ಭಾನುವಾರ, ನವೆಂಬರ್ 27, 2022
26 °C

IND vs SA 2nd T20 | ಆಟದ ವೇಳೆ ಮೈದಾನಕ್ಕೆ ಬಂದ ಹಾವು 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುವಾಹಟಿ (ಅಸ್ಸಾಂ): ಗುವಾಹಟಿಯಲ್ಲಿ ನಡೆಯುತ್ತಿರುವ ಭಾರತ-ದಕ್ಷಿಣ ಆಫ್ರಿಕಾ ನಡುವಿನ ಎರಡನೇ ಟಿ20 ಪಂದ್ಯದ ವೇಳೆ ಮೈದಾನಕ್ಕೆ ಹಾವು ಪ್ರವೇಶಿಸಿದ್ದು, ಕೆಲ ಕಾಲ ಆಟವನ್ನು ನಿಲ್ಲಿಸಲಾಗಿತ್ತು. 

ಟಾಸ್‌ ಸೋತರೂ ಭಾರತಕ್ಕೆ ಮೊದಲು ಬ್ಯಾಟಿಂಗ್‌ ಮಾಡುವ ಅವಕಾಶ ಪಡೆದುಕೊಂಡಿತು. ಪಂದ್ಯದ ಏಳನೇ ಓವರ್‌ನ ನಂತರ ಹಾವು ಕ್ರೀಡಾಂಗಣದಲ್ಲಿ ಕಾಣಿಸಿಕೊಂಡಿದೆ. ಕ್ರೀಡಾಂಗಣದ ಸಿಬ್ಬಂದಿ ಮೈದಾನಕ್ಕಿಳಿದು ಹಾವನ್ನು ಅಲ್ಲಿಂದ ದೂರಕ್ಕೆ ಅಟ್ಟಿದರು. ನಂತರ ಆಟವು ಪುನರಾರಂಭವಾಯಿತು.

ಕ್ರಿಕೆಟ್ ಪಂದ್ಯವನ್ನು ಹಾವೊಂದು ನಿಲ್ಲಿಸಿದ್ದನ್ನು ನೋಡಿರಲಿಲ್ಲ ಎಂದು ಅಭಿಮಾನಿಯೊಬ್ಬರು ಟ್ವೀಟ್ ಮಾಡಿದ್ದಾರೆ.

ಓದಿ... ಸೂರ್ಯಕುಮಾರ್‌ ಅಬ್ಬರ: ದ.ಆಫ್ರಿಕಾಕ್ಕೆ 238 ರನ್‌ ಕಠಿಣ ಗುರಿ 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು