ಹೈದರಾಬಾದ್ : ರಾಜೀವಗಾಂಧಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಶುಕ್ರವಾರ ರಾತ್ರಿ ಕ್ರೀಸ್ಗೆ ಬಂದ ಸನ್ರೈಸರ್ಸ್ ಹೈದರಾಬಾದ್ ತಂಡದ ಎಲ್ಲ ಬ್ಯಾಟರ್ಗಳೂ ಬೀಸಾಟವಾಡಿದರು. ಇದರಿಂದಾಗಿ ಆತಿಥೇಯ ತಂಡವು ಐಪಿಎಲ್ನ ಪಂದ್ಯದಲ್ಲಿ 55 ರನ್ಗಳಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸುಲಭವಾಗಿ ಮಣಿಸಿತಾದರೂ ಅಂಕಪಟ್ಟಿಯಲ್ಲಿ ಅಗ್ರ ಎರಡರಲ್ಲಿ ಸ್ಥಾನ ಪಡೆಯಲು ವಿಫಲವಾಯಿತು.

ಹಾಲಿ ಚಾಂಪಿಯನ್ ಆರ್ಸಿಬಿ ತಂಡವು ಈ ಸೋಲಿನ ಹೊರತಾಗಿಯೂ ಲೀಗ್ ಹಂತದ ಅಭಿಯಾನವನ್ನು ಅಗ್ರಸ್ಥಾನದೊಂದಿಗೆ ಮುಗಿಸಿತು. ಈಗಾಗಲೇ ಪ್ಲೇ ಆಫ್ ಪ್ರವೇಶಿಸಿದ್ದ ಆರ್ಸಿಬಿ, ಗುಜರಾತ್ ಮತ್ತು ಸನ್ರೈಸರ್ಸ್ ತಂಡಗಳು ತಲಾ 18 ಅಂಕ ಗಳಿಸಿದವು. ಆದರೆ, ನೆಟ್ ರನ್ರೇಟ್ ಆಧಾರದಲ್ಲಿ ಬೆಂಗಳೂರು ತಂಡ (0.783) ಮೊದಲ ಸ್ಥಾನ, ಗುಜರಾತ್ (0.695) ಎರಡನೇ ಸ್ಥಾನ ಉಳಿಸಿಕೊಂಡವು. ಈ ತಂಡಗಳು ಮೇ 26ರಂದು ನಡೆಯುವ ಮೊದಲ ಕ್ವಾಲಿಫೈಯರ್ನಲ್ಲಿ ಮುಖಾಮುಖಿಯಾಗಲಿವೆ.

ಸನ್ರೈಸರ್ಸ್ ತಂಡವು ತಮ್ಮ ಕೊನೆಯ ಲೀಗ್ ಪಂದ್ಯವನ್ನು 82 ರನ್ಗಳ ಅಂತರದಿಂದ ಗೆದ್ದಿದ್ದರೆ ಎರಡನೇ ಸ್ಥಾನ ಗಳಿಸುವ ಅವಕಾಶವಿತ್ತು. ಇದೀಗ ಮೂರನೇ ಸ್ಥಾನದೊಂದಿಗೆ ಅಭಿಯಾನ ಮುಗಿಸಿದ ಪ್ಯಾಟ್ ಕಮಿನ್ಸ್ (0.524) ಬಳಗವು 27ರಂದು ನಡೆಯುವ ಎಲಿಮಿನೇಟರ್ ಪಂದ್ಯವನ್ನು ಆಡಬೇಕಿದೆ.

ಮೊದಲು ಬ್ಯಾಟಿಂಗ್ ಮಾಡಿದ ಸನ್ರೈಸರ್ಸ್ ತಂಡದ ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ (56 ರನ್), ಇಶಾನ್ ಕಿಶನ್ (79 ರನ್) ಮತ್ತು ಹೆನ್ರಿಚ್ ಕ್ಲಾಸೆನ್ (51 ರನ್) ಅವರು ಅಬ್ಬರದ ಅರ್ಧಶತಕ ದಾಖಲಿಸಿದರು. ಇದರಿಂದಾಗಿ ತಂಡವು 4 ವಿಕೆಟ್ಗಳಿಗೆ 255 ರನ್ಗಳ ಬೃಹತ್ ಮೊತ್ತ ಪೇರಿಸಿತು.

ಗುರಿ ಬೆನ್ನಟ್ಟಿದ ಆರ್ಸಿಬಿ ತಂಡದ ಪರ ವೆಂಕಟೇಶ್ ಅಯ್ಯರ್ (44;19ಎ), ನಾಯಕ ರಜತ್ ಪಾಟೀದಾರ್ (56;39ಎ) ಮತ್ತು ಕೃಣಾಲ್ ಪಾಂಡ್ಯ (41;31ಎ) ಹೋರಾಟ ತೋರಿದರು. ಆದರೆ, ಅದು ಗೆಲುವಿಗೆ ಸಾಕಾಗಲಿಲ್ಲ. ತಂಡವು 4 ವಿಕೆಟ್ಗೆ 200 ರನ್ ಗಳಿಸಿ ಓವರ್ಗಳನ್ನು ಮುಗಿಸಿತು.

ಕಳೆದ ಪಂದ್ಯದಲ್ಲಿ ಮಿಂಚಿದ್ದ ವೆಂಕಟೇಶ್ ಅವರು ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರೊಂದಿಗೆ ಆರಂಭಿಕ ಆಟಗಾರನಾಗಿ ಕಣಕ್ಕಿಳಿದರು. ಅವರಿಬ್ಬರು ಮೊದಲ ವಿಕೆಟ್ಗೆ ಬಿರುಸಿನ 60 ರನ್ ಸೇರಿಸಿ ತಂಡಕ್ಕೆ ಉತ್ತಮ ಆರಂಭ ನೀಡಿದರು. ಇಶಾನ್ ಮಾಲಿಂಗ ಈ ಜೊತೆಯಾಟವನ್ನು ಮುರಿದರು. ಅದರ ಬೆನ್ನಲ್ಲೇ ಸಾಕಿಬ್ ಹುಸೇನ್ ಅವರ ಬೌಲಿಂಗ್ನಲ್ಲಿ ಕೊಹ್ಲಿ ಅವರು ಆರ್.ಸ್ಮರಣ್ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿಕೊಂಡರು.

ಆಟಕ್ಕೆ ಕುದುರುತ್ತಿದ್ದ ಕನ್ನಡಿಗ ದೇವದತ್ತ ಪಡಿಕ್ಕಲ್ (21) ಅವರೂ ನಿರಾಸೆ ಮೂಡಿಸಿದರು. 94 ರನ್ಗಳಿಗೆ 3 ವಿಕೆಟ್ ಕಳೆದುಕೊಂಡಿದ್ದ ತಂಡಕ್ಕೆ ರಜತ್ ಮತ್ತು ಕೃಣಾಲ್ ಅವರು ನಾಲ್ಕನೇ ವಿಕೆಟ್ಗೆ 84 (57ಎ) ರನ್ ಸೇರಿಸಿ ಚೇತರಿಕೆ ನೀಡುವ ಪ್ರಯತ್ನ ನಡೆಸಿದರು. ಆದರೆ, ಎದುರಾಳಿ ತಂಡದ ಬೌಲರ್ಗಳು ಪರಿಣಾಮಕಾರಿ ದಾಳಿ ಸಂಘಟಿಸಿ, ಆರ್ಸಿಬಿ ತಂಡದ ರನ್ವೇಗಕ್ಕೆ ಕಡಿವಾಣ ಹಾಕಿದರು. ಮಾಲಿಂಗ ಎರಡು ವಿಕೆಟ್ ಪಡೆದು ಮಿಂಚಿದರು.

ಸನ್ ಬ್ಯಾಟರ್ಗಳ ಅಬ್ಬರ: ಇದಕ್ಕೂ ಮೊದಲು ಟಾಸ್ ಗೆದ್ದ ಕಮಿನ್ಸ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು ಅಚ್ಚರಿ ಮೂಡಿಸಿದರು. ಆದರೆ, ಅವರ ನಿರ್ಧಾರವನ್ನು ಆರಂಭಿಕ ಬ್ಯಾಟರ್ಗಳು ಸಮರ್ಥಿಸಿಕೊಂಡರು.

ಟ್ರಾವಿಸ್ ಹೆಡ್ ಮತ್ತು ಅಭಿಷೇಕ್ ಅವರು ಮೊದಲ ವಿಕೆಟ್ ಜತೆಯಾಟದಲ್ಲಿ 45 (24ಎ) ರನ್ ಸೇರಿಸಿದರು. ರಸಿಕ್ ಸಲಾಮ್ ದಾರ್ ಅವರು ಹಾಕಿದ ನಿಖರವಾದ ಯಾರ್ಕರ್ ಎಸೆತಕ್ಕೆ ಹೆಡ್ ಅವರ ವಿಕೆಟ್ ಉರುಳಿತು. ಅಭಿಷೇಕ್ ಜೊತೆಗೂಡಿದ ಇಶಾನ್ ರನ್ ಗಳಿಕೆಯ ವೇಗವನ್ನು ಮತ್ತಷ್ಟು ಹೆಚ್ಚಿಸಿದರು. ಇಬ್ಬರ ಬೀಸಾಟಕ್ಕೆ ಬೌಲರ್ಗಳು ಬಸವಳಿದರು. ಎರಡನೇ ವಿಕೆಟ್ ಜೊತೆಯಾಟದಲ್ಲಿ ಇವರಿಬ್ಬರೂ ಸೇರಿ 26 ಎಸೆತಗಳಲ್ಲಿ 52 ರನ್ ಗಳಿಸಿದರು. ಆದರೆ ತಂಡದ ಮೊತ್ತವು 100ರ ಸನಿಹದಲ್ಲಿದ್ದಾಗ ಅಭಿಷೇಕ್ ವಿಕೆಟ್ ಗಳಿಸಿದ ಸ್ಪಿನ್ನರ್ ಸುಯಶ್ ಶರ್ಮಾ ಭರವಸೆ ಮೂಡಿಸಿದರು. ಆದರೆ ಅದು ಹುಸಿಯಾಯಿತು.

ಇಶಾನ್ ಜೊತೆಗೂಡಿದ ಹೆನ್ರಿಚ್ ಕ್ಲಾಸೆನ್ ಅವರ ಅಬ್ಬರ ಮುಗಿಲುಮುಟ್ಟಿತು. ಐದು ಸಿಕ್ಸರ್ ಮತ್ತು ಎರಡು ಬೌಂಡರಿ ಸಿಡಿಸಿದ ಹೆನ್ರಿಚ್ ಆರ್ಸಿಬಿಯ ಬೌಲರ್ಗಳ ದಿಕ್ಕು ತಪ್ಪಿಸಿದರು. ಇನ್ನೊಂದು ಬದಿಯಲ್ಲಿ ಎಡಗೈ ಬ್ಯಾಟರ್ ಇಶಾನ್ ಕೂಡ ಚೆಂಡನ್ನು ಬೌಂಡರಿ ದಾಟಿಸುವಲ್ಲಿ ಮಗ್ನರಾದರು. ಇವರಿಬ್ಬರ ಜೊತೆಯಾಟದಲ್ಲಿ 113 (48 ಎಸೆತ) ರನ್ಗಳೂ ಸೇರಿದವು.

ಕೃಣಾಲ್ ಪಾಂಡ್ಯ ಬೌಲಿಂಗ್ನಲ್ಲಿ ಕ್ಲಾಸೆನ್ ಔಟಾಗುವುದರೊಂದಿಗೆ ಜೊತೆಯಾಟ ಮುರಿಯಿತು. ಕ್ರೀಸ್ಗೆ ಬಂದ ನಿತೀಶ್ ಕುಮಾರ್ ರೆಡ್ಡಿ ಕೇವಲ 12 ಎಸೆತಗಳಲ್ಲಿ ಅಜೇಯ 29 ರನ್ ಗಳಿಸಿದರು. ಇನಿಂಗ್ಸ್ನ ಕೊನೆಯ ಎಸೆತದಲ್ಲಿ ಇಶಾನ್ ಕಿಶನ್ ಔಟಾದರು.

ಆರ್ಸಿಬಿಯ ಮೂವರು ವೇಗಿಗಳೂ (ಭುವನೇಶ್ವರ್ ಕುಮಾರ್, ಜೋಶ್ ಹೇಝಲ್ವುಡ್ ಮತ್ತು ರಸಿಕ್) ಸೇರಿ ಒಟ್ಟು 158 ರನ್ಗಳನ್ನು ಕೊಟ್ಟರು. ಅದರಲ್ಲಿ ರಸಿಕ್ ಒಬ್ಬರೇ 2 ವಿಕೆಟ್ ಗಳಿಸಿದರು.

ಸ್ಕೋರ್ ಕಾರ್ಡ್

ರಾಯಲ್ ಚಾಲೆಂಜರ್ಸ್ ಬೆಂಗಳೂರು: 4ಕ್ಕೆ 200 (20 ಓವರ್ಗಳಲ್ಲಿ)

ವೆಂಕಟೇಶ್ ಸಿ ಅಭಿಷೇಕ್ ಬಿ ಮಾಲಿಂಗ 44 (19ಎ, 4x4, 6x4)

ಕೊಹ್ಲಿ ಸಿ ಸ್ಮರಣ್ ಬಿ ಸಾಕಿಬ್ 15 (11ಎ, 4x2)

ಪಡಿಕ್ಕಲ್ ಸಿ ಅಭಿಷೇಕ್ ಬಿ ಮಾಲಿಂಗ 21 (14ಎ, 4x2, 6x1)

ಪಾಟೀದಾರ್ ಸಿ ಸ್ಮರಣ್ ಬಿ ಹೆಡ್ 56 (39ಎ, 4x6, 6x1)

ಕೃಣಾಲ್ ಪಾಂಡ್ಯ ಔಟಾಗದೇ 41 (31ಎ, 4x5)

ಟಿಮ್ ಡೇವಿಡ್ ಔಟಾಗದೇ 15 (7ಎ, 4x1, 6x1)

ಇತರೆ: 8 (ಲೆಗ್ಬೈ 2, ನೋಬಾಲ್ 1, ವೈಡ್ 5)

ವಿಕೆಟ್ ಪತನ: 1-60 (ವೆಂಕಟೇಶ್ ಅಯ್ಯರ್, 4.3), 2-74 (ವಿರಾಟ್ ಕೊಹ್ಲಿ, 5.5), 3-94 (ದೇವದತ್ತ ಪಡಿಕ್ಕಲ್, 8.5), 4–178 (ರಜತ್ ಪಾಟೀದಾರ್, 18.2)

ಬೌಲಿಂಗ್: ಪ್ಯಾಟ್ ಕಮಿನ್ಸ್ 4–0–48–0, ಇಶಾನ್ ಮಾಲಿಂಗ್ 4–0–33–2, ಶಿವಾಂಗ್ ಕುಮಾರ್ 2–0–32–0, ಸಾಕಿಬ್ ಹುಸೇನ್ 4–0–31–1, ಹರ್ಷಲ್ ಪಟೇಲ್ 4–0–37–0, ನಿತೀಶ್ ಕುಮಾರ್ ರೆಡ್ಡಿ 1–0–10–0, ಟ್ರಾವಿಸ್ ಹೆಡ್ 1–0–7–1

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.