ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಂಗ್ಲಾಕ್ಕೆ ದಕ್ಷಿಣ ಆಫ್ರಿಕಾ ತಿರುಗೇಟು

Last Updated 20 ಮಾರ್ಚ್ 2022, 19:45 IST
ಅಕ್ಷರ ಗಾತ್ರ

ಜೋಹಾನ್ಸ್‌ಬರ್ಗ್: ವೇಗಿ ಕಗಿಸೊ ರಬಾಡ (39ಕ್ಕೆ5) ಉತ್ತಮ ಬೌಲಿಂಗ್ ನೆರವಿನಿಂದ ದಕ್ಷಿಣ ಆಫ್ರಿಕಾ ತಂಡವು ಭಾನುವಾರ ಇಲ್ಲಿ ನಡೆದ ಏಕದಿನ ಕ್ರಿಕೆಟ್‌ ಪಂದ್ಯದಲ್ಲಿ ಬಾಂಗ್ಲಾದೇಶದ ಎದುರು ಜಯಿಸಿತು.

ವಾಂಡರರ್ಸ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 7 ವಿಕೆಟ್‌ಗಳಿಂದ ಗೆದ್ದಿತು. ಮೊದಲ ಪಂದ್ಯದಲ್ಲಿ ಜಯಿಸಿದ್ದ ಬಾಂಗ್ಲಾಕ್ಕೆ ತಿರುಗೇಟು ನೀಡಿತು.

ಟಾಸ್ ಗೆದ್ದ ಬಾಂಗ್ಲಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ರಬಾಡ ಮತ್ತು ಲುಂಗಿ ಗಿಡಿ ಬೌಲಿಂಗ್‌ಗೆ ಆದರೆ ಆರಂಭದಲ್ಲಿಯೇ ಕುಸಿಯಿತು. ಕೇವಲ 94 ರನ್‌ಗಳಿಗೆ ಆರು ವಿಕೆಟ್‌ಗಳನ್ನು ಕಳೆದುಕೊಂಡಿತು. ಈ ಹಂತದಲ್ಲಿ ಮಿಂಚಿದ ಅಫಿಫ್ ಹುಸೇನ್ (72; 107ಎ, 4X9) ಮತ್ತು ಮೆಹದಿ ಹಸನ್ (38; 49ಎ) ಏಳನೇ ವಿಕೆಟ್ ಜೊತೆಯಾಟದಲ್ಲಿ 86 ರನ್ ಸೇರಿಸಿದರು.

ಗುರಿ ಬೆನ್ನಟ್ಟಿದ ಆತಿಥೇಯ ತಂಡವು 37.2 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 195 ರನ್ ಗಳಿಸಿ ಗೆದ್ದಿತು. ಕ್ವಿಂಟನ್ ಡಿ ಕಾಕ್ (62; 41ಎ), ಕೈಲ್ ವೆರೆಯನ್ (58; 77ಎ) ಅವರು ಅರ್ಧಶತಕ ಹೊಡೆದರು.

ಸಂಕ್ಷಿಪ್ತ ಸ್ಕೋರು: ಬಾಂಗ್ಲಾದೇಶ: 50 ಓವರ್‌ಗಳಲ್ಲಿ 9ಕ್ಕೆ 194 (ಮೆಹಮುದುಲ್ಲಾ 25, ಅಫಿಫ್ ಹುಸೇನ್ 72, ಮೆಹದಿ ಹಸನ್ 38, ಕಗಿಸೊ ರಬಾಡ 39ಕ್ಕೆ5), ದಕ್ಷಿಣ ಆಫ್ರಿಕಾ: 37.2 ಓವರ್‌ಗಳಲ್ಲಿ 3ಕ್ಕೆ 195 (ಜೇನ್ಮನ್ ಮಲಾನ್ 26, ಕ್ವಿಂಟನ್ ಡಿ ಕಾಕ್ 62, ಕೈಲ್ ವೆರೆಯನ್ ಔಟಾಗದೆ 58, ತೆಂಬಾ ಬವುಮಾ 37, ಮೆಹದಿ ಹಸನ್ 56ಕ್ಕೆ1, ಶಕೀಬ್ ಅಲ್ ಹಸನ್ 33ಕ್ಕೆ1) ಫಲಿತಾಂಶ:ದಕ್ಷಿಣ ಆಫ್ರಿಕಾಕ್ಕೆ 7 ವಿಕೆಟ್‌ಗಳ ಜಯ. ಸರಣಿಯಲ್ಲಿ 1–1ರಿಂದ ಸಮಬಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT