ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

WPL Auction| ಮಾರಾಟವಾದ ಮೊದಲ ಆಟಗಾರ್ತಿ ಸ್ಮೃತಿ: ₹3.4 ಕೋಟಿಗೆ ಖರೀದಿಸಿದ RCB

Last Updated 13 ಫೆಬ್ರುವರಿ 2023, 10:33 IST
ಅಕ್ಷರ ಗಾತ್ರ

ಮುಂಬೈ: ಬಹು ನಿರೀಕ್ಷಿತ ಮಹಿಳಾ ಪ್ರೀಮಿಯರ್‌ ಲೀಗ್‌ನ ಮೊದಲ ಹರಾಜಿನಲ್ಲಿ ಮಾರಾಟವಾದ ಮೊದಲ ಆಟಗಾರ್ತಿ ಸ್ಮೃತಿ ಮಂದಾನ ಅವರಾಗಿದ್ದು, ₹3.4 ಕೋಟಿಗೆ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಸೇರಿದ್ದಾರೆ.

ಚೊಚ್ಚಲ ಮಹಿಳಾ ಪ್ರೀಮಿಯರ್ ಲೀಗ್‌ (ಡಬ್ಲ್ಯುಪಿಎಲ್‌) ಕ್ರಿಕೆಟ್‌ ಟೂರ್ನಿಗಾಗಿ ಆಟಗಾರ್ತಿಯರ ಹರಾಜು ಪ್ರಕ್ರಿಯೆ ಸೋಮವಾರ ಮುಂಬೈನಲ್ಲಿ ಆರಂಭವಾಗಿದೆ.

26 ವರ್ಷದ ಬ್ಯಾಟರ್ ಸ್ಮೃತಿ ಮಂದಾನ ಅವರ ಮೂಲ ಬೆಲೆ ₹ 50 ಲಕ್ಷವಾಗಿತ್ತು.

ಮುಂಬೈ ಇಂಡಿಯನ್ಸ್ ಮಂದಾನಾ ಅವರಿಗಾಗಿ ಮೊದಲು ಬಿಡ್ ಮಾಡಿತು. ನಂತರ ಆರ್‌ಸಿಬಿ ಬಿಡ್‌ನಲ್ಲಿ ಸೇರಿಕೊಂಡಿತು. ಭಾರತದ ಟಿ20 ಉಪನಾಯಕಿಗಾಗಿ ಆರ್‌ಸಿಬಿ ಮತ್ತು ಮುಂಬೈ ಇಂಡಿಯನ್‌ ನಡುವೆ ತೀವ್ರ ಪೈಪೋಟಿ ನಡೆಯಿತು. ಮುಂಬೈ ತನ್ನ ಬಿಡ್ಡಿಂಗ್‌ ಅನ್ನು ₹2.20 ಕೋಟಿಗೆ ಏರಿಸಿತ್ತಾದರೂ, ಬಿಡ್ಡಿಂಗ್‌ನಿಂದ ಹಿಂದೆ ಸರಿಯದ ಆರ್‌ಸಿಬಿ ₹3.4 ಕೋಟಿಗೆ ಅವರನ್ನು ತಂಡಕ್ಕಾಗಿ ಪಡೆದುಕೊಂಡಿತು.

ಮಂದಾನ 112 ಟಿ20 ಪಂದ್ಯಗಳಲ್ಲಿ 2,651 ರನ್ ಗಳಿಸಿದ್ದಾರೆ.

ಮಹಿಳಾ ಬಿಗ್‌ಬಾಷ್‌ ಲೀಗ್‌, ದಿ ಹಂಡ್ರೆಡ್‌ ಟೂರ್ನಿಗಳಲ್ಲಿ ಆಡಿರುವ ಸ್ಮೃತಿ ಅವರು ಫ್ರಾಂಚೈಸ್‌ ಕ್ರಿಕೆಟ್‌ನಲ್ಲಿ ಪರಿಣತ ಆಟಗಾರ್ತಿಯಾಗಿದ್ದಾರೆ. ಟಿ20 ಮಾದರಿಯಲ್ಲಿ ಸ್ಥಿರ ಸಾಮರ್ಥ್ಯದ ಮೂಲಕ ಗಮನಸೆಳೆದಿದ್ದಾರೆ.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT