ಶುಕ್ರವಾರ, ಮೇ 20, 2022
19 °C

IPL 2022: ಟಿ20 ಕ್ರಿಕೆಟ್‌ನಲ್ಲಿ 50 ಅರ್ಧಶತಕ; ಕೊಹ್ಲಿ, ರೋಹಿತ್ ಸಾಲಿಗೆ ರಾಹುಲ್

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಭಾರತ ಕ್ರಿಕೆಟ್ ತಂಡದ ಉಪನಾಯಕ ಹಾಗೂ ಐಪಿಎಲ್‌ನಲ್ಲಿ ಆಡುವ ಲಖನೌ ಸೂಪರ್ ಜೈಂಟ್ಸ್‌ ತಂಡದ ನಾಯಕ ಕೆ.ಎಲ್‌. ರಾಹುಲ್‌, ಟಿ20 ಕ್ರಿಕೆಟ್‌ನಲ್ಲಿ 50 ಅರ್ಧಶತಕ ಸಿಡಿಸಿದ ಬ್ಯಾಟರ್‌ಗಳ ಸಾಲಿಗೆ ಸೇರಿದರು.

ಡಿ.ವೈ.ಪಾಟೀಲ್ ಕ್ರೀಡಾಂಗಣದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್ ತಂಡದ ವಿರುದ್ಧ ಇಂದು (ಏ.04) ನಡೆಯುತ್ತಿರುವ ಪಂದ್ಯದಲ್ಲಿ ರಾಹುಲ್‌ ಮೈಲಿಗಲ್ಲು ಮುಟ್ಟಿದರು. ಇದಕ್ಕೂ ಮೊದಲು ವಿರಾಟ್ ಕೊಹ್ಲಿ, ಶಿಖರ್‌ ಧವನ್, ಸುರೇಶ್‌ ರೈನಾ ಮತ್ತು ರೋಹಿತ್ ಶರ್ಮಾ ಭಾರತದ ಪರ ಈ ಸಾಧನೆ ಮಾಡಿದ್ದರು.

ಅಂದಹಾಗೆ ಐಪಿಎಲ್‌ನಲ್ಲಿ ರಾಹುಲ್‌ಗೆ ಇದು 28ನೇ ಅರ್ಧಶತಕ. ಇದರೊಂದಿಗೆ ಅಜಿಂಕ್ಯ ರಹಾನೆ ದಾಖಲೆಯನ್ನೂ ಸರಿಗಟ್ಟಿರುವ ಅವರು ಐಪಿಎಲ್‌ನಲ್ಲಿ ಅತಿಹೆಚ್ಚು ಅರ್ಧಶತಕ ಗಳಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ 9ನೇ ಸ್ಥಾನಕ್ಕೇರಿದು. 49 ಬಾರಿ ಅರ್ಧಶತಕ ಸಿಡಿಸಿರುವ ಆಸ್ಟ್ರೇಲಿಯಾ ಬ್ಯಾಟರ್ ಡೇವಿಡ್ ವಾರ್ನರ್ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

ಕನ್ನಡಿಗ ರಾಹುಲ್ ಐಪಿಎಲ್‌ನಲ್ಲಿ ಇದುವರೆಗೆ 94 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದಾರೆ. 46.66ರ ಸರಾಸರಿಯಲ್ಲಿ ಬರೋಬ್ಬರಿ 3,313 ರನ್ ಕಲೆಹಾಕಿದ್ದಾರೆ. 3 ಸಾವಿರಕ್ಕಿಂತ ಹೆಚ್ಚು ರನ್‌ ಗಳಿಸಿರುವ ಬ್ಯಾಟರ್‌ಗಳ ಪೈಕಿ, ರಾಹಲ್‌ ಗರಿಷ್ಠ ರನ್ ಗಳಿಕೆ ಸರಾಸರಿ ಕಾಯ್ದುಕೊಂಡಿದ್ದಾರೆ.

ಅತಿಹೆಚ್ಚು ಅರ್ಧಶತಕ ಗಳಿಸಿದ ಭಾರತದ ಬ್ಯಾಟರ್‌ಗಳು
ವಿರಾಟ್ ಕೊಹ್ಲಿ: 
328 ಪಂದ್ಯ, 76 ಅರ್ಧಶತಕ 
ರೋಹಿತ್ ಶರ್ಮಾ:  372 ಪಂದ್ಯ, 69 ಅರ್ಧಶತಕ
ಶಿಖರ್ ಧವನ್: 305 ಪಂದ್ಯ, 63 ಅರ್ಧಶತಕ
ಸುರೇಶ್ ರೈನಾ: 336 ಪಂದ್ಯ, 53 ಅರ್ಧಶತಕ
ಕೆ.ಎಲ್‌.ರಾಹುಲ್: 175 ಪಂದ್ಯ, 50 ಅರ್ಧಶತಕ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು