ಶನಿವಾರ, ಜೂನ್ 19, 2021
22 °C

ಶ್ರೀಲಂಕಾ ಏಕದಿನ ತಂಡಕ್ಕೆ ಪೆರೇರ ನಾಯಕ

ರಾಯಿಟರ್ಸ್‌ Updated:

ಅಕ್ಷರ ಗಾತ್ರ : | |

Prajavani

ರಾಯಿಟರ್ಸ್‌: ಕುಶಲ್ ಪೆರೇರ ಅವರನ್ನು ಶ್ರೀಲಂಕಾ ಏಕದಿನ ಕ್ರಿಕೆಟ್ ತಂಡದ ನಾಯಕನ್ನಾಗಿ ಬುಧವಾರ ನೇಮಕ ಮಾಡಲಾಗಿದೆ. ತಂಡದಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡಲಾಗಿದ್ದು ಮಾಜಿ ನಾಯಕರಾದ ದಿಮುತ್ ಕರುಣರತ್ನೆ ಮತ್ತು ಏಂಜೆಲೊ ಮ್ಯಾಥ್ಯೂಸ್ ಅವರನ್ನು ಕೈಬಿಡಲಾಗಿದೆ.

ಎರಡು ವರ್ಷಗಳಲ್ಲಿ ವಿಶ್ವಕಪ್‌ ಟೂರ್ನಿ ನಡೆಯಲಿರುವ ಹಿನ್ನೆಲೆಯಲ್ಲಿ ಈ ಬದಲಾವಣೆ ಕ್ರಿಕೆಟ್ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಕರುಣರತ್ನೆ ಅವರನ್ನು ಟೆಸ್ಟ್ ತಂಡದ ನಾಯಕನಾಗಿ ಮುಂದುವರಿಸಲಾಗಿದೆ. ಅವರ ನೇತೃತ್ವದಲ್ಲಿ ಮಾರ್ಚ್‌ ತಿಂಗಳಲ್ಲಿ ನಡೆದ ವೆಸ್ಟ್ ಇಂಡೀಸ್ ಎದುರಿನ ಸರಣಿಯನ್ನು ಶ್ರೀಲಂಕಾ 3–0ಯಿಂದ ಗೆದ್ದುಕೊಂಡಿತ್ತು. 

ಪ್ರಮೋದಯ ವಿಕ್ರಮಸಿಂಘೆ ನೇತೃತ್ವದ ಹೊಸ ಆಯ್ಕೆ ಸಮಿತಿ 18 ಆಟಗಾರರನ್ನು ಒಳಗೊಂಡ ತಂಡವನ್ನು ಆರಿಸಿದ್ದು ಆಲ್‌ರೌಂಡರ್ ಏಂಜೆಲೊ ಮ್ಯಾಥ್ಯೂಸ್ ಅವರನ್ನು ಕೈಬಿಡುವ ದಿಟ್ಟ ನಿರ್ಧಾರವನ್ನೂ ಕೈಗೊಂಡಿದೆ. ತಂಡವು ಈ ತಿಂಗಳಾಂತ್ಯದಲ್ಲಿ ಬಾಂಗ್ಲಾದೇಶ ಎದುರು ಮೂರು ಪಂದ್ಯಗಳ ಸರಣಿಯನ್ನು ಆಡಲಿದೆ.

ಯುವ ಆಟಗಾರರಿಗೆ ಆಯ್ಕೆ ಸಮಿತಿ ಆದ್ಯತೆ ನೀಡಿದ್ದು ಕುಶಲ್ ಮೆಂಡಿಸ್ ಅವರನ್ನು ಉಪನಾಯಕನಾಗಿ ನೇಮಕ ಮಾಡಿದೆ. ಪೆರೇರ, ಐದು ವರ್ಷಗಳಲ್ಲಿ ಏಕದಿನ ತಂಡದ ಒಂಬತ್ತನೇ ನಾಯಕ ಆಗಿದ್ದಾರೆ. 

ಏಕದಿನ ತಂಡ: ಕುಶಲ್ ಪೆರೇರ (ನಾಯಕ), ಕುಶಲ್ ಮೆಂಡಿಸ್, ಧನುಷ್ಕ ಗುಣತಿಲಕ, ಧನಂಜಯ ಡಿ ಸಿಲ್ವಾ, ಪಾಥುಮ್ ನಿಸಂಕ, ದಾಸುನ್ ಶನಕ, ಆಶೆನ್ ಬಂಡಾರ, ವನಿಂದು ಹಸರಂಗ, ಇಸುರು ಉಡಾನ, ಅಖಿಲ ಧನಂಜಯ, ನಿರೋಷನ್ ಡಿಕ್ವೆಲ್ಲ, ದುಷ್ಮಂತ ಚಮೀರ, ರಮೇಶ್ ಮೆಂಡಿಸ್‌, ಅಸಿತ ಫೆರ್ನಾಂಡೊ, ಲಕ್ಷಣ್ ಸಂಡಗನ್, ಚಮಿಕ ಕರುಣರತ್ನೆ, ಬಿನುರ ಫೆರ್ನಾಂಡೊ, ಶಿರಾನ್ ಫೆರ್ನಾಂಡೊ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು