ಶುಕ್ರವಾರ, ನವೆಂಬರ್ 15, 2019
21 °C

ಭಾರತಕ್ಕೆ ಬಂದ ದಕ್ಷಿಣ ಆಫ್ರಿಕಾ ತಂಡ

Published:
Updated:

ನವದೆಹಲಿ : ಟ್ವೆಂಟಿ–20 ಮತ್ತು ಟೆಸ್ಟ್‌ ಕ್ರಿಕೆಟ್‌ ಸರಣಿಗಳಲ್ಲಿ ಭಾಗವಹಿಸುವ ಸಲುವಾಗಿ ದಕ್ಷಿಣ ಆಫ್ರಿಕಾ ತಂಡದವರು ಶನಿವಾರ ಭಾರತಕ್ಕೆ ಬಂದಿದ್ದಾರೆ.

‘ಕ್ರಿಕೆಟ್‌ ಸರಣಿಗಳನ್ನು ಆಡಲು ಭಾರತಕ್ಕೆ ಮರಳಿರುವುದು ಖುಷಿ ನೀಡಿದೆ. ವಿರಾಟ್‌ ಕೊಹ್ಲಿ ಬಳಗವನ್ನು ಎದುರಿಸಲು ನಾವು ಕಾತರ ರಾಗಿದ್ದೇವೆ’ ಎಂದು ದಕ್ಷಿಣ ಆಫ್ರಿಕಾ ತಂಡದ ವೇಗದ ಬೌಲರ್‌ ಕಗಿಸೊ ರಬಾಡ ಟ್ವೀಟ್‌ ಮಾಡಿದ್ದಾರೆ.

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಣ ಮೂರು ಪಂದ್ಯಗಳ ಟ್ವೆಂಟಿ–20 ಸರಣಿ ಇದೇ ತಿಂಗಳ 15ರಿಂದ ಆರಂಭವಾಗಲಿದೆ. ಮೊದಲ ಪಂದ್ಯ ಧರ್ಮಶಾಲಾದಲ್ಲಿ ನಿಗದಿಯಾಗಿದೆ. ನಂತರದ ಪಂದ್ಯಗಳು ಮೊಹಾಲಿ (ಸೆ.18) ಮತ್ತು ಬೆಂಗಳೂರಿನಲ್ಲಿ (ಸೆ.22) ಆಯೋಜನೆಯಾಗಿವೆ.

ಮೂರು ಪಂದ್ಯಗಳ ಟೆಸ್ಟ್‌ ಸರಣಿಯು ಅಕ್ಟೋಬರ್‌ನಲ್ಲಿ ನಡೆಯಲಿದೆ.

ಪ್ರತಿಕ್ರಿಯಿಸಿ (+)