ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಸಿಸಿ ಪುರುಷರ ಕ್ರಿಕೆಟ್‌ ಸಮಿತಿಗೆ ಅಧ್ಯಕ್ಷರಾಗಿ ಗಂಗೂಲಿ

Last Updated 17 ನವೆಂಬರ್ 2021, 9:08 IST
ಅಕ್ಷರ ಗಾತ್ರ

ದುಬೈ: ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ ಅಧ್ಯಕ್ಷ ಸೌರವ್‌ ಗಂಗೂಲಿ ಅವರು ಐಸಿಸಿಯ ಪುರುಷರ ಕ್ರಿಕೆಟ್‌ ಸಮಿತಿ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ ಎಂದು ಐಸಿಸಿ ಪ್ರಕಟಣೆ ಬುಧವಾರ ತಿಳಿಸಿದೆ.

ಗಂಗೂಲಿ ಭಾರತದವರೇ ಆದ ಅನಿಲ್‌ ಕುಂಬ್ಳೆ ಅವರ ಸ್ಥಾನಕ್ಕೆ ನೇಮಕಗೊಂಡಿದ್ದಾರೆ. ಕುಂಬ್ಳೆ ಮೂರು ವರ್ಷಗಳ ಗರಿಷ್ಠ ಮೂರು ಅವಧಿಯನ್ನು ಪೂರೈಸಿದ್ದಾರೆ. ಅವರು 2012ರಿಂದ ಈ ಸ್ಥಾನದಲ್ಲಿದ್ದರು.

‘ಗಂಗೂಲಿ ಅವರನ್ನು ಐಸಿಸಿಯ ಪುರುಷರ ಕ್ರಿಕೆಟ್ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ಸ್ವಾಗತಿಸಲು ಸಂತಸ ಎನಿಸುತ್ತಿದೆ’ ಎಂದು ಐಸಿಸಿ ಚೇರ್ಮನ್‌ ಗ್ರೆಗ್‌ ಬಾರ್ಕ್ಲೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ವಿಶ್ವದ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾಗಿ, ನಂತರ ಆಡಳಿತಗಾರರಾಗಿ ಅವರು ಹೊಂದಿರುವ ಅನುಭವ ಕ್ರಿಕೆಟ್‌ಗೆ ಸಂಬಂಧಿಸಿದ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ನೆರವಾಗಲಿದೆ’ ಎಂದು ಅವರು ಹೇಳಿದರು.

‘ಒಂಬತ್ತು ವರ್ಷಗಳಿಂದ ಅತ್ಯುತ್ತಮ ರೀತಿ ಮುನ್ನಡೆಸಿದ ಅನಿಲ್‌ (ಕುಂಬ್ಳೆ) ಅವರಿಗೂ ಧನ್ಯವಾದ ಹೇಳಲು ಬಯಸುತ್ತೇನೆ’ ಎಂದೂ ತಿಳಿಸಿದರು. ಈ ಅವಧಿಯಲ್ಲಿ ಡಿಆರ್‌ಎಸ್‌ ಮತ್ತು ಅನುಮಾನಾಸ್ಪದ ಬೌಲಿಂಗ್‌ ಶೈಲಿಗೆ ಸಂಬಂಧಿಸಿ ಸುಧಾರಿತ ತಂತ್ರಜ್ಞಾನಗಳ ಬಳಕೆಯಾಗಿರುವುದನ್ನು ಅವರು ಉಲ್ಲೇಖಿಸಿದರು.

ಕ್ರಿಕೆಟ್‌ ವೆಸ್ಟ್‌ ಇಂಡೀಸ್‌ನ ಸಿಇಒ ಜಾನಿ ಗ್ರೇವ್ ಅವರನ್ನು ಐಸಿಸಿ ಮಹಿಳಾ ಕ್ರಿಕೆಟ್‌ ಸಮಿತಿಗೆ ನೇಮಕ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT