ಶನಿವಾರ, ಸೆಪ್ಟೆಂಬರ್ 18, 2021
24 °C

IND vs SL T20: ಶ್ರೀಲಂಕಾ ಗೆಲುವಿಗೆ 133 ರನ್‌ ಗುರಿ ನೀಡಿದ ಭಾರತ

ಪಿಟಿಐ Updated:

ಅಕ್ಷರ ಗಾತ್ರ : | |

ಕೊಲಂಬೊ: ಶಿಖರ್ ಧವನ್ ನಾಯಕತ್ವದ ಭಾರತ ತಂಡವು ಬುಧವಾರ ಇಲ್ಲಿ ಶ್ರೀಲಂಕಾ ಎದುರಿನ ಎರಡನೇ ಟಿ20 ಪಂದ್ಯದಲ್ಲಿ ಸಾಧಾರಣ ಮೊತ್ತ ಗಳಿಸಿತು.

ಟಾಸ್ ಗೆದ್ದ ಶ್ರೀಲಂಕಾ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಭಾರತ ತಂಡವು 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 132 ರನ್ ಗಳಿಸಿತು.

ಇಂಗ್ಲೆಂಡ್‌ಗೆ ತೆರಳಿದ ಪೃಥ್ವಿ ಶಾ ಬದಲಿಗೆ  ಋತುರಾಜ್ ಗಾಯಕವಾಡ್ ಪದಾರ್ಪಣೆ ಮಾಡಿದರು. ಶಿಖರ್ (40; 42ಎ, 5ಬೌಂಡರಿ)ಜೊತೆಗೆ ಇನಿಂಗ್ಸ್ ಆರಂಭಿಸಿದರು. ಮೊದಲ ವಿಕೆಟ್‌ಗೆ ಇಬ್ಬರೂ 49 ರನ್‌ ಸೇರಿಸಿದರು. ಋತುರಾಜ್ ಏಳನೇ ಓವರ್‌ನಲ್ಲಿ ಔಟಾದರು.

ಇದೇ ಪಂದ್ಯದಲ್ಲಿ ಪದಾರ್ಪಣೆ ಮಾಡಿದ ಕರ್ನಾಟಕದ ದೇವದತ್ತ ಪಡಿಕ್ಕಲ್ (29; 23ಎ) ಶಿಖರ್ ಜೊತೆಗೆ ಇನಿಂಗ್ಸ್‌ಗೆ ಬಲ ತುಂಬುವ ಪ್ರಯತ್ ಮಾಡಿದರು. ಆದರೆ, ರನ್‌ ಗಳಿಕೆ ವೇಗವಾಗಿರಲಿಲ್ಲ. ಶ್ರೀಲಂಕಾದ ಬೌಲರ್‌ಗಳು ಉತ್ತಮ ದಾಳಿ ನಡೆಸಿದರು. ಒಟ್ಟು ಎಂಟು ಮಂದಿ ಬೌಲಿಂಗ್ ಮಾಡಿದರು. 

13ನೇ ಓವರ್‌ನಲ್ಲಿ ಶಿಖರ್ ಔಟಾದರು. ಅದರ ನಂತರ ರನ್‌ರೇಟ್ ನಿಧಾನವಾಯಿತು. ಇದರಿಂದಾಗಿ ಕೊನೆಯ ಏಳು ಓವರ್‌ಗಳಲ್ಲಿ 30 ರನ್‌ಗಳು ಮಾತ್ರ. ದೇವದತ್ತ 16ನೇ ಓವರ್‌ನಲ್ಲಿ ಔಟಾದರು.

ಇಡೀ ಇನಿಂಗ್ಸ್‌ನಲ್ಲಿ ಧವನ್ ಐದು, ಋತುರಾಜ್ ಮತ್ತು ದೇವದತ್ತ ತಲಾ ಒಂದು ಬೌಂಡರಿ ಹೊಡೆದರು. ದೇವದತ್ತ ಒಂದು ಸಿಕ್ಸರ್ ಕೂಡ ದಾಖಲಿಸಿದರು. ಆದರೆ, ನಂತರ ಬಂದ ಸಂಜು ಸ್ಯಾಮ್ಸನ್, ನಿತೀಶ್ ರಾಣಾ, ಭುವನೇಶ್ವರ್ ಕುಮಾರ್ ಮತ್ತು ನವದೀಪ್ ಸೈನಿ ಒಂದೂ ಬೌಂಡರಿ ಗಳಿಸಲಿಲ್ಲ.

ಶ್ರೀಲಂಕಾ ತಂಡದ ಅಖಿಲ ಧನಂಜಯ ಎರಡು ವಿಕೆಟ್ ಗಳಿಸಿದರು. 

ಈ ಪಂದ್ಯವು ಮಂಗಳವಾರ ನಡೆಯಬೇಕಿತ್ತು. ಆದರೆ, ಭಾರತ ತಂಡದ ಆಲ್‌ರೌಂಡರ್ ಕೃಣಾಲ್ ಪಾಂಡ್ಯಗೆ ಕೋವಿಡ್ ಸೋಂಕು ಖಚಿತವಾಗಿತ್ತು. ಆದ್ದರಿಂದ ಪಂದ್ಯವನ್ನು ಬುಧವಾರಕ್ಕೆ ಮುಂದೂಡಲಾಗಿತ್ತು.

ಕೃಣಾಲ್ ಪಾಂಡ್ಯ ಅವರನ್ನು ಪ್ರತ್ಯೇಕವಾಸದಲ್ಲಿರಸಲಾಗಿದೆ. ಬಿಸಿಸಿಐ ವೈದ್ಯಕೀಯ ತಂಡವು ಅವರ ಆರೋಗ್ಯದ ಕುರಿತು ನಿಗಾ ವಹಿಸಿದೆ. ಕೃಣಾಲ್ ಸಂಪರ್ಕಕ್ಕೆ ಬಂದ ಕೆಲವರನ್ನು ಆರ್‌ಟಿಪಿಸಿಆರ್ ಪರೀಕ್ಷೆಗೊಳಪಡಿಸಲಾಗಿದೆ.

ಇದನ್ನೂ ಓದಿ... ಸಿಎಂ ಆಗಿ ಬೊಮ್ಮಾಯಿ ಅಧಿಕಾರ: ಸಾಮಾಜಿಕ ಜಾಲತಾಣಗಳಲ್ಲಿ ಮೀಮ್‌ಗಳ ಅಬ್ಬರ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು