ಕರುಣಾರತ್ನೆಗೆ ₹4.79 ಲಕ್ಷ ದಂಡ

ಶನಿವಾರ, ಏಪ್ರಿಲ್ 20, 2019
31 °C
ಕುಡಿದು ವಾಹನ ಚಾಲನೆ

ಕರುಣಾರತ್ನೆಗೆ ₹4.79 ಲಕ್ಷ ದಂಡ

Published:
Updated:
Prajavani

ಕೊಲಂಬೊ: ಕುಡಿದು ವಾಹನ ಚಾಲನೆ ಮತ್ತು ಅಪಘಾತ ಮಾಡಿದ ಆರೋಪದ ಮೇಲೆ ಬಂಧಿತರಾಗಿದ್ದ ಶ್ರೀಲಂಕಾ ಟೆಸ್ಟ್‌ ಕ್ರಿಕೆಟ್ ತಂಡದ ನಾಯಕ ದಿಮುತ ಕರುಣಾರತ್ನೆ ಅವರಿಗೆ ಶ್ರೀಲಂಕಾ ಕ್ರಿಕೆಟ್‌ ಮಂಡಳಿಯು ಬುಧವಾರ ₹4.79 ಲಕ್ಷ ದಂಡ ವಿಧಿಸಿದೆ.

‘ಆಟಗಾರ ಒಪ್ಪಂದ ನಿಯಾಮವಳಿಯನ್ನು ಉಲ್ಲಂಘಿಸಿದ್ದಾರೆ. ಆದ್ದರಿಂದಾಗಿ ದಂಡ ವಿಧಿಸಲಾಗಿದೆ’ ಎಂದು ಮಂಡಳಿ ಸ್ಪಷ್ಟಪಡಿಸಿದೆ.

ಹೋದ ತಿಂಗಳು ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಎರಡು ಟೆಸ್ಟ್‌ ಸರಣಿಯಲ್ಲಿ  ಕರುಣಾರತ್ನೆ ನೇತೃತ್ವದ ಶ್ರೀಲಂಕಾ ತಂಡವು ಜಯಿಸಿತ್ತು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !