ವೀಕ್ಷಕ ವಿವರಣೆಕಾರ ಸತೀಶ್ ನಿಧನ

ಭಾನುವಾರ, ಜೂಲೈ 21, 2019
22 °C

ವೀಕ್ಷಕ ವಿವರಣೆಕಾರ ಸತೀಶ್ ನಿಧನ

Published:
Updated:
Prajavani

ಬೆಂಗಳೂರು: ಹಿರಿಯ ಅಥ್ಲೀಟ್ ಮತ್ತು ಅಂತರರಾಷ್ಟ್ರೀಯ ಕ್ರೀಡಾ ವೀಕ್ಷಕ ವಿವರಣೆಕಾರ ಎ. ಸತೀಶ್ (65) ಶನಿವಾರ ನಿಧನರಾದರು. ಅವರಿಗೆ ಪತ್ನಿ ಮತ್ತು ಇಬ್ಬರು ಹೆಣ್ಣುಮಕ್ಕಳು ಇದ್ದಾರೆ.

ಅಥ್ಲೆಟಿಕ್ಸ್‌ನಲ್ಲಿ 200 ಮೀಟರ್ಸ್ ಓಟದ ವಿಭಾಗದಲ್ಲಿ ಹಲವು ಸ್ಪರ್ಧೆಗಳಲ್ಲಿ ಪದಕಗಳನ್ನು ಗೆದ್ದಿದ್ದರು. ರೀಜನಲ್ ಕ್ರೀಡಾಕೂಟದಲ್ಲಿ ಅವರು ಚಿನ್ನದ ಪದಕ ವಿಜೇತರಾಗಿದ್ದರು. ಅವರು ಬ್ಯಾಸ್ಕೆಟ್‌ಬಾಲ್ ಆಟಗಾರ ಕೂಡ ಆಗಿದ್ದರು.

ಭಾರತದಲ್ಲಿ ನಡೆದಿದ್ದ ಕಾಮನ್‌ವೆಲ್ತ್ ಕ್ರೀಡಾಕೂಟ ಮತ್ತು ಇನ್ನಿತರ ಅಂತರರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಅವರು ವೀಕ್ಷಕ ವಿವರಣೆಕಾರರಾಗಿದ್ದರು. ಅಂಚೆ ಇಲಾಖೆಯ ಉದ್ಯೋಗಿಯಾಗಿ ಕಾರ್ಯನಿರ್ವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 6

  Sad
 • 0

  Frustrated
 • 0

  Angry

Comments:

0 comments

Write the first review for this !