ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್‌: ಡಿ ಕಾಕ್‌ ಅಬ್ಬರ

Last Updated 23 ಫೆಬ್ರುವರಿ 2020, 19:48 IST
ಅಕ್ಷರ ಗಾತ್ರ

ಪೋರ್ಟ್‌ ಎಲಿಜಬೆತ್‌:ನಾಯಕ ಕ್ವಿಂಟನ್‌ ಡಿ ಕಾಕ್‌ (70; 47ಎ, 5ಬೌಂ, 4ಸಿ) ಅಬ್ಬರದ ಅರ್ಧಶತಕ ಮತ್ತು ಬೌಲರ್‌ಗಳ ಪರಿಣಾಮಕಾರಿ ಸಾಮರ್ಥ್ಯದ ಬಲದಿಂದ ದಕ್ಷಿಣ ಆಫ್ರಿಕಾ ತಂಡ ಭಾನುವಾರ ಇಲ್ಲಿ ನಡೆದ ಎರಡನೇ ಟ್ವೆಂಟಿ–20 ಕ್ರಿಕೆಟ್‌ ಪಂದ್ಯದಲ್ಲಿ 12ರನ್‌ಗಳಿಂದ ಆಸ್ಟ್ರೇಲಿಯಾವನ್ನು ಮಣಿಸಿದೆ. ಇದರೊಂದಿಗೆ 3 ಪಂದ್ಯಗಳ ಸರಣಿಯಲ್ಲಿ 1–1 ಸಮಬಲ ಸಾಧಿಸಿದೆ.

ಸಂಕ್ಷಿಪ್ತ ಸ್ಕೋರ್‌: ದಕ್ಷಿಣ ಆಫ್ರಿಕಾ; 20 ಓವರ್‌ಗಳಲ್ಲಿ 4 ವಿಕೆಟ್‌ಗೆ 158 (ಕ್ವಿಂಟನ್‌ ಡಿ ಕಾಕ್‌ 70, ರೀಜಾ ಹೆನ್ರಿಕ್ಸ್‌ 14, ಫಾಫ್‌ ಡು ಪ್ಲೆಸಿ 15, ವಾನ್‌ ಡರ್‌ ಡುಸೆನ್‌ 37, ಡೇವಿಡ್‌ ಮಿಲ್ಲರ್‌ ಔಟಾಗದೆ 11; ಪ್ಯಾಟ್‌ ಕಮಿನ್ಸ್‌ 31ಕ್ಕೆ1, ಕೇನ್‌ ರಿಚರ್ಡ್‌ಸನ್‌ 21ಕ್ಕೆ2, ಆ್ಯಡಂ ಜಂಪಾ 37ಕ್ಕೆ1).

ಆಸ್ಟ್ರೇಲಿಯಾ: 20 ಓವರ್‌ಗಳಲ್ಲಿ 6 ವಿಕೆಟ್‌ಗೆ 146 (ಡೇವಿಡ್‌ ವಾರ್ನರ್‌ ಔಟಾಗದೆ 67, ಆ್ಯರನ್‌ ಫಿಂಚ್‌ 14, ಸ್ಟೀವ್‌ ಸ್ಮಿತ್‌ 29, ಅಲೆಕ್ಸ್‌ ಕೇರಿ 14; ಕಗಿಸೊ ರಬಾಡ 27ಕ್ಕೆ1, ಎನ್ರಿಚ್‌ ನೋರ್ಟ್ಜೆ 24ಕ್ಕೆ1, ಲುಂಗಿ ಗಿಡಿ 41ಕ್ಕೆ3, ಡ್ವೇನ್‌ ಪ್ರಿಟೋರಿಯಸ್‌ 29ಕ್ಕೆ1).

ಫಲಿತಾಂಶ: ದಕ್ಷಿಣ ಆಫ್ರಿಕಾ ತಂಡಕ್ಕೆ 12ರನ್‌ ಗೆಲುವು. ಪಂದ್ಯಶ್ರೇಷ್ಠ: ಕ್ವಿಂಟನ್‌ ಡಿ ಕಾಕ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT