ಇಂಡಿಯನ್ ಪ್ರೀಮಿಯರ್ ಲೀಗ್ ಎಂಬ ಕ್ರಿಕೆಟ್ ಟೂರ್ನಮೆಂಟ್ ಆರಂಭವಾಗಿ 19 ವರ್ಷಗಳು ಪೂರ್ಣಗೊಂಡಿವೆ. ಆದರೆ, 2008ರ ಮೊದಲ ಆವೃತ್ತಿಯಲ್ಲಿ ನಡೆದ ಘಟನೆಯೊಂದು ಇಂದಿಗೂ ಆಗಾಗ ಚರ್ಚೆಗೆ ಒಳಗಾಗುತ್ತಲೇ ಇರುತ್ತದೆ. ಆ ಘಟನೆ ಬೇರೆ ಯಾವುದೂ ಅಲ್ಲ, ಪಂಜಾಬ್ ಕಿಂಗ್ಸ್ (ಕಿಂಗ್ X1 ಪಂಜಾಬ್) ತಂಡದ ಆಟಗಾರ ಶ್ರೀಶಾಂತ್ ಅವರಿಗೆ ಮುಂಬೈ ಇಂಡಿಯನ್ಸ್ ತಂಡದ ಹರ್ಭಜನ್ ಸಿಂಗ್ ಅವರು ಕಪಾಳ ಮೋಕ್ಷ ಮಾಡಿದ್ದು.

ಘಟನೆ ನಡೆದ 19 ವರ್ಷಗಳು ಪೂರ್ಣಗೊಂಡಿವೆ. ಆದರೆ, ಇಬ್ಬರ ನಡುವಿನ ದ್ವೇಷ, ಭಿನ್ನಮತ ಇದುವರೆಗೆ ಮುಗಿದಂತೆ ಕಂಡುಬಂದಿಲ್ಲ. ಶ್ರೀಶಾಂತ್ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿ, ಹರ್ಭಜನ್ ಅವರು ಅಂದಿನ ಘಟನೆಯನ್ನು ದೂರದರ್ಶನದ ಜಾಹೀರಾತು ಒಂದಕ್ಕೆ ತಮಾಷೆಯ ಘಟನೆಯಾಗಿ ಬಳಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.

2008 ಕಪಾಳಮೋಕ್ಷ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಮಾಜಿ ಕ್ರಿಕೆಟಿಗ ಶ್ರೀಶಾಂತ್ 'ನಾನು ಹರ್ಭಜನ್ ಸಿಂಗ್ ಅವರ ಬಗ್ಗೆ ಅಥವಾ ಅಂದಿನ ಘಟನೆಯ ಬಗ್ಗೆ ಇದುವರೆಗೂ ಮಾತನಾಡಿಲ್ಲ. ಆದರೆ, ಆ ಘಟನೆಯ ಬಳಿಕ ನಾನು ಅವರನ್ನು ಕ್ಷಮಿಸಿದ್ದೇನೆ. ಆದರೆ, ಘಟನೆಯನ್ನು ಎಂದಿಗೂ ಮರೆಯುವುದಿಲ್ಲ’ ಎಂದು ಹೇಳಿದ್ದಾರೆ.

‘ಹರ್ಭಜನ್ ಸಿಂಗ್ ಅವರು ಆ ಘಟನೆಯನ್ನು ಟಿವಿ ಜಾಹಿರಾತಿನಲ್ಲಿ ಬಳಸಿಕೊಂಡು ಸುಮಾರು ₹1 ಕೋಟಿ ಗಳಿಸಿದ್ದಾರೆ. ಮಾತ್ರವಲ್ಲ, ಆ ವಿಡಿಯೊವನ್ನು ನನ್ನ ಸಾಮಾಜಿಕ ಮಾಧ್ಯಮ ಚಾನೆಲ್ಗಳಲ್ಲಿ ಹಂಚಿಕೊಳ್ಳುವಂತೆ ನನ್ನ ಬಳಿಯೇ ಕೇಳಿದ್ದರು’ ಎಂದು ಶ್ರೀಶಾಂತ್ ಹೇಳಿದ್ದಾರೆ.

‘ಇತ್ತೀಚಿನವರೆಗೂ ನಮ್ಮಿಬ್ಬರ ನಡುವೆ ಯಾವುದೇ ಸಮಸ್ಯೆಗಳೂ ಇರಲಿಲ್ಲ. ಆದರೆ ಹರ್ಭಜನ್ ಸಿಂಗ್ ಮತ್ತೊಮ್ಮೆ ಅದರ ಬಗ್ಗೆ ಜಾಹೀರಾತು ನೀಡಿದರು ಮತ್ತು ಅದರಿಂದ ಅವರು ಸುಮಾರು ₹80 ಲಕ್ಷದಿಂದ ₹1 ಕೋಟಿ ಗಳಿಸಿದ್ದಾರೆ. ನಂತರ ನನಗೆ ಕರೆ ಮಾಡಿ, ಅದರ ಮೇಲೆ ಒಂದು ಕಥೆ ಹೆಣೆಯಲು ಕೇಳಿದರು. ನಾನು ಅವರಿಗೆ, ನಿಮ್ಮನ್ನು ಕ್ಷಮಿಸುತ್ತೇನೆ. ಆದರೆ ಎಂದಿಗೂ ಅಂದಿನ ಘಟನೆಯನ್ನು ಮರೆಯುವುದಿಲ್ಲ ಎಂದು ಹೇಳಿದೆ’ ಎಂದು ಶ್ರೀಶಾಂತ್ ಹೇಳಿಕೊಂಡಿದ್ದಾರೆ.

‘ಈಗ ಹರ್ಭಜನ್ ಸಿಂಗ್ ಜೊತೆ ನನಗೆ ಯಾವುದೇ ಸಂಬಂಧವಿಲ್ಲ. ನಾನು ಅವರನ್ನು ಸಹೋದರ ಎಂದು ಕರೆಯುತ್ತಿದ್ದೆ. ಆದರೆ. ಇತ್ತೀಚೆಗೆ ಕಳೆದ ಒಂದು ಅಥವಾ ಎರಡು ತಿಂಗಳಲ್ಲಿ ಅವರು ಹಣಕ್ಕಾಗಿ ಆ ಘಟನೆಯನ್ನು ಇಟ್ಟುಕೊಂಡು ಜಾಹೀರಾತು ಮಾಡಿದರು ಮತ್ತು ನಾನು ಈಗ ಅವರನ್ನು ಇನ್ಸ್ಟಾಗ್ರಾಮ್ನಲ್ಲಿ ಅನ್ಫಾಲೋ ಮಾಡಿದ್ದೇನೆ’ ಎಂದು ಶ್ರೀಶಾಂತ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.