ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆಸ್ಟ್‌ ಕ್ರಿಕೆಟ್‌: ಇಂಗ್ಲೆಂಡ್ ಎದುರು ದಕ್ಷಿಣ ಆಫ್ರಿಕಾ ಜಯಭೇರಿ

Last Updated 29 ಡಿಸೆಂಬರ್ 2019, 20:00 IST
ಅಕ್ಷರ ಗಾತ್ರ

ಸೆಂಚುರಿಯನ್: ಇಂಗ್ಲೆಂಡ್ ತಂಡದ ಹೋರಾಟವನ್ನು ಹತ್ತಿಕ್ಕುವಲ್ಲಿ ಯಶಸ್ವಿಯಾದ ಕಗಿಸೊ ರಬಾಡ ಮತ್ತು ಸ್ಪಿನ್ನರ್ ಕೇಶವ್ ಮಹಾರಾಜ್ ಅವರ ಬಲದಿಂದ ದಕ್ಷಿಣ ಆಫ್ರಿಕಾ ತಂಡವು ಮೊದಲ ಟೆಸ್ಟ್‌ನಲ್ಲಿ ಜಯಿಸಿತು.

376 ರನ್‌ಗಳ ಗೆಲುವಿನ ಗುರಿ ಬೆನ್ನತ್ತಿದ್ದ ಇಂಗ್ಲೆಂಡ್ ತಂಡವನ್ನು 268 ರನ್‌ಗಳಿಗೆ ಕಟ್ಟಿಹಾಕಿದ ಆತಿಥೇಯ ಬಳಗವು 107 ರನ್‌ಗಳಿಂದ ಜಯಿಸಿತು. ಇಂಗ್ಲೆಂಡ್‌ನ ಆರಂಭಿಕ ಜೋಡಿ ರೋರಿ ಬರ್ನ್ಸ್ (84; 154ಎಸೆತ, 11ಬೌಂಡರಿ) ಮತ್ತು ಡಾನ್ ಸಿಬ್ಲಿ (29; 90ಎಸೆತ,5ಬೌಂಡರಿ) ಮೊದಲ ವಿಕೆಟ್ ಜೊತೆಯಾಟದಲ್ಲಿ 92 ರನ್‌ ಸೇರಿಸಿ, ಉತ್ತಮ ಆರಂಭ ನೀಡಿದರು. 28ನೇ ಓವರ್‌ನಲ್ಲಿ ಡಾನ್ ಸಿಬ್ಲಿ ವಿಕೆಟ್ ಕಿತ್ತರು. ನಂತರ ಬಂದ ಬ್ಯಾಟ್ಸ್‌ಮನ್‌ಗಳೂ ಕೂಡ ಹೋರಾಟ ಮಾಡಿದರು. ಆದರೆ, ಅವರಿಗೆ ದೀರ್ಘ ಇನಿಂಗ್ಸ್‌ ಆಡಲು ಬೌಲರ್‌ಗಳು ಅವಕಾಶ ಕೊಡಲಿಲ್ಲ. ಅರ್ಧಶತಕದ ತ್ತ ಸಾಗಿದ್ದ ಜೋ ರೂಟ್ (48), ಬರ್ನ್ಸ್‌ ವಿಕೆಟ್‌ಗಳನ್ನು ಬೌಲರ್ ನೋರ್ಟೆ ಕಬಳಿಸಿದರು.

ಮಧ್ಯಮ ಕ್ರಮಾಂಕದಲ್ಲಿ ಬೆನ್ ಸ್ಟೋಕ್ಸ್‌ ವಿಕೆಟ್‌ ಅನ್ನು ಕೇಶವ್ ಮಹಾರಾಜ್ ಗಳಿಸಿದ್ದು ಆತಿಥೇಯರ ಗೆಲುವು ಖಚಿತಪಡಿಸಿದಂತಾಯಿತು. ಉಳಿದ ಕೆಲಸವನ್ನು ರಬಾಡ ಪೂರೈಸಿದರು.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ದಕ್ಷಿಣ ಆಫ್ರಿಕಾ: 388, ಇಂಗ್ಲೆಂಡ್: 181, ಎರಡನೇ ಇನಿಂಗ್ಸ್: ದಕ್ಷಿಣ ಆಫ್ರಿಕಾ: 61.4 ಓವರ್‌ಗಳಲ್ಲಿ 272, ಇಂಗ್ಲೆಂಡ್: 93 ಓವರ್‌ಗಳಲ್ಲಿ 268 (ರೋರಿ ಬರ್ನ್ಸ್‌ 84, ಡಾನ್ ಸಿಬ್ಲಿ 29, ಜೋ ಡೆನ್ಲಿ 31, ಜೋ ರೂಟ್ 48, ಜೋಸ್ ಬಟ್ಲರ್ 22, ಕಗಿಸೊ ರಬಾಡ 103ಕ್ಕೆ4, ಎನ್ರಿಚ್ ನೋರ್ಟೆ 56ಕ್ಕೆ3, ಡ್ವೇನ್ ಪ್ರಿಟೊರಿಯಸ್ 26ಕ್ಕೆ1, ಕೇಶವ್ ಮಹಾರಾಜ್ 37ಕ್ಕೆ2) ಫಲಿತಾಂಶ: ದಕ್ಷಿಣ ಆಫ್ರಿಕಾ ತಂಡಕ್ಕೆ 107 ರನ್‌ಗಳ ಜಯ. ಸರಣಿಯಲ್ಲಿ 1–0 ಮುನ್ನಡೆ, ಪಂದ್ಯಶ್ರೇಷ್ಠ: ಕ್ವಿಂಟನ್ ಡಿ ಕಾಕ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT