ಜೈಪುರ: ಅಭಿಷೇಕ್ ಶರ್ಮಾ– ಇಶಾನ್ ಕಿಶಾನ್ ಅವರ ಶತಕದ ಜೊತೆಯಾಟದ ಎದುರುಹದಿನೈದು ವರ್ಷದ ಪೋರ ವೈಭವ್ ಸೂರ್ಯವಂಶಿ ಅವರ ಶತಕ ಕಳೆಗುಂದಿತು.

ಭಾನುವಾರ ನಡೆದ ಐಪಿಎಲ್ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡವು 5 ವಿಕೆಟ್ಗಳಿಂದ ರಾಜಸ್ಥಾನ ರಾಯಲ್ಸ್ ತಂಡವನ್ನು ಮಣಿಸಿತು.

ಸನ್ರೈಸರ್ಸ್ ತಂಡವು 8 ಪಂದ್ಯಗಳಲ್ಲಿ 5ನೇ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿತು. ರಾಯಲ್ಸ್ ನೆಟ್ ರನ್ರೇಟ್ ಆಧಾರದಲ್ಲಿ ನಾಲ್ಕನೇ ಸ್ಥಾನಕ್ಕೆ ಸರಿಯಿತು.

36 ಎಸೆತಗಳಲ್ಲಿ ಶತಕ ಬಾರಿಸಿದ ವೈಭವ್ ಅವರ ಆಟದಿಂದ ರಾಜಸ್ಥಾನ ರಾಯಲ್ಸ್ ತಂಡವು 20 ಓವರ್ಗಳಲ್ಲಿ 6 ವಿಕೆಟ್ಗಳಿಗೆ 228 ರನ್ ಗಳಿಸಿತು.

ಕಠಿಣ ಗುರಿ ಬೆನ್ನಟ್ಟಿದ ಸನ್ರೈಸರ್ಸ್ ತಂಡವು ಆರಂಭ ಆಟಗಾರ ಟ್ರಾವಿಸ್
ಹೆಡ್ (6; 5ಎ) ಅವರನ್ನು ಬೇಗನೆ ಕಳೆದುಕೊಂಡಿತು. ಆಗ ಜೊತೆಯಾದ ಅಭಿಷೇಕ್ ಹಾಗೂ ಇಶಾನ್ 55 ಎಸೆತ ಗಳಲ್ಲಿ 132 ರನ್ ಸೇರಿಸಿ, ಆಸರೆಯಾದರು. ಅಭಿಷೇಕ್ 29 ಎಸೆತಗಳಲ್ಲಿ 11 ಬೌಂಡರಿ, 1 ಸಿಕ್ಸರ್ ಸಹಿತ 57 ರನ್ ಸಿಡಿಸಿದರೆ, ಇಶಾನ್ 31 ಎಸೆತಗಳಲ್ಲಿ 74 ರನ್ ಸೂರೆಮಾಡಿದರು. ಅವರ ಇನಿಂಗ್ಸ್ನಲ್ಲಿ 11 ಬೌಂಡರಿ, 3 ಸಿಕ್ಸರ್ ಇದ್ದವು.

ಈ ಇಬ್ಬರು ಆಟಗಾರರು ನಿರ್ಗಮಿಸಿದ ಬಳಿಕ, ಹೆನ್ರಿಚ್ ಕ್ಲಾಸೆನ್ (29; 24ಎ) ಹಾಗೂ ಆಲ್ರೌಂಡರ್ ನಿತೀಶ್ ಕುಮಾರ್ ರೆಡ್ಡಿ (36; 18ಎ) 53 ರನ್ ಜೊತೆಯಾಟವಾಡಿ ತಂಡವನ್ನು ಗೆಲುವಿನ ಹೊಸ್ತಿಲಿಗೆ ತಂದು ನಿಲ್ಲಿಸಿದರು. ಸಲೀಲ್ ಅರೋರಾ ಗೆಲುವಿನ ಸಿಕ್ಸರ್ ಹೊಡೆದರು.

ಪ್ಯಾಟ್ ಕಮಿನ್ಸ್ ನಾಯಕತ್ವದ ಸನ್ರೈಸರ್ಸ್ ತಂಡ ಇನ್ನೂ 9 ಎಸೆತ ಬಾಕಿ ಇರುವಂತೆ 5 ವಿಕೆಟ್ಗೆ 229 ರನ್ ಹೊಡೆದು ಸಂಭ್ರಮಿಸಿತು. ಗಾಯದಿಂದ ಚೇತರಿಸಿ ಕೊಂಡು ಬಂದ ನಂತರ ಕಮಿನ್ಸ್ ಆಡಿದ ಮೊದಲ ಪಂದ್ಯ ಇದಾಗಿತ್ತು.

ಇದಕ್ಕೆ ಮೊದಲು, ಬಿಹಾರದ ಬಾಲಕ ವೈಭವ್ ಸೂರ್ಯವಂಶಿ ಶತಕದ ಆಟಕ್ಕೆ ಸನ್ರೈಸರ್ಸ್ ಬೌಲರ್ಗಳು ಬೆಚ್ಚಿದರು. ವೈಭವ್ 12 ಸಿಕ್ಸರ್. 5 ಬೌಂಡರಿ ಹೊಡೆದರು. 37 ಎಸೆತಗಳಲ್ಲಿ 103 ರನ್ ಗಳಿಸಿ ಔಟಾದರು.

ಐಪಿಎಲ್ನಲ್ಲಿ ಮೂರನೇ ಅತಿವೇಗದ ಶತಕ (36ಎ) ಇದಾಗಿದೆ. ಅಲ್ಲದೇ ಹೋದ ವರ್ಷ ಐಪಿಎಲ್ಗೆ ಪದಾರ್ಪಣೆ ಮಾಡಿದ ವೈಭವ್ ಅವರಿಗೆ ಎರಡನೇ ಶತಕ ಇದು.

ವೈಭವ್ ಅವರು ಹೋದ ವರ್ಷ 35 ಎಸೆತಗಳಲ್ಲಿ ಶತಕ ಗಳಿಸಿದ್ದರು. 2013ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕ್ರಿಸ್ ಗೇಲ್ ಅವರು 30 ಎಸೆತಗಳಲ್ಲಿ ಶತಕ ಬಾರಿಸಿದ್ದರು.

ಸಂಕ್ಷಿಪ್ತ ಸ್ಕೋರು:

ರಾಜಸ್ಥಾನ ರಾಯಲ್ಸ್: 20 ಓವರ್ಗಳಲ್ಲಿ 6 ವಿಕೆಟ್ಗಳಿಗೆ 228 (ವೈಭವ್ ಸೂರ್ಯವಂಶಿ 103, ಧ್ರುವ್ ಜುರೇಲ್ 51, ಡೊನೊವನ್ ಫೆರಿರಾ 33; ಇಶಾನ್ ಮಾಲಿಂಗ 38ಕ್ಕೆ2).

ಸನ್ರೈಸರ್ಸ್ ಹೈದರಾಬಾದ್: 18.3 ಓವರ್ಗಳಲ್ಲಿ 5 ವಿಕೆಟ್ಗೆ 229 (ಅಭಿಷೇಕ್ ಶರ್ಮಾ 57, ಇಶಾನ್ ಕಿಶನ್ 74, ನಿತೀಶ್ ಕುಮಾರ್ ರೆಡ್ಡಿ 36; ಜೋಫ್ರಾ ಆರ್ಚರ್ 34ಕ್ಕೆ2, ಬ್ರಿಜೇಶ್ ಶರ್ಮಾ 44ಕ್ಕೆ2).

ಪಂದ್ಯದ ಆಟಗಾರ: ಇಶಾನ್ ಕಿಶನ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.