ಗುರುವಾರ , ಆಗಸ್ಟ್ 22, 2019
27 °C

ಕ್ರಿಕೆಟ್‌: ಸರಣಿ ಕ್ಲೀನ್‌ ಸ್ವೀಪ್‌ ಮಾಡಿದ ಲಂಕಾ

Published:
Updated:
Prajavani

ಕೊಲಂಬೊ: ಏಂಜೆಲೊ ಮ್ಯಾಥ್ಯೂಸ್‌ (87; 90ಎ, 8ಬೌಂ, 1ಸಿ) ಮತ್ತು ಕುಶಾಲ್‌ ಮೆಂಡಿಸ್‌ (54; 58ಎ, 5ಬೌಂ, 1ಸಿ) ಅವರ ಅರ್ಧಶತಕಗಳ ಬಲದಿಂದ ಶ್ರೀಲಂಕಾ ತಂಡ ಬಾಂಗ್ಲಾದೇಶ ಎದುರಿನ ಮೂರನೇ ಏಕದಿನ ಪಂದ್ಯದಲ್ಲಿ 122ರನ್‌ಗಳಿಂದ ಜಯಭೇರಿ ಮೊಳಗಿಸಿದೆ. ಇದರೊಂದಿಗೆ 3–0ಯಿಂದ ಸರಣಿ ಕ್ಲೀನ್‌ ಸ್ವೀಪ್‌ ಮಾಡಿದೆ.

ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಪ್ರಕಟಿಸಿರುವ ಹಿರಿಯ ಕ್ರಿಕೆಟಿಗ ನುವಾನ್‌ ಕುಲಶೇಖರ ಅವರಿಗೆ ಗೆಲುವಿನ ವಿದಾಯವನ್ನೂ ತಂಡ ನೀಡಿದೆ.

ಸಂಕ್ಷಿಪ್ತ ಸ್ಕೋರ್‌: ಶ್ರೀಲಂಕಾ: 50 ಓವರ್‌ಗಳಲ್ಲಿ 8 ವಿಕೆಟ್‌ಗೆ 294 (ದಿಮುತ್‌ ಕರುಣಾರತ್ನೆ 46, ಕುಶಾಲ್‌ ಪೆರೇರಾ 42, ಕುಶಾಲ್‌ ಮೆಂಡಿಸ್‌ 54, ಏಂಜೆಲೊ ಮ್ಯಾಥ್ಯೂಸ್‌ 87, ದಸುನ್‌ ಶನಕ 30, ಶೆಹಾನ್‌ ಜಯಸೂರ್ಯ 13; ಸೈಫುಲ್‌ ಇಸ್ಲಾಂ 68ಕ್ಕೆ3, ರುಬೆಲ್‌ ಹೊಸೈನ್‌ 55ಕ್ಕೆ1, ತೈಜುಲ್‌ ಇಸ್ಲಾಂ 34ಕ್ಕೆ1, ಸೌಮ್ಯ ಸರ್ಕಾರ್‌ 56ಕ್ಕೆ3).

ಬಾಂಗ್ಲಾದೇಶ: 36 ಓವರ್‌ಗಳಲ್ಲಿ 172 (ಅನಾಮುಲ್‌ ಹಕ್‌ 14, ಸೌಮ್ಯ ಸರ್ಕಾರ್‌ 69, ಮುಷ್ಫಿಕುರ್‌ ರಹೀಮ್‌ 10, ತೈಜುಲ್‌ ಇಸ್ಲಾಂ ಔಟಾಗದೆ 39;  ಕಸುನ್‌ ರಜಿತಾ 17ಕ್ಕೆ2, ಅಖಿಲ ಧನಂಜಯ 44ಕ್ಕೆ1, ದಸುನ್‌ ಶನಕ 27ಕ್ಕೆ3, ವಾನಿದು ಹಸರಂಗ 16ಕ್ಕೆ1, ಲಾಹಿರು ಕುಮಾರ 26ಕ್ಕೆ2).

ಫಲಿತಾಂಶ: ಶ್ರೀಲಂಕಾ ತಂಡಕ್ಕೆ 122ರನ್‌ ಗೆಲುವು ಹಾಗೂ ಸರಣಿ ಕ್ಲೀನ್‌ ಸ್ವೀಪ್‌ (3–0) ಸಾಧನೆ.

‍ಪಂದ್ಯ ಮತ್ತು ಸರಣಿ ಶ್ರೇಷ್ಠ: ಏಂಜೆಲೊ ಮ್ಯಾಥ್ಯೂಸ್‌.

Post Comments (+)