಜೆಡ್‌ಸಿ) ಈ ವಿಷಯವನ್ನು ಖಚಿತಪಡಿಸಿದ್ದು, ಕ್ವಾರಂಟೈನ್ ಅವಧಿಯಲ್ಲಿ ಆಟಗಾರರು ಜೀವಸುರಕ್ಷಾ ನಿಯಮ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿದೆ. ಪ್ರವಾಸಿ ತಂಡದ ಆಟಗಾರರಿಗೆ ‘ಅಂತಿಮ ಎಚ್ಚರಿಕೆ‘ಯನ್ನೂ ನೀಡಿದೆ.

ಬಾಬರ್‌ ಆಜಂ ನಾಯಕತ್ವದ ಪಾಕಿಸ್ತಾನದ 53 ಮಂದಿ ಆಟಗಾರರು ಹಾಗೂ ಸಿಬ್ಬಂದಿಯ ತಂಡ, ಮಂಗಳವಾರ ನ್ಯೂಜಿಲೆಂಡ್‌ಗೆ ಬಂದಿಳಿದಿದೆ. ಕೋವಿಡ್‌–19 ತಡೆ ನಿಯಮಗಳ ಅನ್ವಯ 14 ದಿನಗಳ ಕ್ವಾರಂಟೈನ್ ಅವಧಿ ಪೂರ್ಣಗೊಳಿಸಬೇಕಿದೆ.

‘ಆರು ಮಂದಿಯಲ್ಲಿ ಇಬ್ಬರಿಗೆ ಮೊದಲೇ ಸೋಂಕು ತಗುಲಿತ್ತು ಎನ್ನಲಾಗಿದ್ದು, ನಾಲ್ವರು ಆಟಗಾರರಲ್ಲಿ ಹೊಸದಾಗಿ ವೈರಾಣು  ಪತ್ತೆಯಾಗಿದೆ‘ ಎಂದು ಎನ್‌ಜೆಡ್‌ಸಿ ಹೇಳಿದೆ. ಆದರೆ ಕೋವಿಡ್‌ ದೃಢಪಟ್ಟ ಆಟಗಾರರ ಹೆಸರನ್ನು ಅದು ಬಹಿರಂಗಪಡಿಸಿಲ್ಲ.

ಸೋಂಕು ತಗುಲಿರುವ ಆರು ಮಂದಿ ಆಟಗಾರರನ್ನು ಪ್ರತ್ಯೇಕವಾಸದಲ್ಲಿರಿಸಲಾಗಿದೆ. ಪಾಕಿಸ್ತಾನ ತಂಡವು ಆತಿಥೇಯರ ವಿರುದ್ಧ ಮೂರು ಟ್ವೆಂಟಿ–20 ಹಾಗೂ ಎರಡು ಟೆಸ್ಟ್ ಪಂದ್ಯಗಳನ್ನು ಆಡಬೇಕಿದೆ. ಡಿಸೆಂಬರ್‌ 18ರಂದು ಆಕ್ಲೆಂಡ್‌ನಲ್ಲಿ ಸರಣಿ ಆರಂಭವಾಗಲಿದೆ.

‘ಆಟಗಾರರಿಗೆ ಸೋಂಕು ತಗುಲಿರುವ ಕಾರಣ, ಈ ಕುರಿತು ತನಿಖೆ ನಡೆದು ಪೂರ್ಣಗೊಳ್ಳುವರೆಗೂ ಪಾಕ್‌ ತಂಡದ ಅಭ್ಯಾಸವನ್ನು ತಡೆಹಿಡಿಯಲಾಗಿದೆ‘ ಎಂದು ಎನ್‌ಜೆಡ್‌ಸಿ ಹೇಳಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು