ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಂಕಾ ವಿಶ್ವಕಪ್‌ ತಂಡದಲ್ಲಿ ಚಾಂಡಿಮಲ್‌ ಇಲ್ಲ

ಕರುಣರತ್ನೆಗೆ ನಾಯಕತ್ವದ ಹೊಣೆ: ಯುವ ಆಟಗಾರರಾದ ಆವಿಷ್ಕ ಫರ್ನಾಂಡೊ, ನುವಾನ್‌ ಪ್ರದೀಪ್‌ಗೆ ಅವಕಾಶ
Last Updated 18 ಏಪ್ರಿಲ್ 2019, 15:52 IST
ಅಕ್ಷರ ಗಾತ್ರ

ಕೊಲೊಂಬೊ: ವಿಶ್ವಕಪ್‌ಗೆ ದಿಮುತ್‌ ಕರುಣರತ್ನೆ ನಾಯಕತ್ವದ 15 ಆಟಗಾರರ ತಂಡವನ್ನು ಶ್ರೀಲಂಕಾ ಕ್ರಿಕೆಟ್‌ ಸಂಸ್ಥೆ ರಚಿಸಿದೆ.

ಬುಧವಾರ ತಂಡದ ಆಯ್ಕೆಯನ್ನು ಪ್ರಕಟಿಸಿರುವ ಸಂಸ್ಥೆ, ಅಚ್ಚರಿಯ ಬದಲಾವಣೆಗಳನ್ನು ಮಾಡಿದೆ. ದಿನೇಶ್‌ ಚಾಂಡಿಮಲ್‌,ವಿಕೆಟ್‌ ಕೀಪರ್ ನಿರೋಷನ್ ಡಿಕ್ವೆಲ್ಲ, ಸ್ಪಿನ್ನರ್‌ ಅಖಿಲ ಧನಂಜಯ, ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಧನುಷ್ಕ ಗುಣತಿಲಕ ಮತ್ತು ಉಪುಲ್‌ ತರಂಗ ಅವರನ್ನು ಕೈಬಿಟ್ಟಿದೆ.

ಕಳೆದ ವರ್ಷದಿಂದ ಏಕದಿನ ತಂಡದಲ್ಲಿ ಸ್ಥಾನ ಪಡೆಯದ ಲಾಹಿರು ತಿರಿಮನ್ನೆ, ಆಲ್‌ರೌಂಡರ್‌ಗಳಾದ ಮಿಲಿಂದ ಸಿರಿವರ್ಧನ, ಜೀವನ್‌ ಮೆಂಡಿಸ್‌ ಮತ್ತು ಲೆಗ್‌ ಸ್ಪಿನ್ನರ್‌ ಜೆಫ್ರಿ ವಂಡರ್ಸೆ ಅವಕಾಶ ನೀಡಿದೆ.

ಲಸಿತ್‌ ಮಾಲಿಂಗ ಮತ್ತು ಕರುಣರತ್ನೆ ಅವರ ನಡುವೆ ನಾಯಕತ್ವಕ್ಕಾಗಿ ಪೈಪೋಟಿ ನಡೆದಿತ್ತು. ಆಯ್ಕೆ ಸಮಿತಿ ಅಂತಿಮವಾಗಿ ದಿಮುತ್‌ ಕರುಣರತ್ನೆ ಅವರಿಗೆ ಮಣಿ ಹಾಕಿದೆ.ಯುವ ಆಟಗಾರರಾದ ಆವಿಷ್ಕ ಫರ್ನಾಂಡೊ ಮತ್ತು ನುವಾನ್‌ ಪ್ರದೀಪ್‌ ಅವರೂ ಸ್ಥಾನ ಪಡೆದಿದ್ದಾರೆ.

ವಿಶ್ವಕಪ್‌ ತಂಡ: ದಿಮುತ್‌ ಕರುಣರತ್ನೆ (ನಾಯಕ), ಲಸಿತ್‌ ಮಾಲಿಂಗ, ಏಂಜಲೊ ಮ್ಯಾಥ್ಯೂಸ್, ತಿಸಾರ ಪೆರೇರ, ಕುಶಾಲ್ ಪೆರೇರ, ಧನಂಜಯ ಡಿಸಿಲ್ವ, ಕುಶಾಲ್‌ ಮೆಂಡಿಸ್, ಇಸುರು ಉದಾನ, ಮಿಲಿಂದ ಸಿರಿವರ್ಧನ, ಆವಿಷ್ಕ ಫರ್ನಾಂಡೊ, ಜೀವನ್‌ ಮೆಂಡಿಸ್‌, ಲಾಹಿರು ತಿರಿಮನ್ನೆ, ಜೆಫ್ರಿ ವಾಂಡರ್ಸೆ, ನುವಾನ್‌ ಪ್ರದೀಪ್‌, ಸುರಂಗ ಲಕ್ಮಲ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT