ದುಬೈ: ಟಿ20 ವಿಶ್ವಕಪ್ನಿಂದ ಹೊರಬಿದ್ದಿದ್ದರೂ, ಕೊಲ್ಲಿ ರಾಷ್ಟ್ರಗಳ ವಾಯು ಪ್ರದೇಶ ನಿರ್ಬಂಧದ ಕಾರಣ ಕೋಲ್ಕತ್ತದಲ್ಲೇ ಸಿಲುಕಿಕೊಂಡಿದ್ದ ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ಕ್ರಿಕೆಟ್ ಆಟಗಾರರ ಕೊನೆಯ ತಂಡ ತವರಿಗೆ ಪ್ರಯಾಣ ಬೆಳೆಸಿದೆ ಎಂದು ಐಸಿಸಿ ಗುರುವಾರ ಪ್ರಕಟಿಸಿದೆ.

ಪಶ್ಚಿಮ ಏಷ್ಯಾದಲ್ಲಿ ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ಯುದ್ಧ ಘೋಷಿಸಿದ ನಂತರ ಕೊಲ್ಲಿ ರಾಷ್ಟ್ರಗಳ ಮೇಲೂ ಅದರ ಪರಿಣಾಮವಾಗಿ ವಿಮಾನಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿತ್ತು. ಹೀಗಾಗಿ ವಿಂಡೀಸ್ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ಮರುಪ್ರಯಾಣದ ಯೋಜನೆಗೆ ವಿಘ್ನಗಳು ಎದುರಾಗಿದ್ದವು.

ವೆಸ್ಟ್ ಇಂಡೀಸ್ ತಂಡ ಈಡನ್ಗಾರ್ಡನ್ನಲ್ಲಿ ಮಾರ್ಚ್ 1ರಂದು ಭಾರತ ವಿರುದ್ಧ ಸೂಪರ್ ಎಂಟರ ಪಂದ್ಯದಲ್ಲಿ ಸೋತಿತ್ತು. ದಕ್ಷಿಣ ಆಫ್ರಿಕಾ ಮಾರ್ಚ್ 4ರಂದು ಕೊನೆಯ ಪಂದ್ಯ (ನ್ಯೂಜಿಲೆಂಡ್ ವಿರುದ್ಧ ಸೆಮಿಫೈನಲ್) ಆಡಿತ್ತು.

ವೆಸ್ಟ್ ಇಂಡೀಸ್ ತಂಡದ 9 ಆಟಗಾರರ ಮೊದಲ ತಂಡ ಈ ವಾರದ ಆರಂಭದಲ್ಲಿ ತವರಿಗೆ ಮರಳಿತ್ತು. ಉಳಿದ ಆಟಗಾರರಿಗೆ ಪ್ರತ್ಯೇಕ ವಿಮಾನಗಳಲ್ಲಿ ಸೀಟು ಕಾದಿರಿಸಲಾಗಿತ್ತು. 29 ಮಂದಿ ಆಟಗಾರರ ದಕ್ಷಿಣ ಆಫ್ರಿಕಾ ತಂಡವೂ ತವರಿಗೆ ಮರಳಿತು.

ಈ ಮೊದಲು ಆಟಗಾರರಿಗೆ ತವರಿಗೆ ಮರಳಲು ಬೇಗನೇ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಐಸಿಸಿ ವಿಫಲವಾಗಿದೆ ಎಂದು ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕೆಲ್ ವಾನ್, ದಕ್ಷಿಣ ಆಫ್ರಿಕಾದ ಆಟಗಾರರಾದ ಕ್ವಿಂಟನ್ ಡಿಕಾಕ್ ಮತ್ತು ಡೇವಿಡ್ ಮಿಲ್ಲರ್ ಟೀಕಿಸಿದ್ದರು. ಇಂಗ್ಲೆಂಡ್ ಆಟಗಾರರಿಗೆ ಉತ್ತಮ ರೀತಿಯಲ್ಲಿ ವ್ಯವಸ್ಥೆ ಮಾಡಿದ್ದನ್ನು ಅವರು ಉಲ್ಲೇಖಿಸಿದ್ದರು. ಇಂಗ್ಲೆಂಡ್ ತಂಡ ಸೆಮಿಫೈನಲ್ ಸೋತ ಮರುದಿನವೇ ತವರಿಗೆ ಹಿಂತಿರುಗಿತ್ತು.

ಪ್ರಯಾಣ ವ್ಯವಸ್ಥೆಯ ಬಗ್ಗೆ ಸರಿಯಾಗಿ ಮಾಹಿತಿ ನೀಡದ್ದಕ್ಕೆ ವೆಸ್ಟ್ ಇಂಡೀಸ್ ಹೆಡ್ ಕೋಚ್ ಡಾರೆನ್ ಸಮಿ ಅವರೂ ಅಸಮಾಧಾನ ಹೊರಹಾಕಿದ್ದರು. ಐಸಿಸಿಯ ವಿಮಾನ ಸಂಚಾರ ಪಾಲುದಾರ ಆಗಿರುವ ಎಮಿರೇಟ್ಸ್, ದುಬೈನಲ್ಲಿ ವಾಯುಪ್ರದೇಶ ಮುಚ್ಚಿರುವ ಕಾರಣ ತನ್ನ ವಿಮಾನಗಳ ಕಾರ್ಯಾಚರಣೆ ನಿಲ್ಲಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.