‘ಸೋಲಿನ ‘ಗಡಿ’ ದಾಟಿದ್ದು ಖುಷಿ ತಂದಿದೆ’

ಶನಿವಾರ, ಏಪ್ರಿಲ್ 20, 2019
25 °C

‘ಸೋಲಿನ ‘ಗಡಿ’ ದಾಟಿದ್ದು ಖುಷಿ ತಂದಿದೆ’

Published:
Updated:
Prajavani

ಮೊಹಾಲಿ: ಸತತ ಸೋಲಿನ ನಂತರ ಗೆಲುವಿನ ಸಿಹಿ ಸವಿಯಲು ಸಾಧ್ಯವಾದುದರ ಬಗ್ಗೆ ಖುಷಿ ಇದೆ. ಸೋಲಿನ ಬಲೆಯಲ್ಲಿ ಬಿದ್ದಿದ್ದಾಗಲೂ ತಂಡಕ್ಕೆ ಗೆಲ್ಲುವ ಹಂಬಲವಿತ್ತು. ಆ ಕನಸು ಕೊನೆಗೂ ನನಸಾಗಿದ್ದು ಸಂತಸದ ವಿಷಯ ಎಂದು ವಿರಾಟ್ ಕೊಹ್ಲಿ ಹೇಳಿದರು.

ಶನಿವಾರ ರಾತ್ರಿ ಇಲ್ಲಿನ ಐ.ಎಸ್.ಬಿಂದ್ರಾ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡ ಕಿಂಗ್ಸ್ ಇಲೆವನ್ ಪಂಜಾಬ್ ಎದುರು ಎಂಟು ವಿಕೆಟ್‌ಗಳಿಂದ ಗೆದ್ದಿತ್ತು. ಮೊದಲು ಬ್ಯಾಟಿಂಗ್ ಮಾಡಿದ್ದ ಕಿಂಗ್ಸ್‌ ನಾಲ್ಕು ವಿಕೆಟ್‌ಗಳಿಗೆ 173 ರನ್‌ ಕಲೆ ಹಾಕಿತ್ತು. ಕ್ರಿಸ್‌ ಗೇಲ್‌ 64 ಎಸೆತಗಳಲ್ಲಿ 99 ರನ್ ಗಳಿಸಿ ಅಜೇಯರಾಗಿ ಉಳಿದಿದ್ದರು.

ಗುರಿ ಬೆನ್ನತ್ತಿದ ಆರ್‌ಸಿಬಿ ಪರ ಆರಂಭಿಕ ಜೋಡಿ ಪಾರ್ಥಿವ್ ಪಟೇಲ್ ಮತ್ತು ವಿರಾಟ್ ಕೊಹ್ಲಿ 43 ರನ್‌ಗಳ ಜೊತೆಯಾಟವಾಡಿದ್ದರು. ಪಾರ್ಥಿವ್ ಔಟಾದ ನಂತರ ಕೊಹ್ಲಿ (67; 53 ಎಸೆತ, 8 ಬೌಂಡರಿ) ಮತ್ತು ಎಬಿ ಡಿವಿಲಿಯರ್ಸ್‌ (ಅಜೇಯ 59; 38 ಎ, 2 ಸಿ, 5 ಬೌಂ) 85 ರನ್‌ಗಳ ಜೊತೆಯಾಟ ಆಡಿ ಗೆಲುವಿನ ಹಾದಿಯನ್ನು ಸುಲಭಗೊಳಿಸಿದ್ದರು.

₹12 ಲಕ್ಷ ದಂಡ

ಮೊಹಾಲಿ: ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್‌ ಕೊಹ್ಲಿ ಅವರಿಗೆ ₹ 12 ಲಕ್ಷ ವಿಧಿಸಲಾಗಿದೆ.  ಶನಿವಾರ ಕಿಂಗ್ಸ್ ಇಲೆವೆನ್‌ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ನಿಗದಿತ ಅವಧಿಯೊಳಗೆ ಓವರ್‌ಗಳನ್ನು ಮುಗಿಸದ ಕಾರಣ ದಂಡ ವಿಧಿಸಲಾಗಿದೆ. 

ಈ ಮೊದಲು ನಿಧಾನಗತಿ ಬೌಲಿಂಗ್‌ಗಾಗಿ ಅಜಿಂಕ್ಯ ರಹಾನೆ ಮತ್ತು ರೋಹಿತ್‌ ಶರ್ಮಾ ದಂಡ ತೆತ್ತಿದ್ದರು. ಪಂಜಾಬ್‌ ವಿರುದ್ಧ ಬೆಂಗಳೂರು ತಂಡ 8 ವಿಕೆಟ್‌ಗಳಿಂದ ಗೆದ್ದಿತು. ಇದು ಪ್ರಸಕ್ತ ಐಪಿಎಲ್‌ ಆವೃತ್ತಿಯ ಮೊದಲ ಜಯವಾಗಿದೆ. 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !