ಹೆಚ್ಚು ಡಾಟ್ ಬಾಲ್ ಹಾಕುವುದು ಮುಖ್ಯ: ಪ್ಯಾಟ್ ಕಮಿನ್ಸ್ 

ಸೋಮವಾರ, ಜೂನ್ 17, 2019
31 °C

ಹೆಚ್ಚು ಡಾಟ್ ಬಾಲ್ ಹಾಕುವುದು ಮುಖ್ಯ: ಪ್ಯಾಟ್ ಕಮಿನ್ಸ್ 

Published:
Updated:
Prajavani

ಟಾಂಟನ್: ನಿಗದಿಯ ಓವರ್‌ಗಳ ಕ್ರಿಕೆಟ್‌ ಪಂದ್ಯಗಳಲ್ಲಿ ಡಾಟ್ ಬಾಲ್‌ಗಳನ್ನು(ಒಂದು ರನ್ ದಾಖಲಾಗದ ಎಸೆತ) ಹೆಚ್ದು ಹಾಕಬೇಕು. ಅದರಿಂದ ಎದುರಾಳಿ ತಂಡದ ಬ್ಯಾಟ್ಸ್‌ಮನ್‌ಗಳ ಮೇಲೆ ಒತ್ತಡ ಹೆಚ್ಚಿಸಬಹುದು ಎಂದು ಆಸ್ಟ್ರೇಲಿಯಾ ತಂಡದ ವೇಗದ ಬೌಲರ್ ಪ್ಯಾಟ್ ಕಮಿನ್ಸ್‌ ಹೇಳಿದ್ದಾರೆ.

ಪಾಕಿಸ್ತಾನ ಎದುರಿನ ಪಂದ್ಯದಲ್ಲಿ ಮೂರು ವಿಕೆಟ್ ಗಳಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

‘ಕಳೆದ ಕೆಲವು ವರ್ಷಗಳಿಂದ ನನ್ನ ಬೌಲಿಂಗ್‌ನಲ್ಲಿ ಉತ್ತಮ ಸುಧಾರಣೆ ಆಗಿವೆ.  ಲೈನ್ ಮತ್ತು ಲೆಂಗ್ತ್‌ ನಲ್ಲಿ ಶಿಸ್ತಿನ ದಾಳಿ ಮಾಡುತ್ತಿರುವುದು ಫಲ ನೀಡಿದೆ. ವಿಕೆಟ್ ಪಡೆಯದಿದ್ದರೂ ಬ್ಯಾಟ್ಸ್‌ಮನ್‌ಗಳಿಗೆ ಹೆಚ್ಚು ರನ್‌ ಮಾಡಲು ಅವಕಾಶ ನೀಡಬಾರದು’ ಎಂದು ಹೇಳಿದರು.

‘ಸಿಂಗಲ್ಸ್ ಗಳನ್ನು ಹೆಚ್ಚು ಬಿಟ್ಟುಕೊಟ್ಟರೆ ತಂಡಕ್ಕೆ 300ರ ಮೊತ್ತ ಗಳಿಸುವುದು ಸುಲಭಸಾಧ್ಯವಾಗುತ್ತದೆ. ಬೌಂಡರಿ, ಸಿಕ್ಸರ್‌ಗಳನ್ನು ನಿಯಂತ್ರಿಸಲು ಸಾಧ್ಯವಿದೆ. ಅದಕ್ಕಿಂತ ಒಂಟಿ ಮತ್ತು ಎರಡು ರನ್‌ಗಳನ್ನು ತಡೆಯುವುದು ಮುಖ್ಯವಾಗುತ್ತದೆ’ ಎಂದರು.

ಬುಧವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯಾ ತಂಡವು ಡೇವಿಡ್ ವಾರ್ನರ್ (107 ರನ್) ಶತಕದ ಬಲದಿಂದ 307 ರನ್ ಗಳಿಸಿತು. ಗುರಿ ಬೆನ್ನಟ್ಟಿದ  ಪಾಕ್ ತಂಡವು 45.4 ಓವರ್‌ಗಳಲ್ಲಿ 266 ರನ್ ಗಳಿಸಿ ಆಲೌಟ್ ಆಗಿತ್ತು. ಆಸ್ಟ್ರೇಲಿಯಾ 41 ರನ್‌ಗಳಿಂದ ಗೆದ್ದಿತ್ತು.

‘ಫೀಲ್ಡಿಂಗ್ ಲೋಪಗಳನ್ನು ತಿದ್ದಿಕೊಳ್ಳುವ ಅಗತ್ಯವಿದೆ’: ಸರ್ಫರಾಜ್
ಟಾಂಟನ್ (ಪಿಟಿಐ): ಮುಂದಿನ ಪಂದ್ಯದಲ್ಲಿ ಭಾರತ ತಂಡವನ್ನು ಸೋಲಿಸಬೇಕಾದರೆ ಫೀಲ್ಡಿಂಗ್‌ ಬಲಪಡಿಸುವ ಅಗತ್ಯವಿದೆ ಎಂದು ಪಾಕಿಸ್ತಾನ ತಂಡದ ನಾಯಕ ಸರ್ಫರಾಜ್ ಅಹಮದ್ ಹೇಳಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಸೋತ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕ್ಯಾಚ್‌ಗಳನ್ನು ಕೈಚೆಲ್ಲಿದರೆ ದೊಡ್ಡ ಬೆಲೆ ತೆರಬೇಕಾಗುತ್ತದೆ. ಪಂದ್ಯದಲ್ಲಿ ನಮ್ಮ ಫೀಲ್ಡಿಂಗ್ ಕಳಪೆಯಾಗಿತ್ತು. ಇದು ಬೇಸರ ತರಿಸಿದೆ. ಸುಧಾರಣೆ ಮಾಡಿಕೊಳ್ಳಲು ಹೆಚ್ಚು ಶ್ರಮಿಸಬೇಕಿದೆ’ ಎಂದರು.

‘ಪಂದ್ಯದಲ್ಲಿ ಮೊಹಮ್ಮದ್ ಅಮೀರ್ ಅವರು ಉತ್ತಮವಾಗಿ ಬೌಲಿಂಗ್ ಮಾಡಿದ್ದರು. ಅವರು ವಿಶ್ವದರ್ಜೆಯ ಬೌಲರ್ ಆಗಿದ್ದಾರೆ. ಅವರು ಲಯಕ್ಕೆ ಬಂದಿರುವುದು ಮುಂದಿನ ಪಂದ್ಯಗಳಿಗೆ ಸಿದ್ಧವಾಗಲು ತಂಡಕ್ಕೆ ಆತ್ಮವಿಶ್ವಾಸ ಹೆಚ್ಚಿಸಿದೆ. ಆದರೆ ನಮ್ಮ ಬೌಲಿಂಗ್ ಪಡೆಯುವ ಆರಂಭದಲ್ಲಿಯೇ ಹೆಚ್ಚು ರನ್‌ ಬಿಟ್ಟುಕೊಡದಿದ್ದರೆ 270–280 ರನ್‌ಗಳ ಮೊತ್ತಕ್ಕೆ ತಂಡವನ್ನು ಕಟ್ಟಿಹಾಕಬಹುದಿತ್ತು’ ಎಂದರು.

‘ಬ್ಯಾಟಿಂಗ್‌ನಲ್ಲಿಯೂ ನನಗೆ ನಿರಾಶೆ ಕಾಡಿತು. ಕೇವಲ 15 ಎಸೆತಗಳ ಅಂತರದಲ್ಲಿ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿದ್ದು ಸೋಲಿಗೆ ಕಾರಣವಾಯಿತು’ ಎಂದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !