ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಣಿಜ್ಯ ವಿಮಾನ ಸ್ಥಗಿತ: ತರಾತುರಿಯಲ್ಲಿ ಪಾಕ್‌ಗೆ ತೆರಳಿದ ದಕ್ಷಿಣ ಆಫ್ರಿಕಾ ತಂಡ

Last Updated 17 ಜನವರಿ 2021, 12:12 IST
ಅಕ್ಷರ ಗಾತ್ರ

ಜೊಹಾನ್ಸ್‌ಬರ್ಗ್‌: ವಾಣಿಜ್ಯ ವಿಮಾನಗಳನ್ನು ಸ್ಥಗಿತಗೊಳಿಸಿದ ಕಾರಣ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡ ವಿಶೇಷ ವಿಮಾನದಲ್ಲಿ ತರಾತುರಿಯಲ್ಲಿ ಪಾಕಿಸ್ತಾನಕ್ಕೆ ಬಂದಿಳಿಯಬೇಕಾಯಿತು. ತಂಡ ಪಾಕಿಸ್ತಾನಕ್ಕೆ ತಲುಪಿದರೂ ಕೋವಿಡ್–19 ನಿಯಮಾವಳಿಗಳು ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿಯ ಸಂಕಷ್ಟವನ್ನು ಇನ್ನಷ್ಟು ಹೆಚ್ಚಿಸಲಿವೆ ಎಂದು ಹೇಳಲಾಗಿದೆ.

ಎರಡು ಪಂದ್ಯಗಳ ಟೆಸ್ಟ್ ಸರಣಿ ಆಡಲು 21 ಆಟಗಾರರು ಮತ್ತು ನೆರವು ಸಿಬ್ಬಂದಿಯನ್ನು ಒಳಗೊಂಡ ತಂಡ ಶನಿವಾರ ಕರಾಚಿಗೆ ಬಂದಿಳಿಯಿತು. ಸರಣಿಯ ಮೊದಲ ಪಂದ್ಯ ಇದೇ 26ರಂದು ಆರಂಭವಾಗಲಿದೆ.

ನಿರ್ವಹಣೆಯಲ್ಲಿ ತೊಂದರೆಯಾಗಿದೆ ಎಂಬ ಕಾರಣ ಹೇಳಿ ಎಮಿರೇಟ್ಸ್‌ ಏರ್‌ಲೈನ್ಸ್‌ನವರು ದಕ್ಷಿಣ ಆಫ್ರಿಕಾಕ್ಕೆ ಬರುವ ಮತ್ತು ಅಲ್ಲಿಂದ ಹೊರಡುವ ವಿಮಾನಗಳನ್ನು ಗುರುವಾರ ಸ್ಥಗಿತಗೊಳಿಸಿದ್ದರು. ಹೀಗಾಗಿ ತಂಡದ ಪ್ರವಾಸಕ್ಕೆ ತುರ್ತು ವ್ಯವಸ್ಥೆ ಮಾಡಲಾಗಿತ್ತು ಎಂದು ವಕ್ತಾರರು ಭಾನುವಾರ ತಿಳಿಸಿದ್ದಾರೆ.

ವಿಮಾನ ಸೌಲಭ್ಯ ಇರುವ ಜೊಹಾನ್ಸ್‌ಬರ್ಗ್‌, ಕೇಪ್‌ಟೌನ್ ಮತ್ತು ಡರ್ಬನ್‌ನಿಂದ ಆಟಗಾರರು ಮೂರು ಗುಂಪುಗಳಲ್ಲಿ ದುಬೈಗೆ ಬಂದು ಅಲ್ಲಿಂದ ಕರಾಚಿಗೆ ಪ್ರವಾಸ ಬೆಳೆಸುವ ಯೋಜನೆ ಇತ್ತು. ಆದರೆ ಕೊನೆಯ ಕ್ಷಣದಲ್ಲಿ ಎಲ್ಲವೂ ಬದಲಾಯಿತು. ಟೆಸ್ಟ್ ಸರಣಿಯ ನಂತರ ನಡೆಯಲಿರುವ ಟಿ20 ಸರಣಿಗೆ ಆಟಗಾರರನ್ನು ಕಳುಹಿಸಿಕೊಡಲು ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿಗೆ ಇನ್ನಷ್ಟು ತೊಂದರೆಯಾಗಲಿದೆ ಎಂದು ಹೇಳಲಾಗಿದೆ.

ಟೆಸ್ಟ್ ಸರಣಿಯ ನಂತರ ತಂಡ ತವರಿಗೆ ವಾಪಸಾಗಲಿದ್ದು ಆಸ್ಟ್ರೇಲಿಯಾ ಎದುರು ನಡೆಯಲಿರುವ ಪಂದ್ಯಗಳಿಗೆ ಸಿದ್ಧವಾಗಲಿದೆ. ಇದೇ ವೇಳೆ ಟಿ20 ಸರಣಿಗೆ ಬೇರೆಯೇ ತಂಡವನ್ನು ಕಳುಹಿಸುವ ಯೋಜನೆ ಇದೆ. ಫೆಬ್ರುವರಿ 11ರಿಂದ 14ರ ವರೆಗೆ ಟಿ20 ಸರಣಿ ನಡೆಯಲಿದೆ. ಆದರೆ ವಿಶೇಷ ವಿಮಾನ ಮತ್ತು ಇತರ ಸೌಲಭ್ಯಗಳನ್ನು ಒದಗಿಸಲು ಮಂಡಳಿಗೆ ಆರ್ಥಿಕ ಸಮಸ್ಯೆಯೂ ಕಾಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT