ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ಎ– ಆಸ್ಟ್ರೇಲಿಯಾ ಎ ಅಭ್ಯಾಸ ಪಂದ್ಯ: ಸಹಾ ಅರ್ಧಶತಕ: ಪಂದ್ಯ ಡ್ರಾ

Last Updated 8 ಡಿಸೆಂಬರ್ 2020, 12:38 IST
ಅಕ್ಷರ ಗಾತ್ರ

ಸಿಡ್ನಿ:ಭಾರತ ಎ ಮತ್ತು ಆಸ್ಟ್ರೇಲಿಯಾ ಎ ನಡುವಣ ಮೊದಲ ಅಭ್ಯಾಸ ಪಂದ್ಯವು ಮಂಗಳವಾರ ಡ್ರಾ ಆಯಿತು.

ವೃದ್ಧಿಮಾನ್ ಸಹಾ (ಔಟಾಗದೆ 54;100 ಎಸೆತ ) ತಾಳ್ಮೆಯ ಅರ್ಧಶತಕ ಗಳಿಸಿದ ಟೆಸ್ಟ್ ಪಂದ್ಯದ ಆಟಕ್ಕೆ ಭರ್ಜರಿ ಅಭ್ಯಾಸ ನಡೆಸಿದರು.

ಭಾರತ ಎ ತಂಡವು ಎರಡನೇ ಇನಿಂಗ್ಸ್‌ನಲ್ಲಿ 61 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 189 ರನ್ ಗಳಿಸಿತು. ಆಸ್ಟ್ರೇಲಿಯಾ ಎ ತಂಡದ ಬೌಲರ್ ಮಾರ್ಕ್ ಸ್ಟೆಕೆಟಿ ಐದು ವಿಕೆಟ್‌ ಗಳಿಸಿದರು. ಪಂದ್ಯದ ಮೂರನೇ ದಿನದಾಟದ ಕೊನೆಗೆ ಆಸ್ಟ್ರೇಲಿಯಾ ಎ ತಂಡವು 15 ಓವರ್‌ಗಳಲ್ಲಿ 1 ವಿಕೆಟ್‌ಗೆ 52 ರನ್ ಗಳಿಸಿತು. ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಅಜಿಂಕ್ಯ ರಹಾನೆ ಶತಕ ಹೊಡೆದಿದ್ದರು.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಭಾರತ ಎ: 247, ಆಸ್ಟ್ರೇಲಿಯಾ ಎ: 306. ಎರಡನೇ ಇನಿಂಗ್ಸ್:ಭಾರತ ಎ: 61 ಓವರ್‌ಗಳಲ್ಲಿ 9ಕ್ಕೆ 189 (ಹನುಮವಿಹಾರಿ 28, ಅಜಿಂಕ್ಯ ರಹನಾನೆ 28, ವೃದ್ಧಿಮಾನ್ ಸಹಾ ಔಟಾಗದೆ 54, ಮೈಕೆಲ್ ನೆಸರ್ 41ಕ್ಕೆ2, ಗ್ರೀನ್ 12ಕ್ಕೆ2, ಮಾರ್ಕ್‌ ಸ್ಟೇಕೆಟಿ 37ಕ್ಕೆ5), ಆಸ್ಟ್ರೇಲಿಯಾ ಎ: 15 ಓವರ್‌ಗಳಲ್ಲಿ 1 ವಿಕೆಟ್‌ಗೆ 52 (ವಿಲ್ ಪುಕೊವಸ್ಕೀ 23, ಮಾರ್ಕಸ್ ಹ್ಯಾರಿಸ್ ಔಟಾಗದೆ 25, ಉಮೇಶ್ ಯಾದವ್ 14ಕ್ಕೆ1) ಪಂದ್ಯ ಡ್ರಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT