ಮೈಸೂರು: ಭಾರ್ಗವ್ ಭಟ್ ಸ್ಪಿನ್ ದಾಳಿಗೆ (89ಕ್ಕೆ 5) ನಲುಗಿದ ಕೆಎಸ್‌ಸಿಎ ಕೋಲ್ಟ್ಸ್, ಬರೋಡಾ ಕ್ರಿಕೆಟ್ ಸಂಸ್ಥೆ ವಿರುದ್ಧ ಇಲ್ಲಿನ ಎಸ್‌ಡಿಎನ್‌ಆರ್‌ಡಬ್ಲ್ಯು ಕ್ರೀಡಾಂಗಣದಲ್ಲಿ ನಡೆದ ಕ್ರಿಕೆಟ್ ಪಂದ್ಯದಲ್ಲಿ ಮೂರೇ ದಿನಕ್ಕೆ ಸೋಲು ಕಂಡಿತು.
ಕ್ಯಾಪ್ಟನ್ ಕೆ.ತಿಮ್ಮಪ್ಪಯ್ಯ ಸ್ಮಾರಕ ಕ್ರಿಕೆಟ್ ಟೂರ್ನಿ ಪಂದ್ಯದ ಮೂರನೇ ದಿನವಾದ ಸೋಮವಾರ ಬ್ಯಾಟಿಂಗ್ ಮುಂದುವರಿಸಿದ ಕೋಲ್ಟ್ಸ್ ಎರಡನೇ ಇನಿಂಗ್ಸ್‌ನಲ್ಲಿ 280 ರನ್ ಗಳಿಸಲಷ್ಟೇ ಶಕ್ತವಾಯಿತು. ಗುರಿ ಬೆನ್ನತ್ತಿದ್ದ ಬರೋಡಾ ತಂಡವು ದಿನದಾಟದ ಅಂತ್ಯಕ್ಕೆ ಇನ್ನೂ ಕೆಲವು ಓವರ್ ಬಾಕಿ ಇರುವಾಗಲೇ 2 ವಿಕೆಟ್‌ಗೆ 156 ರನ್ ಗಳಿಸಿ 8 ವಿಕೆಟ್‌ಗಳ ಜಯ ಪಡೆಯಿತು.
ಮೊದಲ ಇನಿಂಗ್ಸ್ ಹಿನ್ನಡೆಯ ಭಾರದೊಂದಿಗೆ ಬ್ಯಾಟಿಂಗ್ ಮುಂದುವರಿಸಿದ ಕೋಲ್ಟ್ಸ್ ಪರ 4ನೇ ವಿಕೆಟ್‌ಗೆ ಹರ್ಷಿಲ್ ( 55) ಹಾಗೂ ನಾಯಕ ಶುಭಾಂಗ್ ಹೆಗ್ಡೆ ( 40) ನಡುವೆ 58 ರನ್‌ಗಳ ಜೊತೆಯಾಟ ಬಿಟ್ಟರೆ ಇನ್ನೊಂದು ಉಪಯುಕ್ತ ಜೊತೆಯಾಟ ಬರಲಿಲ್ಲ. ಮಧ್ಯಮ ಕ್ರಮಾಂಕದಲ್ಲಿ ಉತ್ತಮವಾಗಿ ಆಡುತ್ತಿದ್ದ ಧೀರಜ್ ಗೌಡ ( 64) 61ನೇ ಓವರ್‌ನಲ್ಲಿ ಲಕ್ಷಿತ್ ಎಸೆತದಲ್ಲಿ ಭಾರ್ಗವ್‌ಗೆ ಕ್ಯಾಚಿತ್ತು ನಿರ್ಗಮಿಸುತ್ತಲೇ ಕೋಲ್ಟ್ಸ್ ಪಂದ್ಯದ ಮೇಲಿನ ಆಸೆ ಕೈ ಬಿಟ್ಟಿತು.
ಬರೋಡಾದ ಎಡಗೈ ಸಿನ್ನರ್ ಭಾರ್ಗವ್ ಭಟ್ ಎರಡನೇ ಇನಿಂಗ್ಸ್‌ನಲ್ಲೂ ಕರ್ನಾಟಕದ ಬ್ಯಾಟರ್‌ಗಳನ್ನು ಕಾಡಿದರು. ಪಿಚ್‌ನ ಮರ್ಮ ಅರಿತವರಂತೆ ಚೆಂಡನ್ನು ಸ್ಪಿನ್ ಮಾಡುತ್ತ ತಂಡಕ್ಕೆ ಜಯ ತಂದಿಟ್ಟರು. ಪಂದ್ಯದಲ್ಲಿ ಒಟ್ಟಾರೆ 11 ವಿಕೆಟ್ ಉರುಳಿಸಿ ಮಿಂಚಿದರು.
ಈ ಗೆಲುವಿನೊಂದಿಗೆ ಬರೋಡಾ ತಂಡವು ‘ಡಿ’ ಗುಂಪಿನಲ್ಲಿ ಎರಡು ಗೆಲುವು, ಒಂದು ಡ್ರಾದೊಂದಿಗೆ ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೆ ಏರಿದರೆ, ಕೋಲ್ಟ್ಸ್ ಒಂದು ಸೋಲು, ಎರಡು ಡ್ರಾದೊಂದಿಗೆ 4 ಅಂಕಕ್ಕೆ ಸಮಾಧಾನ ಪಟ್ಟುಕೊಂಡಿತು.
ಎಸ್‌ಜೆಸಿಇ ಮೈದಾನದಲ್ಲಿ ನಡೆದಿರುವ ಮತ್ತೊಂದು ಪಂದ್ಯದಲ್ಲಿ ಒಡಿಶಾ ಕ್ರಿಕೆಟ್ ಅಕಾಡೆಮಿಯು ಮೂರನೇ ದಿನದಾಟದ ಅಂತ್ಯಕ್ಕೆ 2 ವಿಕೆಟ್‌ಗೆ 79 ರನ್ ಗಳಿಸಿದ್ದು, ಕೊನೆಯ ದಿನದಂದು ಗೆಲುವಿಗೆ 209 ರನ್ ಬೇಕಿದೆ.
ಜಾಸ್ಪರ್, ಲವನೀಶ್ ಶತಕ: ಜಾಸ್ಪರ್ ಇ.ಜೆ (167;292, 4x24) ಮತ್ತು ಲವನೀತ್ ಸಿಸೋಡಿಯಾ (187;262, 4x20, 6x6) ಅವರ ಶತಕಗಳ ಬಲದಿಂದ ಕೆಎಸ್‌ಸಿಎ ಕಾರ್ಯದರ್ಶಿ ಇಲೆವೆನ್ ತಂಡವು ಮುಂಬೈ ತಂಡದ ವಿರುದ್ಧ ಮೊದಲ ಇನಿಂಗ್ಸ್‌ನಲ್ಲಿ ಕೊಂಚ ಮುನ್ನಡೆ ಪಡೆದಿದೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮೂರನೇ ದಿನವಾದ ಸೋಮವಾರ ಜಾಸ್ಪರ್ ಮತ್ತು ಲವನೀತ್ ಅವರು ಎದುರಾಳಿ ಬೌಲರ್‌ಗಳನ್ನು ಇನ್ನಿಲ್ಲದಂತೆ ಕಾಡಿದರು. ಮೊದಲ ಇನಿಂಗ್ಸ್‌ನಲ್ಲಿ ಮುಂಬೈ ತಂಡ 106 ಓವರ್‌ಗಳಲ್ಲಿ 440 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಕಾರ್ಯದರ್ಶಿ ಇಲೆವನ್ ತಂಡವು 531 ರನ್ ಗಳಿಸಿತು. ಎರಡನೇ ಇನಿಂಗ್ಸ್‌ನಲ್ಲಿ ಮುಂಬೈ ತಂಡ 11 ರನ್ ಗಳಿಸಿದೆ.
ಎಸ್‌ಡಿಎನ್‌ಆರ್‌ಡಬ್ಲ್ಯು ಕ್ರೀಡಾಂಗಣ:
ಮೊದಲ ಇನಿಂಗ್ಸ್: ಕೆಎಸ್‌ಸಿಎ ಕೋಲ್ಟ್ಸ್: 62.3 ಓವರ್‌ಗಳಲ್ಲಿ 202; ಬರೋಡಾ ಕ್ರಿಕೆಟ್ ಸಂಸ್ಥೆ: 104.3 ಓವರ್‌ಗಳಲ್ಲಿ 330;
ಎರಡನೇ ಇನಿಂಗ್ಸ್: ಕೆಎಸ್‌ಸಿಎ ಕೋಲ್ಟ್ಸ್: 66.5 ಓವರ್‌ಗಳಲ್ಲಿ 280( ಹರ್ಷಿಲ್ 55, ಶುಭಾಂಗ್ ಹೆಗ್ಡೆ, ಧೀರಜ್ ಗೌಡ 64. ಭಾರ್ಗವ್ ಭಟ್ 89ಕ್ಕೆ 5, ಮಹೇಶ್ 82ಕ್ಕೆ 3); ಬರೋಡಾ ಕ್ರಿಕೆಟ್ ಸಂಸ್ಥೆ: 38.5 ಓವರ್‌ಗಳಲ್ಲಿ 2 ವಿಕೆಟ್ 156 ( ಕಿನಿತ್ ಪಟೇಲ್ 71, ಸುಕೃತ್ ಪಾಂಡೆ ಔಟಾಗದೆ 60. ಶುಭಾಂಗ್ ಹೆಗ್ಡೆ 71ಕ್ಕೆ 1, ಧೀರಜ್ ಗೌಡ 35ಕ್ಕೆ 1)
ಎಸ್‌ಜೆಸಿಇ ಕ್ರೀಡಾಂಗಣ:
ಮೊದಲ ಇನಿಂಗ್ಸ್: ಡಾ. ಡಿ.ವೈ. ಪಾಟೀಲ ಕ್ರಿಕೆಟ್ ಅಕಾಡೆಮಿ: 53.3 ಓವರ್‌ಗಳಲ್ಲಿ 262; ಒಡಿಶಾ ಕ್ರಿಕೆಟ್ ಸಂಸ್ಥೆ: 86.1 ಓವರ್‌ಗಳಲ್ಲಿ 283;
ಎರಡನೇ ಇನಿಂಗ್ಸ್: ಪಾಟೀಲ ಅಕಾಡೆಮಿ: 87.2 ಓವರ್‌ಗಳಲ್ಲಿ 308 ( ಅಯಾಜ್ ಖಾನ್ 111, ಅಬ್ದುಲ್ ಸಮದ್ 33. ಸುನಿಲ್ ರೌಲ್ 38ಕ್ಕೆ 3); ಒಡಿಶಾ: 32 ಓವರ್‌ಗಳಲ್ಲಿ 2 ವಿಕೆಟ್‌ಗೆ 79 ( ಶಂತನು ಮಿಶ್ರ ಔಟಾಗದೆ 44, ಉಮರ್ ಖಾನ್ 28ಕ್ಕೆ 2)
ಚಿನ್ನಸ್ವಾಮಿ ಕ್ರೀಡಾಂಗಣ:
ಮೊದಲ ಇನಿಂಗ್ಸ್: ಮುಂಬೈ: 106 ಓವರ್‌ಗಳಲ್ಲಿ 440. ಕೆಎಸ್‌ಸಿಎ ಕಾರ್ಯದರ್ಶಿ ಇಲೆವನ್: 144.5 ಓವರ್‌ಗಳಲ್ಲಿ 531 (ಜಾಸ್ಪರ್ ಇ.ಜೆ 167, ಲವನೀತ್ ಸಿಸೋಡಿಯಾ 187, ಶ್ರೀಜಿತ್ ಕೆ.ಎಲ್. 42; ಶಾರ್ದೂಲ್ ಠಾಕೂರ್ 84ಕ್ಕೆ 2, ಮೊಹಮ್ಮದ್ ಜುನೆದ್ ಖಾನ್ 89ಕ್ಕೆ 3, ಅಥರ್ವ ಅಂಕೋಲೇಕರ್ 98ಕ್ಕೆ 3). ಎರಡನೇ ಇನಿಂಗ್ಸ್: ಮುಂಬೈ: 11 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 11.
ಆಲೂರು (2): ಮೊದಲ ಇನಿಂಗ್ಸ್: ಕೆಎಸ್‌ಸಿಎ ಇಲೆವನ್: 36.5 ಓವರ್‌ಗಳಲ್ಲಿ 103. ಗೋವಾ: 121 ಓವರ್‌ಗಳಲ್ಲಿ 413.
ಎರಡನೇ ಇನಿಂಗ್ಸ್: ಕೆಎಸ್‌ಸಿಎ ಇಲೆವನ್: 30.4 ಓವರ್‌ಗಳಲ್ಲಿ 121 (ಸ್ಮರಣ್ ಆರ್. 58; ರುತ್ವಿಕ್ ನಾಯ್ಕ್ 46ಕ್ಕೆ 4, ಅರ್ಜುನ್ ತೆಂಡೂಲ್ಕರ್ 55ಕ್ಕೆ 4). ಫಲಿತಾಂಶ: ಗೋವಾ ತಂಡಕ್ಕೆ 189 ರನ್ ಮತ್ತು ಇನಿಂಗ್ಸ್ ಜಯ, ಏಳು ಅಂಕ.
ಆಲೂರು (3): ಮೊದಲ ಇನಿಂಗ್ಸ್: ಕೆಎಸ್‌ಸಿಎ ಅಧ್ಯಕ್ಷರ ಇಲೆವನ್: 88 ಓವರ್‌ಗಳಲ್ಲಿ 330. ತಮಿಳುನಾಡು: 41.3 ಓವರ್‌ಗಳಲ್ಲಿ 145.
ಎರಡನೇ ಇನಿಂಗ್ಸ್: ಕೆಎಸ್‌ಸಿಎ ಅಧ್ಯಕ್ಷರ ಇಲೆವನ್: 47.4 ಓವರ್‌ಗಳಲ್ಲಿ 7 ವಿಕೆಟ್‌ಗೆ 211 ರನ್ ಡಿಕ್ಲೇರ್ (ಅಭಿನವ್ ಮನೋಹರ್ 58; ಪಿ.ವಿದ್ಯುತ್ 39ಕ್ಕೆ3). ತಮಿಳುನಾಡು: 34 ಓವರ್‌ಗಳಲ್ಲಿ 106 (ಅಜಿತೇಶ್ ಜಿ 57, ಪಾರಸ್ ಗುರುಭಕ್ಷ್ ಆರ್ಯ 35ಕ್ಕೆ 6). ಫಲಿತಾಂಶ: ಕೆಎಸ್‌ಸಿಎ ಅಧ್ಯಕ್ಷರ ಇಲೆವನ್ ತಂಡಕ್ಕೆ 290 ರನ್‌ಗಳ ಜಯ, ಆರು ಅಂಕ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.