ಸ್ಥಾನ ಪಡೆದ ಡೇವಿಡ್‌ ವಾರ್ನರ್‌, ಸ್ಮಿತ್‌

ಮಂಗಳವಾರ, ಏಪ್ರಿಲ್ 23, 2019
27 °C
ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಗೆ ಆಸ್ಟ್ರೇಲಿಯಾ ತಂಡ ಪ್ರಕಟ

ಸ್ಥಾನ ಪಡೆದ ಡೇವಿಡ್‌ ವಾರ್ನರ್‌, ಸ್ಮಿತ್‌

Published:
Updated:
Prajavani

ಸಿಡ್ನಿ: ಚೆಂಡು ವಿರೂಪ ಪ್ರಕರಣದಲ್ಲಿ ಒಂದು ವರ್ಷ ನಿಷೇಧ ಶಿಕ್ಷೆಗೆ ಒಳಗಾಗಿದ್ದ ಸ್ಟೀವ್ ಸ್ಮಿತ್‌ ಮತ್ತು ಡೇವಿಡ್‌ ವಾರ್ನರ್‌ ಅವರು ವಿಶ್ವಕಪ್‌ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಆ್ಯರನ್‌ ಫಿಂಚ್‌ ನಾಯಕತ್ವದಲ್ಲಿ 15 ಜನರ ತಂಡವನ್ನು ‘ಕ್ರಿಕೆಟ್‌ ಆಸ್ಟ್ರೇಲಿಯಾ’ ಸೋಮವಾರ ಪ್ರಕಟಿ ಸಿದ್ದು, ಐಪಿಎಲ್‌ನಲ್ಲಿ ಉತ್ತಮವಾಗಿ ಆಡುತ್ತಿರುವ  ವಾರ್ನರ್‌ ಮತ್ತು ಸ್ಮಿತ್‌ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡರು.

ಭಾರತ ಹಾಗೂ ಪಾಕಿಸ್ತಾನ ವಿರುದ್ಧದ ಪಂದ್ಯಗಳಲ್ಲಿ ಮಾಡಿದ ಸಾಧನೆಯ ಆಧಾರದ ಮೇಲೆ ಆಟಗಾರರನ್ನು ಪರಿಗಣಿಸಲಾಗಿದೆ ಎಂದು ಆಯ್ಕೆ ಸಮಿತಿ ಮುಖ್ಯಸ್ಥ ಟ್ರೇವರ್ ಹಾನ್ಸ್ ತಿಳಿಸಿದರು.

ಟೆಸ್ಟ್‌ ಆಟಗಾರ ಉಸ್ಮಾನ್ ಖ್ವಾಜಾ ಅವರು ಪಟ್ಟಿಯಲ್ಲಿ ಸ್ಥಾನಗಿಟ್ಟಿಸಿಕೊಂಡಿದ್ದು, ಫಿಂಚ್‌ ಅಥವಾ ವಾರ್ನರ್‌ ಜೊತೆ ಆರಂಭಿಕರಾಗಿ ಕಣಕ್ಕಿಳಿಯುವರು. ಅನುಭವಿ ಶಾನ್‌ ಮಾರ್ಷ್‌, ಸ್ಫೋಟಕ ಬ್ಯಾಟ್ಸ್‌ಮನ್ ಗ್ಲೇನ್‌ ಮ್ಯಾಕ್ಸ್‌ವೆಲ್‌, ಆಲ್‌ರೌಂಡರ್‌ ಮಾರ್ಕಸ್‌ ಸ್ಟೋನಿಸ್‌ ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ಬಲ ತುಂಬಲಿದ್ದಾರೆ. 

ಗಾಯ ಸಮಸ್ಯೆಯಿಂದ ಬಳಲು ತ್ತಿರುವ ಜೋಶ್‌ ಹ್ಯಾಜಲ್‌ವುಡ್ ಮತ್ತು ಸ್ಥಿರ ಪ್ರದರ್ಶನ ನೀಡದ ಪೀಟರ್ ಹ್ಯಾಂಡ್ಸ್‌ಕಂಬ್ ಅವರನ್ನು ‍ಪಟ್ಟಿಯಿಂದ ಕೈಬಿಡಲಾಗಿದೆ. ನಿರೀಕ್ಷೆಯಂತೆ ವಿಕೆಟ್‌ ಕೀಪರ್ ಅಲೆಕ್ಸ್ ಕ್ಯಾರಿ, ಸ್ಪಿನ್ನರ್‌ಗಳಾದ  ನೇಥನ್ ಲಯನ್, ಆ್ಯಡಂ ಜಂಪಾ ಸ್ಥಾನ ಪಡೆದಿದ್ದಾರೆ. 

ಐಪಿಎಲ್‌ ಆಡುವುದು ಅನುಮಾನ: ಸ್ಟಿವ್‌ ಸ್ಮಿತ್‌ ಮತ್ತು ಡೇವಿಡ್‌ ವಾರ್ನರ್ ಅವರು ಐಪಿಎಲ್‌ನ ಅಂತಿಮ ಹಂತದ ಪಂದ್ಯಗಳಲ್ಲಿ ಆಡುವುದು ಅನುಮಾನ ಎನಿಸಿದೆ. ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಗಾಗಿ ‘ಕ್ರಿಕೆಟ್‌ ಆಸ್ಟ್ರೇಲಿಯಾ’ ಮೇ 2ರಿಂದ ಏರ್ಪಡಿಸಿರುವ ಅಭ್ಯಾಸ ಶಿಬಿರದಲ್ಲಿ ಇವರು ಪಾಲ್ಗೊಳ್ಳವ ಸಾಧ್ಯತೆ ಇದೆ.  

ಆಸ್ಟ್ರೇಲಿಯಾ ಕ್ರಿಕೆಟ್‌ ತಂಡ: ಆ್ಯರನ್ ಫಿಂಚ್, ಉಸ್ಮಾನ್‌ ಖ್ವಾಜಾ, ಡೇವಿಡ್‌ ವಾರ್ನರ್‌, ಸ್ಟೀವ್ ಸ್ಮಿತ್‌, ಗ್ಲೇನ್‌ ಮ್ಯಾಕ್ಸ್‌ವೆಲ್, ಮಾರ್ಕಸ್‌ ಸ್ಟೋನಿಸ್‌, ಅಲೆಕ್ಸ್ ಕ್ಯಾರಿ, ಪ್ಯಾಟ್‌ ಕಮಿನ್ಸ್, ಮಿಶೆಲ್‌ ಸ್ಟಾರ್ಕ್, ಜೇ ರಿಚರ್ಡ್‌ಸನ್‌, ನಾಥನ್‌ ಕೌಲ್ಟರ್‌ ನೈಲ್, ಜೇಸನ್‌ ಬೆಹ್ರೆನ್‌ಡ್ರಾಫ್‌, ನೇಥನ್ ಲಯನ್‌, ಆ್ಯಡಂ ಜಂಪಾ

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !